ಬಳ್ಳಾರಿಯಲ್ಲಿ ತಡರಾತ್ರಿ ಎರಡು ಗುಂಪುಗಳ ಮದ್ಯೆ ಭಾರೀ ಘರ್ಷಣೆ

ಬಳ್ಳಾರಿ : ಬಳ್ಳಾರಿಯಲ್ಲಿ ನಿನ್ನೆ ತಡರಾತ್ರಿ ಎರಡು ಗುಂಪುಗಳ ಮದ್ಯೆ ಭಾರೀ ಘರ್ಷಣೆ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಶುರುವಾದ ಘರ್ಷಣೆ ವಿಕೋಪಕ್ಕೆ ತಿರುಗಿದೆ. ಬ್ರೂಸ್ ಪೇಟೆ ವ್ಯಾಪ್ತಿಯಲ್ಲಿ ನಡೆದ ಘಟನೆಯಲ್ಲಿ ಇಪ್ಪಕ್ಕೂ ಹೆಚ್ಚು ಜನರ ಗುಂಪು ಸೇರಿಕೊಂಡ ಎರಡೂ ಕಡೆಯ ಜನರ ನಡುವೆ ಭಾರೀ ಮಾರಾಮಾರಿಯೇ ನಡೆದಿದೆ. ಗಲಾಟೆಯಲ್ಲಿ ಮಚ್ಚು ಲಾಂಗು ಝಳಪಿಸಿದ್ದು ದೊಣ್ಣೆಯಿಂದ ಸಿಕ್ಕಸಿಕ್ಕವರ ತಲೆಗೆ ಹೊಡೆದಿದ್ದಾರೆ. ಗುಂಪು ಘರ್ಷಣೆಯಲ್ಲಿ ಹಲವು ಜನ ಗಾಯಗೊಂಡಿದ್ದು ಆಸ್ಪತ್ರಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಳ್ಳಾರಿಯ ಮರಿಸ್ವಾಮಿ ಮಠದ ಹಿಂಬಾಗದಲ್ಲಿ ನಿನ್ನೆ ತಡರಾತ್ರಿ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಶುರುವಾಗಿದ್ದು ನಂತರ ವಿಕೋಪಕ್ಕೆ ತಿರುಗಿದೆ ಎನ್ನಲಾಗಿದೆ. ಮಹಿಳೆಯರು ಮಕ್ಕಳೂ ಸಹ ಘರ್ಷಣೆಯಲ್ಲಿ ಪಾಲ್ಗೊಂಡಿದ್ದು ಮನೆಗೆಗಳಿಗೆ ನುಗ್ಗಿ ಅವರಿವರಿಗೆ ಹೊಡೆಯುತ್ತಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

Please follow and like us:
error