ಬಳೂಟಗಿ ಗ್ರಾಮಪಂಚಾಯತಿಯಲ್ಲಿ ಅವ್ಯವಹಾರ : ಶಶಿಧರ್


ಕೊಪ್ಪಳ,ಫೆ.19 :14ನೇ ಹಣಕಾಸು ಯೋಜನೆಯಲ್ಲಿ ಬಂದಿರುವ ಅನುದಾನವನ್ನು ಗ್ರಾಮಪಂಚಾಯತಿ ಅಧ್ಯಕ್ಷರ ಪತಿಯ ಹೆಸರಿನಲ್ಲಿ ಮತ್ತು ಪಂಚಾಯತಿ ಸದಸ್ಯರು ಹಾಗೂ ಸದಸ್ಯೆಯರ ಪತಿಯಂದಿರ ಹೆಸರಿನಲ್ಲಿ ಸಾಕಷ್ಟು ಲಕ್ಷಾಂತರ ರೂಪಾಯಿ ಹಣ ಬೇಕಾ ಬಿಟ್ಟಿ ಸಂದಾಯವಾಗಿದೆ. ಮತ್ತು ಅಂದಾಜು 25 ಲಕ್ಷಕ್ಕೂ ಹೆಚ್ಚು ಹಣ ಅವ್ಯವಹಾರ ನೆಡೆದಿರುವುದು ಬೆಳಿಕಿಗೆ ಬಂದಿದೆ. ಯಾವುದೇ ಕಾಮಗಾರಿಗಳನ್ನು ಮಾಡದೆ ಹಣ ಲೂಟಿ ಮಾಡಲಾಗಿದೆ, ಸಾರ್ವಜನಿಕರ ಕೆಲಸ ಕಾಂiÀರ್iಗಳಿಗೆ ಬಳಕೆಯಾಗಬೇಕಾದ ಸರ್ಕಾರದ ಅನುದಾನ ನುಂಗಣ್ಣರ ಪಾಲಾಗಿದೆ 14ನೇ ಹಣಕಾಸು ಯೋಜನೆಯ ಹಣ ಯಾರು ಯಾರಿಗೊ ಪಾವತಿಯಾಗಿದೆ. ಗ್ರಾಮಪಂಚಾಯತಿ ಸದಸ್ಯರು ಅವರ ಪತಿಯಂದಿರ ಖಾತೆಗಳಿಗೆ ಗ್ರಾಮ ಪಂಚಾಯತಿ ಮೂಲಕ ಅವರಿಗೆ ನೇರವಾಗಿ ಹಣ ಸಂದಾಯಮಾಡಿರುವುದು ಕಾನೂನು ಬಾಹಿರವಾಗಿದೆ ಎಂದು ಯಲಬುರ್ಗಾ ತಾಲೂಕಿನ ಬಳೂಟಗಿ ಗ್ರಾಮದ ಮಾಹಿತಿ ಹಕ್ಕು ಕಾರ್ಯಕರ್ತ ಶಶಿಧರ್ ಕಳಕಪ್ಪ ಗಾಣಿಗೇರ್ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು,
ಅವರು ಮಾತನಾಡುತ್ತಾ ಯಲಬುರ್ಗಾ ತಾಲೂಕಿನ ಬಳೂಟಗಿ ಗ್ರಾಮ ಪಂಚಾಯತಿಯಲ್ಲಿ ಕ್ರಿಯಾಯೋಜನೆಯಾ ಪ್ರಕಾರ ಯಾವುದೇ ಕೆಲಸ ಅಗಿಲ್ಲ. ಕುಡಿಯುವ ನೀರಿಗಾಗಿ ಹಾಗೂ ಇನ್ನಿತರೆ ಅಭಿವೃದ್ಧಿ ಕಾರ್ಯಗಳಿಗೆ ಬಂದ ಹಣವನ್ನು ಲೂಟಿಮಾಡಿದ್ದಾರೆ. ಅದ್ದರಿಂದ ಇದಕ್ಕೆ ಸಂಭಂದ ಪಟ್ಟ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾಪಂಚಾಯತಿ ಕಾರ್ಯನಿರ್ವಾಹಕಾಧಿಕಾರಿರವರು ಕೂಲಂಕುಷವಾಗಿ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ತನಿಖೆನಡೆಸಿ ಕಾನೂನುಕ ಕ್ರಮ ಕೈಗೊಳ್ಳÀಬೇಕು ಎಂದರು. ಈ ಸಂದರ್ಭದಲ್ಲಿ ರಾಜಶೇಖರ ಶ್ಯಾಗೋಟಿ. ಕಲ್ಲೇಶ ಕೂಳಿಹಾಳ್ ಹಾಗೂ ಇನ್ನು ಮುಂತಾದವರು ಉಪಸ್ಥಿತರಿದ್ದರು