ಬಾಜಪೇಯಿ ಚಪ್ಪಲಿ ಸಂಗ್ರಹಿಸಿದ್ದರಂತೆ ಬಾಲಿವುಡ್ ನಟ ಪಂಕಜ್ ತ್ರಿಪಾಠಿ

‘ನಮ್ಮಪ್ಪನಿಗೆ ಟ್ರ್ಯಾಕ್ಟರ್ ಖರೀದಿಸುವ ಆರ್ಥಿಕ ಸಬಲತೆ ಇದ್ದಿದ್ದರೆ, ನಾನಿವತ್ತು ಇಲ್ಲಿ ಕೂರುತ್ತಿರಲಿಲ್ಲ. ಊರಲ್ಲಿ ಇರ್ತಿದ್ದೆ, ಟ್ರ್ಯಾಕ್ಟರ್ ಡ್ರೈವರ್ ಆಗಿರ್ತಿದ್ದೆ’.

ಸಂದರ್ಶನ ನಡೆಸುತ್ತಿದ್ದ ನಿರೂಪಕಿಯ ಪ್ರಶ್ನೆಯೊಂದಕ್ಕೆ ಹೀಗೆ ಉತ್ತರಿಸಿದ್ದರು ಬಾಲಿವುಡ್ ನಟ ಪಂಕಜ್ ತ್ರಿಪಾಠಿ.

ಅದೇ ಸಂದರ್ಶನದಲ್ಲಿ ಪಂಕಜ್ ಅವರ ಪಕ್ಕ ಕೂತಿದ್ದ ಅವರ ಪತ್ನಿ, ಪತಿಯ ಉತ್ತರಕ್ಕೆ ಅನುಮೋದನೆ ನೀಡುವವರಂತೆ ಮುಖ ನೋಡಿ, ದೊಡ್ಡದಾಗಿ ನಕ್ಕಿದ್ದರು.

ನಟ ಪಂಕಜ್ ತ್ರಿಪಾಠಿ ತಾರಾ ಮೆರುಗು ಇದ್ದವರಲ್ಲ. ಆತನಿಗೆ ಅದು ಬೇಕಾಗೂ ಇಲ್ಲ. ಯಾವಾಗಲೂ ಸೌಜನ್ಯದ ನಡವಳಿಕೆ.‌ ಸದಾ ಮಿತಭಾಷೆ. ಇಂತಹ ಪಂಕಜ್ ಅವರನ್ನು ಕಂಡವರಿಗಷ್ಟೇ ಅಲ್ಲದೆ, ಅವರೇ ಹೇಳಿಕೊಂಡಂತೆ ಇರುವುದೊಂದೇ ಅಸಮಾಧಾನ; ಬರೀ ಗ್ಯಾಂಗ್ ಸ್ಟರ್ ಪಾತ್ರಗಳಷ್ಟೇ ಏಕೆ ಹೆಚ್ಚಾಗಿ ಸಿಗುತ್ತವೆ ಏಕೆ‌ ಎಂಬುದು ?

ಅನುರಾಗ್ ಕಶ್ಯಪ್‌ ನಿರ್ದೇಶನದ ‘ಗ್ಯಾಂಗ್ಸ್ ಆಫ್ ವಾಸೇಪುರ್’ ಸಿನಿಮಾ ಬಾಲಿವುಡ್ ಸಿನಿಮಾದ ದೆಸೆ ಬದಲಿಸಿದ ಸಿನಿಮಾಗಳಲ್ಲೊಂದು. ಆ ಚಿತ್ರವನ್ನು ನೋಡಿದವರು ಪಂಕಜ್ ಅವರ ‘ಸುಲ್ತಾನ್ ‘ ಪಾತ್ರವನ್ನು ಅಷ್ಟು ಸರಳವಾಗಿ ಎಂದೂ ಮರೆಯಲಾರರು. ಅಸಲಿಗೆ ‘…….. ವಾಸೇಪುರ್’ ಚಿತ್ರ ಆರಂಭವಾಗುವುದೇ ಪಂಕಜ್ ತ್ರಿಪಾಠಿ ಅವರ ಅಭಿನಯದ ದೃಶ್ಯದ ಮೂಲಕ.

ಆದರೆ, ಅಂತಹ ಪಾತ್ರ ಬದುಕಿದ ಪಂಕಜ್ ತ್ರಿಪಾಠಿ ಅಭಿನಯಕ್ಕಿಂತ, ನೈಜ ಜೀವನದಲ್ಲಿನ ಮಿತ ಮಾತುಗಳ ಕಾರಣಕ್ಕೆ ಗಳಿಸಿದ ಹೆಸರು ದೊಡ್ಡದು.
ಪಂಕಜ್ ತ್ರಿಪಾಠಿ ‘MIRZAPUR’ ವೆಬ್ ಸಿರೀಸ್ ನಲ್ಲಿ ‘ಕಾಲೀನ್ ಭಯ್ಯಾ’ ಪಾತ್ರದಿಂದ ಗಳಿಸಿದ ಹೆಸರು ಚಿಕ್ಕದಲ್ಲವೇ ಅಲ್ಲ. ‘ Sacred Games’ ವೆಬ್ ಸಿರೀಸಲ್ಲೂ ಗಮನ ಸೆಳೆಯುವಂತಹ ಗುರೂಜಿ ಪಾತ್ರ ನಿರ್ವಹಿಸಿ, ಬರದ ಅವಕಾಶಗಳನ್ನು ಗಿಟ್ಟಿಸಿಕೊಂಡ ಮನುಷ್ಯ. ಮೊನ್ನೆ ಮೊನ್ನೆ ನೆಟ್ ಫ್ಲಿಕ್ಸ್ ಮೂಲಕ ಬಿಡುಗಡೆಯಾದ ‘Gunjan Saxena’ ಎಂಬ ಬಯೋಪಿಕ್ ಸಿನಿಮಾದಲ್ಲಿ ಪೈಲಟ್ ಹೆಣ್ಣುಮಗಳೊಬ್ಬಳ ತಂದೆಯಾಗಿ ಈತ ನಟಿಸಿದ ಪಾತ್ರ ಇದೆಯಲ್ಲ, ಅದು ಮರೆಯಲಾಗದಂಥದ್ದು. ಯಾಕೆಂದರೆ ಗುಂಜನ್ ಸಕ್ಸೇನಾ ಪಾತ್ರದಲ್ಲಿ ನಟಿಸಿದ ಜಾಹ್ನವಿ ಕಪೂರ್ ಅಭಿನಯ, ಚಿತ್ರಕಥೆಗಿಂತ ಗುಂಜನ್ ಅಪ್ಪನ ಪಾತ್ರದಲ್ಲಿ ನಟಿಸಿರುವ ಪಂಕಜ್ ಅಭಿನಯದ ಕಾರಣಕ್ಕೆ ಕೋಟ್ಯಾಂತರ ಜನ ಆ ಸಿನಿಮಾ‌ವನ್ನು ಈಗಾಗಲೇ ನೆಟ್ ಫ್ಲಿಕ್ಸ್ ಮೂಲಕವೇ ವೀಕ್ಷಣೆ ಮಾಡಿರುವುದು ಜಾಹೀರು.

ಬಾಲಿವುಡ್ ಎಷ್ಟೇ ನೆಪೋಟಿಸಂ ಉಸಿರಾಡಲಿ, ಮನೋಜ್ ಬಾಜಪೇಯಿ, ಪಂಕಜ್ ತ್ರಿಪಾಠಿ, ಸಂಜಯ್, ಪಿಯೂಶ್ ಮಿಶ್ರಾ, ಓಂ ಶುಕ್ಲಾ, ಜಾನಿ ಲಿವರ್, ರಾಜಪಾಲ್ ಯಾದವ್ ಅವರಂತಹ ಮುಂತಾದ ಪ್ರತಿಭಾವಂತ ನಟರ ನೂರಾರು ಹೆಸರುಗಳನ್ನು ಅದು ತನ್ನ ಇತಿಹಾಸದಲ್ಲಿ ಯಾವತ್ತಿಗೂ ನಮೂದಿಸಿಕೊಳ್ಳಲೇಬೇಕು.

ಅದಕ್ಕೆ ಮನೋಜ್ ಬಾಜಪೇಯಿ ‘Satya’ ಸಿನಿಮಾದಲ್ಲಿ ನಿರ್ವಹಿಸಿದ “ಭೀಕು ಮಾತ್ರೆ” ಪಾತ್ರದ ಜೊತೆಗೆ ಮೊನ್ನೆ ಮೊನ್ನೆ ಬಂದ ‘ಫ್ಯಾಮಿಲಿ ಮ್ಯಾನ್’ ವೆಬ್ ಸೀರಿಸೀನ ‘ಶ್ರೀಕಾಂತ್ ತಿವಾರಿ’ ಪಾತ್ರದ ಜೊತೆಗೆ ತದನಂತರ ಬಂದ ‘ಭೋಂಸ್ಲೆ’ ಚಿತ್ರದ ನಟನೆವರೆಗೂ ಸಹ. ಮನೋಜ್ ಬಾಜಪೇಯಿ, ಯಾವುದೇ ಅಬ್ಬರ ಇಲ್ಲದ ಬದುಕಿನ ದ್ವಂದ್ವ, ತಾಕಲಾಟ ಹೇಳುವ ‘ಭೋಂಸ್ಲೇ’ ಚಿತ್ರದ ನಿವೃತ್ತ ಕಾನ್ಸ್ಟೇಬಲ್ ಪಾತ್ರವನ್ನು ನಿರ್ವಹಿಸಿರುವ ಪರಿ ಸಹ ಮರೆಯಲಾಗದಂಥದ್ದು.
ಅದಿರಲಿ, ಅದಿಲ್ಲಿ ಅಪ್ರಸ್ತುತ.

‘ಗ್ಯಾಂಗ್ಸ್ ಆಫ್ ವಾಸೇಪುರ್’ ಚಿತ್ರಿಕರಣ ಬಿಹಾರದ ಪಾಟ್ನಾ ನಗರದಲ್ಲಿ ನಡೆದಿದ್ದ ಸಂದರ್ಭ. ಪಂಕಜ್ ತ್ರಿಪಾಠಿ ಉಳಿದಿದ್ದ ಪಾಟ್ನಾ ನಗರದ ‘ಮಯೂರ’ ಹೋಟೆಲಿಗೆ ಉಳಿದುಕೊಳ್ಳಲು ಮನೋಜ್ ಬಾಜಪೇಯಿಯವರಿಗೂ ಕೋಣೆ ಕಾಯ್ದಿರಿಸ

Siddu Satyannavar

ಲಾಗಿತ್ತಂತೆ ( ಮನೋಜ್ ‘ ಸರ್ದಾರ್ ಖಾನ್’ ಪಾತ್ರ ನಿರ್ವಹಿಸಿದರೆ, ಪಂಕಜ್ ಮೊದಲೇ‌ ಹೇಳಿದಂತೆ ‘ಸುಲ್ತಾನ್’ ಪಾತ್ರಕ್ಕೆ ನಿಕ್ಕಿಯಾಗಿದ್ದರು)
ಬಾಜಪೇಯಿ ಅಚಾನಕ್ಕಾಗಿ ಮಯೂರ ಹೋಟೆಲಿನ ರೂಮಿನಲ್ಲಿಯೇ ತಮ್ಮ ಚಪ್ಪಲಿಗಳನ್ನು ಮರೆತು, ಚೆಕ್ ಔಟ್ ಮಾಡಿದರಂತೆ. ಆಗ ಬಾಜಪೇಯಿ ಚಪ್ಪಲಿ ಆ ರೂಮಲ್ಲೇ‌ ಇದ್ದುದನ್ನ ತಿಳಿದ ಪಂಕಜ್, ಆ ಚಪ್ಪಲಿಗಳನ್ನು ರೂಂ ಬಾಯ್ ಗೆ ದುಡ್ಡು ನೀಡುವ ಮೂಲಕ ತಮ್ಮ ಬಳಿ ತರಿಸಿಕೊಂಡು ಇಟ್ಟುಕೊಂಡಿದ್ದರಂತೆ. ಕೆಲ ದಿನಗಳ ಹಿಂದಿನ ಕಪಿಲ್ ಶರ್ಮಾ ಕಾಮಿಡಿ ಶೋನಲ್ಲಿ ಪಂಕಜ್ ತ್ರಿಪಾಠಿ ಈ ಹಳೇಯದೆಲ್ಲವನ್ನು ನೆನಪಿಸಿಕೊಂಡು ಹೇಳುತ್ತ, ಎದುರು ಕೂತಿದ್ದ ಮನೋಜ್ ಬಾಜಪೇಯಿ ಕಾಲು ಮುಟ್ಟಿ ನಮಸ್ಕರಿಸಲು ಹೋಗಿದ್ದರು. ಆಗ ತ್ರಿಪಾಠಿಯವರನ್ನು ತಡೆದ ಬಾಜಪೇಯಿ ಅಪ್ಪಿಕೊಂಡು ನಕ್ಕಿದ್ದರು. ಆಗ ಮತ್ತೆ ಭಾವುಕರಾಗಿ ಮಾತನಾಡಿದ್ದ ಪಂಕಜ್ ತ್ರಿಪಾಠಿ, ಬಾಜಪೇಯಿಗೆ ಹೇಳಿದ್ದೊಂದೇ ಮಾತು ‘ನಿಮ್ಮ‌ ಮೇಲೆ ನನಗೆ ಮೊದಲಿನಿಂದಲೂ
ಅಮಿತ ಪ್ರೇಮ. ಹೀಗೆ ತೋರಿಸಿಕೊಳ್ಳಬೇಕೆನಿಸಿತು ಅಷ್ಟೇ’ ಎಂದು ಸುಮ್ಮನಾಗಿದ್ದರು. ಆಗ
ಬಾಜಪೇಯಿ ಭಾವುಕರಾಗಿದ್ದು ಸ್ಪಷ್ಟವಾಗಿತ್ತು‌‌‌‌……

Please follow and like us:
error