ಬಿಎಸ್ಸೆನ್ನೆಲ್, ಎಂಟಿಎನ್‍ಎಲ್‍ನ 92,000ಕ್ಕೂ ಅಧಿಕ ಉದ್ಯೋಗಿಗಳಿಂದ ಸ್ವಯಂ ನಿವೃತ್ತಿಗೆ ಅರ್ಜಿ

ಹೊಸದಿಲ್ಲಿ: ಬಿಎಸ್ಸೆನ್ನೆಲ್ ಹಾಗೂ ಎಂಟಿಎನ್‍ಎಲ್‍ನ 92,000ಕ್ಕೂ ಅಧಿಕ ಉದ್ಯೋಗಿಗಳು ಇಲ್ಲಿಯ ತನಕ ಸ್ವಯಂ ನಿವೃತ್ತಿ ಯೋಜನೆ (ವಿಆರ್‌ಎಸ್) ಗೆ ಅರ್ಜಿ ಸಲ್ಲಿಸಿದ್ದಾರೆ.

ಬಿಎಸ್ಸೆನ್ನೆಲ್ ಸಂಸ್ಥೆಯ ಒಟ್ಟು ಸುಮಾರು 1.5 ಲಕ್ಷ ಉದ್ಯೋಗಿಗಳ ಪೈಕಿ ಸುಮಾರು 1 ಲಕ್ಷ ಮಂದಿ ಸರಕಾರ ಘೋಷಿಸಿದ ವಿಆರ್‌ಎಸ್ ಪ್ರಯೋಜನ ಪಡೆಯಲು ಅರ್ಹರಾಗಿದ್ದಾರೆ. ಈ ಯೋಜನೆಯಂತೆ ವಿಆರ್‌ಎಸ್ ಜನವರಿ 31, 2020ರಂದು ಜಾರಿಗೆ ಬರುತ್ತದೆ.

ಸರಕಾರ ಇತ್ತೀಚೆಗೆ ಜಾರಿಗೊಳಿಸಿದ ಬಿಎಸ್ಸೆನ್ನೆಲ್ ವಿಆರ್‌ಎಸ್ 2019 ಯೋಜನೆ ಡಿಸೆಂಬರ್ 3ರ ತನಕ ಊರ್ಜಿತದಲ್ಲಿರಲಿದ್ದು, ನಷ್ಟದಲ್ಲಿರುವ ಬಿಎಸ್ಸೆನ್ನೆಲ್ ಗೆ ರೂ. 7,000 ಕೋಟಿಯಷ್ಟು ವೇತನವನ್ನು ಉಳಿಸುವ ಉದ್ದೇಶವನ್ನು ಸರಕಾರ ಈ ಮೂಲಕ ಹೊಂದಿದೆ.

ಐವತ್ತು ವರ್ಷಗಳಿಗೆ ಮೇಲ್ಪಟ್ಟ ಬಿಎಸ್ಸೆನ್ನೆಲ್ನ ಎಲ್ಲಾ ಉದ್ಯೋಗಿಗಳು ವಿಆರ್‌ಎಸ್ ಪ್ರಯೋಜನ ಪಡೆಯಲು ಅರ್ಹರು.

Please follow and like us:
error