ಬಳ್ಳಾರಿಯಲ್ಲಿ ಬಂಜಾರ ಸಮುದಾಯದಿಂದ ಬೃಹತ್ ಪ್ರತಿಭಟನೆ

Bellary : ಕಲಬುರಗಿ ಜಿಲ್ಲೆಯಲ್ಲಿ ಬಂಜಾರ ಸಮುದಾಯದ ಆರಾಧ್ಯ ದೈವ ಸಂತ ಶ್ರೀ ಸೇವಾಲಾಲ್ ಮೂರ್ತಿಯನ್ನು ಧ್ವಂಸ ಮಾಡಿದ್ದನ್ನು ಖಂಡಿಸಿ, ಗಣಿನಾಡು ಬಳ್ಳಾರಿಯಲ್ಲಿ ಬಂಜಾರ ಸಮುದಾಯದಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಬೆಳಗಲ್ ಕ್ರಾಸ್ ನಿಂದ ಕಾಗೆ ಪಾರ್ಕ್ ವರೆಗೆ ಬೈಕ್ ರ‌್ಯಾಲಿ ನಡೆಸಿದ ಸಮುದಾಯದ ಜನರು, ಮತ್ತೆ ಪಾರ್ಕ್ ನಿಂದ ಡಿಸಿ ಕಚೇರಿಯವರೆಗೆ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ತಮಟೆ, ವಾದ್ಯ ಮೇಳಗಳು ಜೋರಾಗಿದ್ದು, ನ್ಯಾಯಕ್ಕಾಗಿ ಒತ್ತಾಯಿಸಿದರು‌.

ಬಂಜಾರ ಸಮುದಾಯವನ್ನು ಅವಹೇಳನ‌ ಮಾಡಿ, ಅಪಮಾನ ಮಾಡಿದ್ದಾರೆ, ಈ ಕೂಡಲೇ ಮೂರ್ತಿ ಧ್ವಂಸ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು, ಕಲ್ಬುರ್ಗಿ ವಿಮಾನ ನಿಲ್ದಾಣಕ್ಕಾಗಿ ಹೆಚ್ಚು ಸಂಖ್ಯೆಯಲ್ಲಿ ಬಂಜಾರರು, ಭೂಮಿ ನೀಡಿದ್ದು, ವಿಮಾನ ನಿಲ್ದಾಣಕ್ಕೆ ಶ್ರೀ ಸಂತ ಸೇವಾಲಾಲ್ ವಿಮಾನ ನಿಲ್ದಾಣವೆಂದು ಮರು ನಾಮಕರಣ ಮಾಡಬೇಕು ಎಂದು ಒತ್ತಾಯಿಸಿದ್ದಲ್ಲದೇ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ರಾಜ್ಯಾದ್ಯಂತ ಮತ್ತೆ ಉಗ್ರ ಹೋರಾಟಕ್ಕೆ ಕರೆ ನೀಡಲಾಗುತ್ತದೆ ಎಂದು ಎಚ್ಚರಿಸಿದರು.

ವಾಗ್ವಾದ. : ಡಿಸಿ ಕಚೇರಿ ಎದುರು ಪ್ರತಿಭಟನೆ ಮಾಡುತ್ತಿದ್ದ ಸ್ಥಳಕ್ಕೆ ಮನವಿ ಪತ್ರ ಸ್ವೀಕಾರ ಮಾಡಲು ತಹಸೀಲ್ದಾರ್ ಆಗಮಿಸಿದಾಗ, ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳೇ ಬರಬೇಕೆಂದು ಒತ್ತಾಯ ಮಾಡಿದರು, ಈ ವೇಳೆ ಹೋರಾಟಗಾರರು ಮತ್ತು ತಹಶಿಲ್ದಾರರ ನಡುವೆ ವಾಗ್ವಾದ ನಡೆಯಿತು, ಪೊಲೀಸರು ಮದ್ಯ ಪ್ರವೇಶ ಮಾಡಿ, ತಹಶಿಲ್ದಾರರನ್ನು ಒಳಗೆ ಕರೆದು ಹೋದರು, ನಂತರ ಎಡಿಸಿ ಪಿಎಸ್. ಮಂಜುನಾಥ್ ಬಂದು ಮನವಿ ಪತ್ರ ಸ್ವೀಕಾರ ಮಾಡಿ, ರಾಜ್ಯ ಸರಕಾರಕ್ಕೆ ಮನವಿ ಕಳಿಸಲಾಗುತ್ತದೆ ಎಂದು ಭರವಸೆ ನೀಡಿದರು.

Please follow and like us:
error