ಬಾಳಪ್ಪ ಬಾರಕೇರ್ ನಿಧನ ಗಂಗಾಮತ ಸಮಾಜಕ್ಕೆ ತುಂಬಲಾರದ ನಷ್ಟ- ಬಿ.ಮೌಲಾಲಿ


ಕೊಪ್ಪಳ : ಗಂಗಾಮತ ಸಮಾಜದ ಜಿಲ್ಲಾಧ್ಯಕ್ಷರಾದ ಬಾಳಪ್ಪ ಬಾರಕೇರ ಅವರ ನಿಧನ ಇಡೀ ಸಮಾಜಕ್ಕೆ ತುಂಬಲಾರದಷ್ಟು ನಷ್ಟವಾಗಿದೆ ಎಂದು ಗಂಗಾಮತ ಸಮಾಜದ ರಾಜ್ಯ ಅಧ್ಯಕ್ಷರಾದ ಬಿ. ಮೌಲಾಲಿ ಅವರು ಹೇಳಿದರು. ಅವರು ಸೋಮುವಾರದಂದು ಇತ್ತಿಚ್ಛಿಗೆ ನಿಧನರಾದ ಬಾಳಪ್ಪ ಬಾರಕೇರ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ಹೇಳಿದರು ಸಂತಾಪ ಸೂಚಿಸಿದರು. ಇದೇ ವೇಳೆ ಮಾತನಾಡಿದ ಅವರು, ಬಾಳಪ್ಪ ಬಾರಕೇರ ಅವರು ಹಿಂದುಳಿದ ನಮ್ಮ ಗಂಗಾಮತ ಸಮಾಜದ ಏಳಿಗೆಗಾಗಿ ತಮ್ಮ ಜೀವನುದ್ದಕ್ಕೂ ಶ್ರಮಿಸಿದ್ದರು. ಅಲ್ಲದೇ ಗಂಗಾಮತ ಸಮಾಜವಲ್ಲದೆ ನಗರಸಭೆಯ ಸದಸ್ಯರಾಗಿ ಚುನಾಯಿತರಾಗುವ ಮೂಲಕ ಸರ್ವಧರ್ಮದ ಜನರ ಸಮಸ್ಯೆಗಳಿಗೆ ಸ್ಪಂದಿಸುವುದ ಮೂಲಕ ಕೊಪ್ಪಳ ಜಿಲ್ಲೆಯ ಅಚ್ಚುಮೆಚ್ಚಿನ ಜನನಾಯಕರಾಗಿದ್ದು, ಆದರೆ ಅವರ ಅಕಾಲಿಕ ಮರಣ ಕೊಪ್ಪಳ ಜಿಲ್ಲಾ ಗಂಗಾಮತ ಸಮಾಜಕ್ಕೆ ತುಂಬಲಾರದ ನ?ವಾಗಿದೆ ಎಂದರು. ಈ ಸಂದರ್ಭದಲ್ಲಿ ಗಂಗಾಮತ ಸಮಾಜದ ಮಾಜಿ ರಾಜ್ಯ ಉಪಾಧ್ಯಕ್ಷರಾದ ರಾಜಶೇಖರಪ್ಪ ಮು?ರ್, ಕೊಪ್ಪಳ ತಾಲೂಕು ಗಂಗಾಮತ ಸಮಾಜದ ಅಧ್ಯಕ್ಷರಾದ ಸೋಮಣ್ಣ ಬಾರಕೇರ, ಮಾಜಿ ತಾಲೂಕ ಅಧ್ಯಕ್ಷರಾದ ಬೇವಿನ ಹನುಮಂತಪ್ಪ, ನಾಗರತ್ನ ಹುಲಿಗಿ, ಯಲಬುರ್ಗಾ ಮಾಜಿ ಅಧ್ಯಕ್ಷರಾದ ರಾಮಣ್ಣ ಕೌದಿ, ಕಾರಟಗಿ ತಾಲೂಕು ಅಧ್ಯಕ್ಷರಾದ ಸಂಘಟಿ ಅಯ್ಯಪ್ಪ, ಕಲ್ಲೂರು ವಿರುಪಣ್ಣ, ಕನಕಗಿರಿ ತಾಲೂಕು ಅಧ್ಯಕ್ಷರಾದ ಹುಲಗಪ್ಪ , ಗಂಗಾವತಿ ನಗರಸಭಾ ಸದಸ್ಯರಾದ ಪರಶುರಾಮ ಮಡ್ಡೇರ್, ಮುದ್ಲಾಪುರ ವಿರುಪಾಕ್ಷಿ ಹನುಮೇಶ್ ಭಟಾರಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಗಂಗಾವತಿ ತಾಲೂಕ ಅಧ್ಯಕ್ಷರಾದ ರಾಜಶೇಖರ್ ಕನಕಗಿರಿ ಧನಂಜಯ, ಕನಕಪ್ಪ ಕನಕಗಿರಿ, ಯಲಬುರ್ಗಾ ಫಕೀರಪ್ಪ, ಕಂಪಸಾಗರ ಮಂಜುನಾಥ್, ಕೃ? ಬೇವಿನಾಳ, ಸಮಾಜದ ಹಿರಿಯರು ಯುವಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

Please follow and like us:
error