ಬಿಜೆಪಿಯವರು ಶ್ರೀರಾಮುಲುರನ್ನು ಮತಕ್ಕಾಗಿ ಬಳಸಿಕೊಂಡು ಬಿಸಾಕುತ್ತಿದ್ದಾರೆ- ತಂಗಡಗಿ

Koppal : 2014ರ ಲೋಕಸಭಾ ಚುನಾವಣಾ ವೇಳೆ ಮತದಾರರು ಮೋದಿ ಬಗ್ಗೆ ಏನೇನೋ ಆಸೆಗಳನ್ನು ಕಟ್ಟಿಕೊಂಡಿದ್ದರು. ಆದರೆ 5 ವರ್ಷ ಆಡಳಿತಾ ಅವಧಿಲ್ಲಿ ಮೋದಿ ಯಾವೊಂದು ಭರವಸೆಗಳನ್ನು ಈಡೇರಿಸಲಿಲ್ಲ. ಮೋದಿ ಒಬ್ಬ ಸುಳ್ಳುಗಾರ ಹಾಗೂ ಮೋಸಗಾರ ಎನ್ನುವುದು ಜನರಿಗೆ ಗೊತ್ತಾಗಿದೆ. ಈ ಸಲ ಕಾಂಗ್ರೆಸ್ ಗೆಲುವು ಖಚಿತ ಎಂದು ಶಿವರಾಜ್ ತಂಗಡಗಿ ಭವಿಷ್ಯ ನುಡಿದರು. ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತಾಡಿ, ಇದೆ ಏ.19 ಹಾಗೂ 21ಕ್ಕೆ ಕೊಪ್ಪಳ ಲೋಕಸಭೆ ಕ್ಷೇತ್ರದ ಸಿರಗುಪ್ಪಾ ಹಾಗೂ

ಶ್ರೀರಾಮನಗರದಲ್ಲಿ ಪ್ರಚಾರ ಸಮಾವೇಶ ಇದೆ, ಏ.19 ಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಆಗಮಿಸಲಿದ್ದಾರೆ. ಏ. 21ರಂದು ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಹಾಗೂ ರಾಜ್ಯದ ಡಿಸಿಎಂ ಪರಮೇಶ್ವರ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಭಾಗವಹಿಸಲಿದ್ದಾರೆ ಎಂದರು.ಎನ್‍ಡಿಎ ಸರಕಾರ ರಚನೆಗೆ ಚಂದ್ರಬಾಬು ನಾಯ್ಡು ಅವರ ಮೈತ್ರಿ ಅಂದು ತುಂಬಾ ಅಗತ್ಯವಿತ್ತು. ಹಾಗಾಗಿ ಮೋದಿ ಅವರು ಚಂದ್ರಬಾಬು ನಾಯ್ಡು ಅವರಿಗೆ ಇಲ್ಲಸಲ್ಲದ ಆಶ್ವಾಸನೆ ನೀಡಿ ಮೈತ್ರಿ ಮಾಡಿಕೊಂಡಿದ್ದರು. ನಂತರ ಮೋದಿ ಒಬ್ಬ ಸುಳ್ಳುಗಾರ ಅಂತ ತಿಳಿದು ಮೋದಿಯಿಂದ ಯಾವುದೇ ಕೆಲಸ ಆಗುವುದಿಲ್ಲ ಎಂದು ಮೈತ್ರಿ ಮುರಿದುಕೊಂಡು ಹೊರಬಂದರು. ಚಂದ್ರಬಾಬು ನಾಯ್ಡು ಅವರು ಯಾವುದೇ ಜಾತಿಗೆ ಸೀಮಿತವಾಗಿಲ್ಲ ಹಾಗಾಗಿ ಅವರನ್ನು ಪ್ರಚಾರಕ್ಕೆ ಕರೆಸುತ್ತಿದ್ದೇವೆ ಎಂದು ತಿಳಿಸಿದರು.
ಈ ದೇಶದಲ್ಲಿರುವ ಎಲ್ಲಾ ವಿಮಾನ ನಿಲ್ದಾಣಗಳನ್ನು ಕಾಂಗ್ರೆಸ್ ಅಧಿಕಾರದಲ್ಲಿ ಕಟ್ಟಿಸಲಾಗಿದೆ. ಇಂದು ಬಿಜೆಪಿಯವರು ಮನೆಯಲ್ಲೆ ಕುಳಿತು ಮೆಸೆಜ್ ಮಾಡುವ ಮೊಬೈಲ್ ಕೂಡ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಾಜೀವ್ ಗಾಂಧಿಯವರು ಪರಿಚಯಿಸಿದ್ದು. ಬಿಜೆಪಿಯವರು ನೋಡುವ ಟೀವಿಗಳನ್ನು ಕೂಡ ಇಂಧಿರಾಗಾಂಧಿಯವರ ಕಾಲದಲ್ಲೇ ತಯಾರು ಮಾಡಲಾಗಿದೆ. ಆದರೆ ಬಿಜೆಪಿ ಏನೂ ಮಾಡದೆ, ಬರೀ ಬಡಾಯಿ ಕೊಚ್ಚಿಕೊಳ್ಳುತ್ತಿದೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು. ಸಿಟಿ ರವಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ತಂಗಡಗಿ, ಸಿಟಿ ರವಿ ಹಾಗೂ ಬಿಜೆಪಿಯವರ ಸಂಸ್ಕಾರ, ಸಂಸ್ಕೃತಿ ಎಂಥದ್ದು ಎನ್ನುವುದು ಗೊತ್ತಾಗುತ್ತೆ, ಬಿಜೆಪಿಯವರ ಬಾಯಲ್ಲಿ ಬರೀ ಇಂಥ ಮಾತುಗಳೆ ಬರುತ್ತವೆ. ಅವರು ಜನಗಳ ಮೇಲೆ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಹರಿಹಾಯ್ದರು. ಬಿಜೆಪಿಯವರಿಗೆ ಬೆಳೆದವರನ್ನು ತುಳಿಯುವ ಸಂಸ್ಕೃತಿ ಅಂಟಿಕೊಂಡಿದೆ. ಆ ಪರಿಪಾಠವನ್ನು ಬೆಳೆಸಿಕೊಂಡು ಬಂದಿದ್ದಾರೆ. ಶಾಸಕ ಶ್ರೀರಾಮುಲು ಮುಗ್ದರು, ಅವರನ್ನು ಬಿಜೆಪಿಯವರು ಮತಕ್ಕಾಗಿ ಬಳಸಿಕೊಂಡು ಬಿಸಾಕುತ್ತಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಶ್ರೀರಾಮುಲು ಡಿಸಿಎಂ ಹಾಗೂ ಯಡಿಯೂರಪ್ಪ ಸಿಎಂ ಎಂದರು. ಮಾಡಿದ್ರಾ? ಬಿಜೆಪಿಯಲ್ಲಿ ಬಹುಮತ ಇಲ್ಲದಿದ್ದರೂ ಯಡಿಯೂರಪ್ಪ ಸಿಎಂ ಪ್ರಮಾಣ ವಚನ ಸ್ವೀಕರಿಸಿದರು, ಶ್ರೀರಾಮುಲುನನ್ನು ಏಕೆ ಡಿಸಿಎಂ ಮಾಡಲಿಲ್ಲ. ಕೊನೆಗೆ ಯಡಿಯೂರಪ್ಪ ವಿರೋಧ ಪಕ್ಷದ ನಾಯಕರಾದ್ರು, ಕೊನೆ ಪಕ್ಷ ಶ್ರೀರಾಮುಲುನನ್ನು ವಿರೋಧ ಪಕ್ಷದ ಉಪನಾಯಕನಾದ್ರೂ ಮಾಡಬಹುದಿತ್ತಲ್ಲ. ತುಳಿಯುವುದಷ್ಟೆ ಬಿಜೆಪಿಯವರ ಕೆಲಸ. ಬಿಜೆಪಿ ಹಿರಿಯ ನಾಯಕರಾದ ಅಡ್ವಾಣಿ, ಮುರಳಿ ಮನೋಹರ ಜೋಶಿ ಅವರು ಹಿಂದೆ ಪಾದಯಾತ್ರೆ ಮಾಡಿ ಬಿಜೆಪಿ ಪಕ್ಷವನ್ನು ಕಟ್ಟಿದವರು, ಇಂದು ಅವರ ಪರಿಸ್ಥಿತಿ ಹೇಗಾಗಿದೆ? ಮೋದಿ ಅವರನ್ನು ಮೂಲೆಗುಂಪು ಮಾಡಿದ್ದಾರೆ ಎಂದು ಆರೋಪಿಸಿದರು. ಸಂಗಣ್ಣನ ವಿರುದ್ಧ ಬಸವರಾಜ ಹಿಟ್ನಾಳ ಅವರು ಯಾವುದನ್ನೂ ಗೆದ್ದಿಲ್ಲ, ಬಸವರಾಜ ಹಿಟ್ನಾಳ ಮಕ್ಕಳ ವಿರುದ್ಧ ಸಂಗಣ್ಣ ಏನೂ ಗೆದ್ದಿಲ್ಲ ಹೀಗಾಗಿ ಈ ಸಲ ಸಂಗಣ್ಣನ ವಿರುದ್ಧ ರಾಜಶೇಖರ್ ಹಿಟ್ನಾಳ ಅವರು 1.50ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ ಅಚಿತ ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಬಸವರಾಜ ಹಿಟ್ನಾಳ, ಭಟ್, ಕಾಟನ್ ಪಾಶ್ ಇದ್ದರು.

Please follow and like us:
error