ಬಿಜೆಪಿಯವರು ಜನರ ಭಾವನೆಗಳನ್ನು ಕೆರಳಿಸುತ್ತಿದ್ದಾರೆ – ಇಕ್ಬಾಲ್ ಅನ್ಸಾರಿ

ಗಂಗಾವತಿ : ಬಿಜೆಪಿಯವರು ಅಧಿಕಾರಕ್ಕೆ ಬಂದ ಮೇಲೆ ದೇಶದ ಜನರ ನೆಮ್ಮದಿ ಮಾಯವಾಗಿದೆ ಎಂದು ಮಾಜಿ ಶಾಸಕ ಇಕ್ಕಾಲ್ ಅನ್ಸಾರಿ ಶನಿವಾರ ಹೇಳಿದರು ನಗರದ ಅನ್ಸಾರಿಯವರ ಮನೆಯಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು , ಬಿಜೆಪಿಯವರು ಬಂದ ಮೇಲೆ ಪ್ರಧಾನ ಮಂತ್ರಿ ಹುದ್ದೆಗೆ ಕೆಟ್ಟ ಹೆಸರು ಬಂದಿದೆ ಎಂದು ಹೇಳಿದರು . ದೇಶದಲ್ಲಿ ಜಗಳ ಹಚ್ಚುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿ ದ್ದಾರೆ . ಜನರ

ಭಾವನೆಗಳನ್ನ ಕೆರಳಿಸು ವಂತೆ ಮಾಡುತ್ತಿದ್ದಾರೆ . ಇದಕ್ಕೆ ನೇರ ಕಾರಣ ಪ್ರಧಾನಿ ಮೋದಿ ಎಂದರು . ಮೋದಿ ಪ್ರಚಾರ ಪ್ರಿಯರು ಏನು ಕೆಲಸ ಮಾಡಿಲ್ಲ . ಜೊತೆಗೆ ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ಬಾಯಿ ಬಿಟ್ಟರೆ ನಾನು ಸಾಕಷ್ಟು ಕೆಲಸ ಮಾಡಿರುವೇ ಎಂದು ಹೇಳುತ್ತಾರೆ . ಅವರ ಕೊಡುಗೆ ಗಂಗಾವತಿಗೆ ಏನು ಎಂಬುದನ್ನ ಲೆಕ್ಕ ಕೊಡಲಿ ಎಂದು ಸವಾಲು ಹಾಕಿದರು . ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಮಾಜಿ ಸಚಿವ ಶಿವರಾಜ್ ತಂಗಡಗಿ ಮಾತನಾಡಿ ಬಿಜೆಪಿ ವಿರುದ್ದ ಹರಿಹಾಯ್ದರು . ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 160 ಕ್ಕಿಂತ ಹೆಚ್ಚು ಸೀಟು ಗೆಲ್ಲಲ್ಲ . ಐದು ವರ್ಷಗಳಲ್ಲಿ ದೇಶ ಅಭಿವೃದ್ಧಿಯತ್ತ ಹೆಜ್ಜೆ ಹಾಕಿದೆ ಎಂದು ಹೇಳುವ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಏನೂ ಕೆಲಸ ಆಗಿದೆ ಎಂದು ಅವರು ಮತದಾರರಿಗೆ ನೀಡಲಿ ಎಂದು ಹೇಳಿದರು . ಕೇಂದ್ರದಲ್ಲಿ ಈ ಬಾರಿ ಕಾಂಗ್ರೆಸ್ ಸರ್ಕಾರ ಬಂದ್ರೆ ದೇಶದ 25 ಕೋಟಿ ಬಿಪಿಎಲ್ ಕುಟುಂಬಗಳಿಗೆ ಪ್ರತಿ ತಿಂಗಳು 6 ಸಾವಿರವನ್ನ ನೀಡ್ತಿವಿ ಎಂದು ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿಯಾದ ರಾಜಶೇಖರ ಹಿಟ್ನಾಳರನ್ನು ಬಹುಮತದಿಂದ ಗೆಲ್ಲಿಸಬೇಕು , ಕಾರ್ಯಕರ್ತರು ಪ್ರತಿಯೊಬ್ಬರು ಚುನಾವಣೆಯಲ್ಲಿ ಸೈನಿಕರಂತೆ ಕೆಳಸ ಮಾಡಿ ಎಂದು ಕರೆ ನೀಡಿದರು . ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಮಾತನಾಡಿ ಎಲ್ಲರ ಮನವೊಲಿಸಿ , ರಾಜಶೇಖರ ಹಿಟ್ ಗೆ ಟಿಕೆಟ್ ನೀಡಲಾಗಿದೆ . ಜಿಲ್ಲೆಯ ಎಲ್ಲಾ ಕ್ಷೇತ್ರಗಳ ಕಾರ್ಯಕರ್ತರು ಅತ್ಯಂತ ಉತ್ಸಾಹದಿಂದ ಇದ್ದಾರೆ ಎಂದು ಹೇಳಿದರು . ಮಾಜಿ ಶಾಸಕರಾದ ಬಸವರಾ ಹಿಟ್ನಾಳ , ಹಸನ್ ಸಾಬ್ ದೊಟಿಹಾಳ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿಶ್ವನಾಥ ರೆಡ್ಡಿ ಜಿಲ್ಲಾ ಪಂಚಾಯಿತಿ ಸದಸ್ಮ ಅಮರೇಶ್ ಗೋನಾಳ್,ನಗರಸಭೆ ಸದಸ್ಯ ಶ್ಯಾಮಿದ್ ಮನಿಯಾರ ಸೇರಿದಂತೆ ಪಕ್ಷದ ಕಾರ್ಯಕರ್ತರು ಇದ್ದರು

Please follow and like us:
error