ಬಸವರಾಜ್ ದಡೆಸೂಗೂರು ತಲೆಯಲ್ಲಿ ಮೆದುಳಿಲ್ಲ- ಶಿವರಾಜ್ ತಂಗಡಗಿ

ಕೊಪ್ಪಳ : ಕನಕಗಿರಿ ಶಾಸಕ ಬಸವರಾಜ

ದಡೇಸುಗೂರು ನಿಮಗೆ ತಲೆ ಕಾದಿದೆ, ನಿಮ್ಮ ಪತ್ನಿ ಅವರಿಗೆ ಮತಹಾಕಿದ್ದಾರೆ ಎಂದು ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ತಂಗಡಗಿ, ಬಸವರಾಜ ದಡೇಸುಗೂರಗೆ ತಲೆಯಲ್ಲಿ ಮೆದುಳಿಲ್ಲ. ಮೆದುಳಿದ್ರೆ ಯಾವತ್ತಿಗೂ ರಾಜಕೀಯಕ್ಕೆ ಫ್ಯಾಮಿಲಿನ ತರಬಾರದು ನನ್ನ ಪತ್ನಿ ಅವರಿಗೆ ಮತಹಾಕಿದ್ದಾರೆ ಅಂತ ಹಗುರವಾಗಿ ಮಾತನಾಡುತ್ತಾರೆ. ನಾನು ಅವರ ಕುಟಬದ ಬಗ್ಗೆ ಎಂದೂ ಮಾತಾಡಲಿಲ್ಲ‌. ನನ್ನ ಹೆಂಡತಿಗೆ ಈ ವಿಷಯಗೊತ್ತಾದ್ರೆ ಏನಾಗುತ್ತೇ? ೨೩ ವರ್ಷ ನಾನು ನನ್ನ ಪತ್ನಿ ಜೊತೆ ಸಂಸಾರ ಮಾಡಿದ್ದೀನಿ, ನನ್ನ ಪತ್ನಿ ಬಗ್ಗೆ ನನಗೆ ಗೊತ್ತಿಲ್ವಾ? ಯಾರದೇ ಸಂಸಾರದ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು. ತಲೆಯಲ್ಲಿ ಮೆದುಳು ಇದೇನೋ, ಲದ್ದಿ ಇದೇನೋ ಗೊತ್ತಿಲ್ಲ ಅಂತ ದಡೇಸುಗೂರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಕರಡಿ ಸಂಗಣ್ಣ ಅವರು ರಾಜಶೇಖರ್ ಹಿಟ್ನಾಳ ಫ್ಯಾಮಿಲಿಯನ್ನು ಸೋಲಿಸುವುದಕ್ಕೆ ತಂಗಡಗಿ, ನಾನು ನಿಲ್ಲಲಿ ಅಂತ ದೇವರಿಗೆ ಪ್ರಾರ್ಥನೆ ಮಾಡಿದ್ದಾರೆ ಅನ್ನೋ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ತಂಗಡಗಿ ನಾವು ಪ್ರಾರ್ಥನೆ ಮಾಡಿದ್ದು ನಿಜ ! ಇವ್ರು ₹ ೧೫ ಲಕ್ಷ ಅಕೌಂಟಿಗೆ ಹಾಕಿಸಿಲ್ಲ. ಹೊಸ ಅಭ್ಯರ್ಥಿ ಬಂದ್ರೆ ೩೦ ಲಕ್ಷ ಹಾಕಿಸ್ತರಾ? ಮೊದಲು ಸಂಗಣ್ಣ ಅವರು ₹ ೧೫ ಲಕ್ಷ ಹಾಕಿಸಲಿ ಅನ್ನೋದಕ್ಕೆ ಪ್ರಾರ್ಥನೆ ಮಾಡಿದ್ದು, ಇನ್ನು ಪ್ರಾಮಾಣಿಕವಾಗಿ ನಾವು ರಾಜಶೇಖರ ಹಿಟ್ನಾಳ ಅವರನ್ನು ಗೆಲ್ಲಿಸೋ ಕೆಲಸ ಮಾಡುತ್ತೇವೆ ಅಂತ ಸಂಗಣ್ಣ ಅವರಿಗೆ ಟಾಂಗ್ ನೀಡಿದರು.

ಎಂದು ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಶಿವರಾಜ ತಂಗಡಗಿ ಹೇಳಿದರು. ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಪತ್ರಿಕಾಗೋಷ್ಠಿಯಲ್ಲಿ ಅಭ್ಯರ್ಥಿ ರಾಜಶೇಖರ ಹಿಟ್ನಾಳ, ಮುಖಂಡರಾದ ಮುತ್ತುರಾಜ್ ಕುಷ್ಟಗಿ, ಕಾನ್ ಪಾಷಾ, ಶಿವಕುಮಾರ್ ಶೆಟ್ಟರ್ ಉಪಸ್ಥಿತರಿದ್ದರು.