ಬಸವಕಲ್ಯಾಣದಲ್ಲಿ ಬಿಜೆಪಿ, ಮಸ್ಕಿಯಲ್ಲಿ ಕಾಂಗ್ರೆಸ್ ಗೆಲುವು

ಕನ್ನಡನೆಟ್ ನ್ಯೂಸ್ :  ಮಸ್ಕಿ ವಿಧಾನಸಭೆ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರ್ವಿಹಾಳ   ಅಂತರದೊಂದಿಗೆ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಅವರು ಪಕ್ಷ ಬದಲಿಸಿ ಸೋಲು ಅನುಭವಿಸಿದಂತಾಗಿದೆ.‌ ಕಾಂಗ್ರೆಸ್ 86222 ಮತಗಳನ್ನ  , ಬಿಜೆಪಿ 55581 ಮತಗಳನ್ನ ಪಡೆದು, ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರ್ವಿಹಾಳ 30641 ಮತಗಳಿಂದ ಗೆಲುವಿನ ನಗೆ ಬೀರಿದರು

ಬಸವ ಕಲ್ಯಾಣದಲ್ಲಿ 20,629 ಮತಗಳ ಅಂತರದಿಂದ ಬಿಜೆಪಿಯ ಶರಣು ‌ಸಲಗರ ಭರ್ಜರಿ ಗೆಲುವು ಸಾಧಿಸಿದ್ದಾರೆ. ಜೆಡಿಎಸ್‌ ಇಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು ಕಾಂಗ್ರೆಸ್‌ಗೆ ದುಬಾರಿಯಾಗಿ ಪರಿಣಮಿಸಿತು.   ಇಲ್ಲಿ ಮುಸ್ಲಿಂ ಮತಗಳು ವಿಭಜನೆಯಾಗಿ, ಕಾಂಗ್ರೆಸ್‌ ಅಭ್ಯರ್ಥಿಯ ಸೋಲಿಗೆ ಕಾರಣವಾಯಿತು. ಬಿ.ವಿ. ಭೂಮರೆಡ್ಡಿ ‌ಕಾಲೇಜಿನಲ್ಲಿ‌ ಮತ ಎಣಿಕೆ ನಡೆಯಿತು. ಮೊದಲ ಸುತ್ತಿನಿಂದಲೇ ಶರಣು ಸಲಗರ ಮುನ್ನಡೆ ‌ಕಾಯ್ದುಕೊಂಡಿದ್ದರು.

 

 

Please follow and like us:
error