ಬಸ್ ಸಂಚಾರಕ್ಕೆ ಅವಕಾಶ: ಮೇ 31ರವರೆಗೆ ಯಾವ ಸೇವೆಗಳು ಲಭ್ಯ?, ಯಾವುದು ಅಲಭ್ಯ?

ಹೊಸದಿಲ್ಲಿ: ಕೊರೋನ ವೈರಸ್ ಹಿನ್ನೆಲೆಯಲ್ಲಿ ಲಾಕ್ ಡೌನ್ 4 ಮೇ 31ರವರೆಗೆ ಮುಂದುವರಿಯಲಿದ್ದು, ಕೇಂದ್ರ ಸರಕಾರ ಪ್ರಕಟಿಸಿದ ಮಾರ್ಗಸೂಚಿಗಳು ಈ ಕೆಳಗಿವೆ.

  • ರಾತ್ರಿ 7ರಿಂದ ಬೆಳಗ್ಗೆ 7ರವರೆಗೆ ಕರ್ಫ್ಯೂವನ್ನು ಮುಂದುವರಿಸಲಾಗಿದ್ದು, ಬೆಳಗ್ಗಿನ ಸಮಯದಲ್ಲಿ ಜನರ ಓಡಾಟಕ್ಕೆ ಅವಕಾಶವಿದೆ. 60 ವರ್ಷ ಮೇಲ್ಪಟ್ಟವರು ಮತ್ತು 10 ವರ್ಷ ಕೆಳಗಿನ ಮಕ್ಕಳು ಮನೆಯಿಂದ ಹೊರಹೋಗಬಾರದು ಎಂದು ತಿಳಿಸಲಾಗಿದೆ.
  • ಪ್ರಕರಣಗಳ ಆಧಾರದಲ್ಲಿ ರಾಜ್ಯ ಸರಕಾರವು ರೆಡ್, ಗ್ರೀನ್ ಮತ್ತು ಆರೆಂಜ್ ಝೋನ್ ಗಳನ್ನು ಗುರುತಿಸಬೇಕು.
  • ಅಂತರ ಮತ್ತು ಅಂತಾರಾಜ್ಯ ಬಸ್ ಮತ್ತು ಇತರ ಸಾರ್ವಜನಿಕ ಸಾರಿಗೆ ಸೇವೆಗೆ ಅವಕಾಶ ನೀಡಲಾಗಿದೆ. ಆದರೆ ಈ ಬಗ್ಗೆ ಆಯಾ ರಾಜ್ಯ ಸರಕಾರಗಳು ನಿರ್ಧರಿಸಬೇಕು.
  • ಕಂಟೈನ್ ಮೆಂಟ್ ಝೋನ್ ಗಳಲ್ಲಿ ಆರ್ಥಿಕ ಚಟುವಟಿಕೆಗಳಲ್ಲಿ ಅವಕಾಶವಿಲ್ಲ
  • ಶಾಪಿಂಗ್ ಮಾಲ್ ಗಳು ಮತ್ತು ಮಲ್ಟಿಪ್ಲೆಕ್ಸ್ ಗಳು, ಜಿಮ್ನಾಶಿಯಂ, ಸ್ವಿಮ್ಮಿಂಗ್ ಪೂಲ್, ಎಂಟರ್ ಟೈನ್ಮೆಂಟ್ ಪಾರ್ಕ್ ಗಳು, ಥಿಯೇಟರ್ ಗಳು , ಬಾರ್ ಗಳು ಮತ್ತು ಆಡಿಟೋರಿಯಂಗಳು, ಅಸೆಂಬ್ಲಿ ಮಾಲ್ ಗಳಿಗೆ ಅವಕಾಶವಿಲ್ಲ.
  • ಸಾಮಾಜಿಕ, ರಾಜಕೀಯ , ಕ್ರೀಡೆ, ಮನೋರಂಜನಾ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ
  • ಧಾರ್ಮಿಕ ಸ್ಥಳಗಳನ್ನು ಮುಚ್ಚಬೇಕು. ಧಾರ್ಮಿಕ ಸಭೆಗಳಿಗೆ ಅವಕಾಶವಿಲ್ಲ
  • ವಿಮಾನ ಯಾನ, ಮೆಟ್ರೋಗಳಿಗೆ ಅವಕಾಶವಿಲ್ಲ
  • ಶಾಲೆ, ಕಾಲೇಜುಗಳು, ಶೈಕ್ಷಣಿಕ ಮತ್ತು ಕೋಚಿಂಗ್ ಸೆಂಟರ್ ಗಳಿಗೆ ಅವಕಾಶವಿಲ್ಲ
  • ಹೊಟೇಲ್, ರೆಸ್ಟಾರೆಂಟ್ ಗಳ ಮೇಲಿನ ನಿಷೇಧ ಮುಂದುವರಿಕೆ.
Please follow and like us:
error