ಬಾಲಿವುಡ್ ಸಿನೆಮಾಗಳ ಗಳಿಕೆ ಚೆನ್ನಾಗಿದೆ, ದೇಶದಲ್ಲಿ ಆರ್ಥಿಕ ಬಿಕ್ಕಟ್ಟಿಲ್ಲ ಎಂಬ ಹೇಳಿಕೆ ಹಿಂಪಡೆದ ಸಚಿವ ರವಿಶಂಕರ್

ಮುಂಬೈ,  : ಬಾಲಿವುಡ್‌ನ ಮೂರು ಸಿನೆಮಾಗಳು ಬಿಡುಗಡೆಯಾದ ಮೊದಲ ದಿನವೇ 120 ಕೋ.ರೂ. ಸಂಗ್ರಹಿಸಿರುವ ಕಾರಣ ದೇಶದಲ್ಲಿ ಆರ್ಥಿಕ ಬಿಕ್ಕಟ್ಟಿಲ್ಲ ಎಂಬ ತನ್ನ ವಿಲಕ್ಷಣ ಹೇಳಿಕೆಯನ್ನು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ರವಿವಾರ ಹಿಂದೆ ಪಡೆದಿದ್ದಾರೆ.

ಟ್ವಿಟರ್‌ನಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಸಾದ್,‘‘ಬಾಲಿವುಡ್ ಚಿತ್ರಗಳ ಗಳಿಕೆಯು ವಾಸ್ತವವಾಗಿ ಸರಿಯಾಗಿದೆ. ನನ್ನ ಸಾಮಾಜಿಕ ಮಾಧ್ಯಮದಲ್ಲಿ ನಾನು ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯ ಸಂಪೂರ್ಣ ವೀಡಿಯೋ ಲಭ್ಯವಿದೆ. ನನ್ನ ಹೇಳಿಕೆಯ ಒಂದು ಭಾಗವನ್ನು ಸಂಪೂರ್ಣ ತಿರುಚಿರುವುದನ್ನು ನಾನು ಗಮನಿಸಿದ್ದು, ಓರ್ವ ಸೂಕ್ಷ್ಮ ವ್ಯಕ್ತಿವಾಗಿ ಈ ಹೇಳಿಕೆಯನ್ನು ಹಿಂಪಡೆಯುತ್ತೇನೆ’’ ಎಂದು ಟ್ವೀಟ್ ಮಾಡಿದ್ದಾರೆ.

ವಿಶ್ವ ಸ್ಪರ್ಧಾತ್ಮಕ ಸೂಚ್ಯಂಕ ವರದಿಯಲ್ಲಿ ಭಾರತ 10 ಸ್ಥಾನ ಕೆಳ ಜಾರಿರುವ ಸಂದರ್ಭದಲ್ಲಿ ಪ್ರಸಾದ್ ಈ ಹೇಳಿಕೆಯನ್ನು ನೀಡಿದ್ದರು.

Please follow and like us:
error