ಬಹಿರಂಗ ಪ್ರಚಾರಕ್ಕೆ ನಿಷೇಧ : ಮತದಾರರಲ್ಲದವರು ಕ್ಷೆÃತ್ರದಲ್ಲಿ ಉಳಿಯದಿರಲಿ

ಕೊಪ್ಪಳ ಏ. 20 :ಲೋಕಸಭಾ ಸಾರ್ವತ್ರಿಕ ಚುನಾವಣೆ-2019ರ ನಿಮಿತ್ತ ಕೊಪ್ಪಳ ಲೋಕಸಭಾ ಕ್ಷೆÃತ್ರದಲ್ಲಿ ಏಪ್ರಿಲ್. 21ರ ಸಂಜೆ 06 ಗಂಟೆಗೆ ಬಹಿರಂಗ ಪ್ರಚಾರವನ್ನು ನಿಷೇಧಿಸಲಾಗಿದ್ದು, ಈ ಕ್ಷೆÃತ್ರದ ಮತದಾರರಲ್ಲದೇ ಇರುವ ರಾಜಕೀಯ ಅಧಿಕಾರಸ್ಥರು, ಪಕ್ಷದ, ಮೆರವಣಿಗೆ ಹಾಗೂ ಪ್ರಚಾರ ಸಂಬಂಧ ಕಾರ್ಯಕರ್ತರು ಮತ್ತು ಮುಂತಾದವರು ಕೊಪ್ಪಳ ಲೋಕಸಭಾ ಕ್ಷೆÃತ್ರದಲ್ಲಿ ಉಳಿಯದಂತೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಪಿ.ಸುನೀಲ್ ಕುಮಾರ್‌ರವರು ತಿಳಿಸಿದ್ದಾರೆ.
ಲೋಕಸಭಾ ಸಾರ್ವತ್ರಿಕ ಚುನಾವಣೆ-2019ರ ಸಂಬಂಧಿಸಿದಂತೆ ಕೊಪ್ಪಳ ಲೋಕಸಭಾ ಕ್ಷೆÃತ್ರಕ್ಕೆ ಏಪ್ರಿಲ್. 23 ರಂದು ಮತದಾನ ನಡೆಯಲಿದ್ದು, ಪ್ರಜಾಪ್ರಾತಿನಿಧ್ಯ ಕಾಯ್ದೆ-1951ರ ಪ್ರಕರಣ 126 ರ ಪ್ರಕಾರ ಮತದಾನ ಮುಕ್ತಾಯಕ್ಕೆ ನಿಗದಿಪಡಿಸಿದ ಗಂಟೆಗೆ 48 ಗಂಟೆಗಳ ಪೂರ್ವದಲ್ಲಿ ಸಾರ್ವಜನಿಕ ಸಭೆಗಳ ಮುಖಾಂತರ ನಡೆಸುವ ಎಲ್ಲಾ ಚುನಾವಣಾ ಬಹಿರಂಗ ಪ್ರಚಾರವು ಅಂತ್ಯಗೊಳ್ಳತ್ತದೆ. ಅದರಂತೆ ಕೊಪ್ಪಳ ಲೋಕಸಭಾ ವ್ಯಾಪ್ತಿಯಲ್ಲಿ ಏಪ್ರಿಲ್. 21 ರಂದು ಸಾಯಂಕಾಲ 06 ಗಂಟೆಗೆ ಚುನಾವಣಾ ಬಹಿರಂಗ ಪ್ರಚಾರವನ್ನು ಎಲ್ಲಾ ಅಭ್ಯರ್ಥಿಗಳು ಮುಕ್ತಾಯಗೊಳಿಸಲೇಬೇಕಾಗಿದ್ದು, ಈ ಬಗ್ಗೆ ಜಿಲ್ಲಾ ಪೊಲೀಸ್ ಇಲಾಖೆಯು ತೀವ್ರ ನಿಗಾವಹಿಸಬೇಕೆಂದು ತಿಳಿಸಲಾಗಿದೆ.
ಲೋಕಸಭಾ ಸಾರ್ವತ್ರಿಕ ಚುನಾವಣೆಯ ಪ್ರಚಾರ ಸಮಯದಲ್ಲಿ ರಾಜಕೀಯ ಪಕ್ಷಗಳು ತಮ್ಮ ಪ್ರಚಾರ ಕಾರ್ಯ ಹೆಚ್ಚು ಯಶಸ್ವಿಯಾಗಲೆಂದು ತಮ್ಮನ್ನು ಬೆಂಬಲಿಸುವವರನ್ನು ತಮ್ಮ ಕೇತ್ರದ ಹೊರಗಿನಿಂದ ಕರೆತರುತ್ತಾರೆ. ಈ ದೃಷ್ಟಿಯಿಂದ ಪ್ರಚಾರ ಅವಧಿ ಪೂರ್ಣಗೊಂಡ ಬಳಿಕ ಹೊರಗಿನ ಮತ ಕ್ಷೆÃತ್ರದಿಂದ ಕರೆತಂದ ಮತ್ತು ಈ ಕ್ಷೆÃತ್ರದ ಮತದಾರರಲ್ಲದೇ ಇರುವ ರಾಜಕೀಯ ಅಧಿಕಾರಸ್ಥರು/ ಪಕ್ಷದ ಕಾರ್ಯಕರ್ತರು/ ಮೆರವಣಿಗೆ ಸಂಬಂಧ ಕಾರ್ಯಕರ್ತರು/ ಪ್ರಚಾರ ಕಾರ್ಯಕರ್ತರು, ಮುಂತಾದವರು ತಕ್ಷಣದಿಂದ ಈ ಕ್ಷೆÃತ್ರವನ್ನು ಬಿಟ್ಟು ಹೊರಟು ಹೋಗಿರುವುದನ್ನು ಖಚಿತಪಡಿಸಿಕೊಳ್ಳಬೇಕು.
ಹೊರಗಿನ ಮತ ಕ್ಷೆÃತ್ರದಿಂದ ಕರೆತಂದ ಮತ್ತು ಕೊಪ್ಪಳ ಲೋಕಸಭಾ ಕ್ಷೆÃತ್ರದ ಮತದಾರರಲ್ಲದೇ ಇರುವ ಜನರನ್ನು ಕಲ್ಯಾಣ ಮಂಟಪ ಅಥವಾ ಸಮುದಾಯ ಭವನಗಳು ಮುಂತಾದ ಕಡೆಗಳಲ್ಲಿ ಇರಿಸಿರುವ ಬಗ್ಗೆ ಅಥವಾ ಸ್ಥಳಾವಕಾಶ ನೀಡಲಾಗಿದೇಯೇ ಎಂಬುದರ ಬಗ್ಗೆ ಪರಿಶೀಲನೆ ಮಾಡಬೇಕು. ಅಲ್ಲದೇ ಹೋಟೆಲ್‌ಗಳು ಮತ್ತು ಅತಿಥಿಗೃಹ ಮುಂತಾದ ತಂಗುವಿಕೆ ಸ್ಥಳಗಳಲ್ಲಿ ವಾಸ್ತವ್ಯ ಹೂಡಿರುವವರ ಪಟ್ಟಿಯನ್ನೂ ಸಹ ಪರಿಶೀಲನೆ ಮಾಡಬೇಕು. ಮತ ಕ್ಷೆÃತ್ರದ ಗಡಿಗಳಲ್ಲಿ ಚೆಕ್‌ಪೋಸ್ಟ್ಗಳ ಸ್ಥಾಪನೆ ಮತ್ತು ಮತ ಕ್ಷೆÃತ್ರದ ಹೊರಗಿನಿಂದ ಬರುವ ವಾಹನ ಚಲನ ವಲನಗಳ ಮೇಲೆ ನಿಗಾವಹಿಸಲು ಸಹ ತಿಳಿಸಲಾಗಿದೆ.

Please follow and like us:
error