ಬಾಬೂಜಿ ಭಾರತದ ರಾಜನೀತಿಯ ಸಿಂಹ-ಹಾಲೇಶ ಕಂದಾರಿ

Koppal ಒಂದು ಶೋಷಿತ ಕುಟುಂಬದಲ್ಲಿ ಜನಿಸಿ ಭಾರತದ ಉಪಪ್ರಧಾನಿಯಾಗಿ,ಸ್ವಾತಂತ್ರ್ಯ ಹೋರಾಟಗಳಲ್ಲಿ ಭಾಗವಹಿಸಿ, ಅಸ್ಪೃಶ್ಯ ತೆಯನ್ನು ಅನುಭವಿಸಿ ಅದರ ವಿರುದ್ದ ಧ್ವನಿ ಎತ್ತಿ ಉನ್ನತ ಸ್ಥಾನಕ್ಕೆ ಏರಿದ ಭಾರತದ ರಾಜನೀತಿಯ ಸಿಂಹ ಡಾ.ಬಾಬು ಜಗಜೀವನ ರಾಂರವರಾಗಿದ್ದರು ಎಂದು ಯುವ ನಾಯಕರಾದ ಹಾಲೇಶ ಕಂದಾರಿ ಮಾತನಾಡಿದರು.

ಕೊಪ್ಪಳದ ಬಸವೇಶ್ವರ ನಗರದಲ್ಲಿ ಜರುಗಿದ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ ರಾಂ ಜಯಂತಿಯಲ್ಲಿ ಮಾತನಾಡಿದರು.

ವಿಶ್ವದ ಇತಿಹಾಸದಲ್ಲಿ‌ ಸುದೀರ್ಘಕಾಲ ಲೋಕಸಭಾ ಸದಸ್ಯರಾಗಿ ಸತತ 25 ವರ್ಷಗಳ ಕಾಲ ಆಹಾರ ಮಂತ್ರಿ,ರಕ್ಷಣಾ ಮಂತ್ರಿ ಬೇರೆ ಬೇರೆ ಇಲಾಖೆಗಳ ಮಂತ್ರಿಗಳಾಗಿ ಸೇವೆ ಸಲ್ಲಿಸಿ ದೇಶ ಅಪಾರ ಕೊಡುಗೆಯನ್ನು ನೀಡಿದ್ದಾರೆ.ವಿಶೇಷವಾಗಿ ಬಾಬಾ ಸಾಹೇಬರು ಕಂಡ ಕನಸುಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರಯತ್ನ ಪಟ್ಟಿದ್ದಾರೆ.

ಇಂದಿರಾಗಾಂಧಿಯವರ ತುರ್ತು ಪರಿಸ್ಥಿತಿಯಲ್ಲಿ ದೇಶವನ್ನು ಮುನ್ನಡೆಸಿದ ಕೀರ್ತಿ ಬಾಬೂಜಿಯವರಿಗೆ ಸಲ್ಲುತ್ತದೆ.ಶೋಷಿತರ ಹಕ್ಕುಗಳಿಗಾಗಿ,ದೇಶದ ಸೇವೆಗಾಗಿ ಸುದೀರ್ಘ ಸೇವೆ ಸಲ್ಲಿಸಿ, ವಿವಿಧ ರಂಗಗಳಲ್ಲಿ ದೇಶವನ್ನು ಅಭಿವೃದ್ದಿ ಪಥದಲ್ಲಿ ನಡೆಸಿದ ಆಧುನಿಕ ಭಾರತದ ಆಢಳಿತಗಾರ ಬಾಬೂಜಿ ಎಂದು ಮಾತನಾಡಿದರು.ಮಹಾನ್ ನಾಯಕರಾದ ಬಾಬು ಜಗಜೀವನರಾಂ ರವರಿಗೆ ಇಲ್ಲಿಯವರೆಗೂ ಭಾರತರತ್ನ ಲಭಿಸದೇ ಇರುವದು ಅವರ ಅಪಾರ ಅಭಿಮಾನಿಗಳಿಗೆ ನೋವುಂಟಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಗರಸಭೆಯ ಸದಸ್ಯರಾದ ಯಲ್ಲಮ್ಮ ರಮೇಶ ಗಿಣಗೇರಿ, ಶಿವಪ್ಪ ಗಿಣಗೇರಿ, ಹನುಮಂತಪ್ಪ ಮ್ಯಾಗಳಮನಿ, ಸಿದ್ದಪ್ಪ ಕಿಡದಾಳ,ರಮೇಶ ಗಿಣಗೇರಿ,ಪ್ರಭುರಾಜ ಕಿಡದಾಳ,ಗವಿಸಿದ್ದಪ್ಪ ಗಿಣಗೇರಿ,ಕಾಶಪ್ಪ ಅಳ್ಳಳ್ಳಿ, ಉಪೇಂದ್ರ ಹೊಸಪೇಟ್, ಮೈಲಪ್ಪ ಬಿಸರಳ್ಳಿ, ಮಂಜುನಾಥ ಹಳ್ಳಿಕೇರಿ, ಪ್ರಕಾಶ ಕಿಡದಾಳ,ಪ್ರವೀಣ ಕಂದಾರಿ ಇದ್ದರು

Please follow and like us:
error