ಬಳ್ಳಾರಿಯಲ್ಲಿ ಮತ್ತೊಂದು ಪಾಸಿಟಿವ್ ಕೇಸ್

Bellary  ಬಳ್ಳಾರಿ ಜಿಲ್ಲೆಯಲ್ಲಿ ಮತ್ತೊಂದು ಕರೋನಾ ಪಾಸಿಟಿವ್ ಪ್ರಕರಣ ಬೆಳಕಿಗೆ ಬಂದಿದೆ. 37 ವರ್ಷ ದ ವ್ಯಕ್ತಿಗೆ ಮಹಾಮಾರಿ ಕರೋನಾ ಆವರಿಸಿದೆ. ಮೊನ್ನೆ ಬೆಂಗಳೂರಿಂದ ಬಳ್ಳಾರಿಗೆ ಬಂದಿದ್ದ ವ್ಯಕ್ತಿಗೆ ಕರೋನಾ ಕಂಡು ಬಂದಿದೆ. ಬೆಂಗಳೂರಿಂದ ಸರ್ಕಾರಿ ಬಸ್ ನಲ್ಲಿ ಬಂದಿದ್ದ ವ್ಯಕ್ತಿಗೆ ಕರೋನಾ ಬಂದಿದ್ದು, ಮೊನ್ನೆ ಬೆಂಗಳೂರಿನಿಂದ ಜಿಲ್ಲೆಗಳಿಗೆ ಹೋಗಲು ಸರ್ಕಾರ ಸೂಚನೆ ನೀಡಿತ್ತು. ಆಗ ಬಂದ ಕಂಪ್ಲಿ ಮೂಲದ ವ್ಯಕ್ತಿಗೆ ಕೊರೋನಾ ಪಾಸಿಟಿವ್ ಬಂದಿದೆ. ಬೆಂಗಳೂರಿನಿಂದ ಬಳ್ಳಾರಿಗೆ ಬಂದು ಕಂಪ್ಲಿ ಪಟ್ಟಣಕ್ಕೆ ತೆರಳಿದ್ದ ವ್ಯಕ್ತಿ, ವ್ಯಕ್ತಿ ಹೋಂ ಕ್ವಾರಂಟೈನ್ ಕೂಡಾ ಆಗಿರಲ್ಲ. ಆತನ ಜೊತೆ ಸರ್ಕಾರಿ ಬಸ್ ನಲ್ಲಿ ಬಂದ ಸಹ ಪ್ರಯಾಣಿಕರನ್ನ ಕ್ವಾರಂಟೈನ್ ಮಾಡಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ಉನ್ನತ ಮೂಲಗಳಿಂದ ಮಾಹಿತಿ ಬಂದಿದೆ, ಈಗ ಸದ್ಯ 15 ಇದ್ದ ಪಾಸಿಟಿವ್ ಪ್ರಕರಣಗಳು, 16 ಕ್ಕೇರಿದ್ದು, ಈಗಾಗಲೇ ಕೊರೋನಾದಿಂದ 11 ಜನರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.‌

Please follow and like us:
error