ಬಸಾಪುರ, ಗಿಣಿಗೇರಿ, ರಸ್ತೆ ಡಾಂಬರೀಕರಣ ಮಾಡಲು ರಸ್ತೆಯಲ್ಲಿ ಪ್ರತಿಭಟನೆ.

Koppal ತಾಲೂಕಿನ ಬಸಾಪುರ ಗ್ರಾಮದಿಂದ ಗಿಣಿಗೇರಿ ಹೋಗುವ ಮುಖ್ಯರಸ್ತೆ ಹದಗೆಟ್ಟು ಸಾಮಾನ್ಯ ಬೈಕ್ ವಾಹನ ಸವಾರರು ಕೈ ಕಾಲು ಮುರಿದುಕೊಂಡು , ಆಸ್ಪತ್ರೆ ಸೇರುವಂತಾಗಿದೆ.ಇದು ದಿನನಿತ್ಯ ಈ ಪರಿಸ್ಥಿತಿ ಇದ್ದರೂ ಅದೇ ರಸ್ತೆಯಲ್ಲಿ ಜನಪ್ರತಿನಿಧಿಧಿಗಳು ಓಡಾಡುತ್ತಿದ್ದರು ರಸ್ತೆ ಕಾಮಗಾರಿ ಕೈಗೊಳ್ಳದೇ ಇರುವುದು ಬೇಜಾಬ್ದಾರಿ ಎದ್ದು ಕಾಣುತ್ತಿದೆ. ಬಸಾಪುರದಿಂದ ಗಿಣಿಗೇರಿ ಹೋಗುವರೆಗೂ ನೀರು ತುಂಬಿರುವ ಗುಂಡಿಗಳು ಅಪಾಯಕ್ಕೆ ಜೀವಗಳನ್ನು ಬಲಿ ತೆಗೆದುಕೊಳ್ಳಲು ಬಾಯಿ ತೆರೆದಂತೆ ಕಾಣುತ್ತಿದೆ. ಬೈಕ್ ಸವಾರ ರಿಂದ ಹಿಡಿದು ಘನವಾಹನ, ಲಾರಿ ಟಿಪ್ಪರ್, ಟ್ರ್ಯಾಕ್ಟರ್, ಬಸ್ಸು ಮತ್ತು ಸಾರ್ವಜನಿಕರು ಓಡಾಡುವಂತಹ ಮುಖ್ಯರಸ್ತೆ ಇದಾಗಿದೆ. ಈ ರೀತಿ ಹದಗೆಟ್ಟಿದ್ದರೂ ಜನಪ್ರತಿನಿಧಿಗಳು ಸಂಬಂಧಪಟ್ಟ ಅಧಿಕಾರಿಗಳು ಇತ್ತಕಡೆ ಗಮನವೇ ಕೊಡುತ್ತಿಲ್ಲ ಎಂಬುದು ಸಾರ್ವಜನಿಕರ ವಿರೋಧಕ್ಕೆ ಕಾರಣವಾಗಿದೆ. ಊರಿನ ಜನರು ಹಲವು ಬಾರಿಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದರೂ ಯಾವುದೇ ದುರಸ್ತಿ ಕಾಮಗಾರಿ ಕ್ರಮವನ್ನು ಕೈಗೊಂಡಿಲ್ಲದಿರುವುದು ಅಧಿಕಾರಿಗಳ ನಿರ್ಲಕ್ಷ ಕಣ್ಮುಂದೆ ರಾಚುವಂತೆ ಕಾಣುತ್ತಿದೆ. ಮತ್ತು ಜನಪ್ರತಿನಿಧಿಗಳ ಅಧಿಕಾರ ಸಿಗುವವರೆಗೂ ಜನರಿಗೆ ನೂರಾರು ಆಶ್ವಾಸನೆಗಳು ಕೊಟ್ಟು ಚಿನ್ನದ ರಸ್ತೆಗಳನ್ನು ಮಾಡುತ್ತೇವೆ ಎಂದು ಹೇಳಿ ಇತ್ತ ಕಡೆ ತಿರುಗಿಯೂ ನೋಡುವುದಿಲ್ಲ. ಆದರೆ ಸಾಮಾನ್ಯ ಜನರು ಇಂಥ ಸಂಕಷ್ಟ ಪರಿಸ್ಥಿತಿಯನ್ನು ಎದುರಿಸುತ್ತಿರುವುದು ಮಕ್ಕಳು, ವೃದ್ಧರು ಜನಸಾಮಾನ್ಯರು  ಜೀವ ಕಳೆದುಕೊಳ್ಳು ವಂತ ದುರ್ಘಟನೆ ನಡೆಯುವ ಮುನ್ನ ಅಧಿಕಾರಿಗಳು ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ. ಈಗಾಗಲೇ ಕೈಕಾಲು ಮುರಿದು ಕೊಂಡವರ ಪರಿಸ್ಥಿತಿಗೆ ಯಾರು ಹೊಣೆ. ಅಪಘಾತಗಳು ಅನಾಹುತಗಳು ನಡೆಯುತ್ತಿದ್ದರೂ ಕಾಮಗಾರಿ ಕೈಗೊಳ್ಳದೆ ಇರುವುದು ಗ್ರಾಮದ  ಜನರಿಗೆ ಆತಂಕವನ್ನು ಸೃಷ್ಟಿ ಮಾಡಿದೆ. ಬಸಾಪುರ  ಗ್ರಾಮಸ್ಥರು ಇಂದು ರಸ್ತೆಗುಂಡಿಗಳಲ್ಲಿ ನಿಂತು ಕೊಂಡೆ ಪ್ರತಿಭಟನೆ ಮಾಡಿ ಕೂಡಲೇ ರಸ್ತೆ ನಿರ್ಮಾಣ ಮಾಡಿ, ಜನಪ್ರತಿನಿಧಿಗಳಿಗೆ ಧಿಕ್ಕಾರ, ಅಧಿಕಾರಿಗಳಿಗೆ ಧಿಕ್ಕಾರ, ಎಂದು ಘೋಷಣೆ ಕೂಗಿದರು, ಕೂಡಲೇ ಕಾಮಗಾರಿ ಮಾಡದೆ ಹೋದರೆ ರಸ್ತೆಯನ್ನು ಬಂದು ಮಾಡಿ  ಬೃಹತ್ ಹೋರಾಟವನ್ನು ಕೈಗೊಳ್ಳಲಾಗುವುದು ಜನಪ್ರತಿನಿಧಿಗಳು ಮತ್ತು ಸರ್ಕಾರಕ್ಕೆ ಎಚ್ಚರಿಕೆಯನ್ನು ಸಾಂಕೇತಿಕ ಹೋರಾಟದ ಮಾಡಿದರು.
ಇ ಸಂದರ್ಭದಲ್ಲಿ ಎಐಡಿವೈಒ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಶರಣು ಗಡ್ಡಿ , ಊರಿನ ಗ್ರಾಮಸ್ಥರಾದ ಕನಕರಾಯ, ಮಂಜಪ್ಪ, ಮಾರುತಿ, ಹನುಮೇಶ್, ಮುಂತಾದವರು ಭಾಗವಹಿಸಿದ್ದರು.
Please follow and like us:
error