ಬದುಕು ಮುಗಿಸಿದ ಬಂಗಾರದ ಅವ್ವ : ಡಾ. ಗೀತಾ ನಾಗಭೂಷಣ 

ಸನ್ 2010ರಲ್ಲಿ ಗದಗ ನಲ್ಲಿ ಜರುಗಿದ ಅಖಿಲ ಭಾರತ 76ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ರಾಗಿ ಆಯ್ಕೆ ಆಗಿದ್ದ ನಾಡೋಜ, ಸ್ತ್ರೀ ಸಮಾನತಾವಾದಿ ಹಿರಿಯ ಬರಹಗಾರ್ತಿ ಡಾ. ಗೀತಾ ನಾಗಭೂಷಣ್ ದಿ. 28ರ ರಾತ್ರಿ ತಮ್ಮ ನಿವಾಸ ದಿಂದ ಬರವಣಿಗೆಗೆ ವಿದಾಯ ಹೇಳಿ  ಬಾರದ ಲೋಕಕ್ಕೆ ತೆರಳಿದರು.
ಕೇಂದ್ರ ಸಾಹಿತ್ಯ ಅಕಾಡೆಮಿ. ನಾಡೋಜ. ಅತ್ತಿಮಬ್ಬೆ ಗುಲಬುರ್ಗಾ ವಿ ವಿ ಡಾಕ್ಟರೇಟ್  ಮುಂತಾದ ಪ್ರಶಸ್ತಿ ಪುರಸ್ಕಾರ ಕ್ಕೆ ಭಾಜನ ರಾಗಿದ್ದರು. ಕೆಲ ಪ್ರಶಸ್ತಿ ಪಡೆದ ಮೊದಲ ಮಹಿಳಾ ಕಾದಂಬರಿಕಾರರು ಎಂಬ ಹೆಗ್ಗಳಿಕೆ ಇವರದಾಗಿತ್ತು.
ಕನ್ನಡದ ಪ್ರಮುಖ ಮಹಿಳಾ ಕಾದಂಬರಿಕಾರರಲ್ಲಿ ಒಬ್ಬರಾದ ಡಾ. ಗೀತಾ ತಮ್ಮ ಲೆಕ್ಕಣಿಕೆಯ ಮೂಲಕವೆ ಕಿವುಡ ಅಂಧ ಸರ್ಕಾರದ ಕಣ್ಣು ತೆರೆಸುವ ಕಾರ್ಯ  ಕೂಡ ಮಾಡಿದ್ದಾರೆ.
ದಮನಿತ ಶೋಷಿತ ಮಹಿಳಾ ಸಮುದಾಯದ ಧ್ವನಿಯಾಗಿ ಸಾಹಿತ್ಯ ರಚನೆ ಯಲ್ಲಿ ತೊಡಗಿ ಕೊಂಡಿದ್ದರು.
ಡಾ ಗೀತಾ ಅವರು ಸಾಗಿದ ಹಾದಿ ಸುಗಮವಾಗಿರಲಿಲ್ಲ. ತಮ್ಮ ಕಾಲಿಗೆ ತೊಡರಿದ ತೊಡರು ಬಳ್ಳಿ ಯನ್ನು ದಿಟ್ಟತನ ದಿಂದ ಬಿಡಿಸಿ ಕೊಂಡ ಗಟ್ಟಿಗಿತ್ತಿ.
ಜಿಲ್ಲಾ ಕಲೆಕ್ಟರಕಚೇರಿ ಯಲ್ಲಿ ಕಾರಕೂನಕಿ ಮಾಡುತ್ತ ಉನ್ನತ ವ್ಯಾಸಂಗ ಮಾಡಿಕೊಂಡು ಮಹಿಳಾ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾಗಿ ಪ್ರಾಚಾರ್ಯರಾಗಿ ಸಾರ್ಥಕ ಸೇವೆ ಸಲ್ಲಿಸಿದರು.
ಅಧ್ಯಯನ. ಅಧ್ಯಾಪನ. ಬರವಣಿಗೆ ಬರಹ ಗಾರ್ತಿ ಗೀತಾ ಅವರಿಗೆ ಬಳವಳಿ ಯಾಗಿ ಬಂದಿದ್ದವು.
ಬದುಕು, ಹಸಿ ಮೌಂಸಮತ್ತು ಹದ್ದುಗಳು, ಅವ್ವ ಮತ್ತು ಇತರೆ ಕವಿತೆಗಳು, ಸಪ್ತ ವರ್ಣ ದ ಹಾಡು, ದುರುಗ ಮುರಗಿ ಯರ ಸಂಸ್ಕೃತಿ, ಜ್ವಲoತ, ಜೋಗಿನಿ, ನನ್ನ ಚಲುವು  ನಿನ್ನ ಒಲವುಹೀಗೆ 27ಸ್ವಾತಂತ್ರಕಾದಂಬರಿ, 50ಸಣ್ಣ ಕತೆಗಳು, 2ಸಂಕಲನ, 12ನಾಟಕ ಗಳು, 1ಸಂಪಾದನೆ, 1ಸಂಶೋಧನೆ ಕೃತಿಗಳು ಹೀಗೆ ಸಾಹಿತ್ಯದ ವಿವಿಧ ಪ್ರಕಾರ ಗಳಲ್ಲಿ 91ಕೃತಿ ಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆ ಯಾಗಿ ಕೊಟ್ಟಿದ್ದಾರೆ.
ಗೀತಾ ಅವರ ಬರವಣಿಗೆ ವಸ್ತು ವಿಷಯ ವೆಂದರೆ ಮೊಗ ಲಾಯಿ ಮಣ್ಣಿನ ಘಮಲು. ತುಳಿತಕ್ಕೆ ಒಳಗಾದ  ಹೆಣ್ಣಿನ ಸಮೂಹವಾಗಿತ್ತು.
ಗದಗ ನಲ್ಲಿ ಜರುಗಿದ ಅಖಿಲ ಭಾರತ ಸಾಹಿತ್ಯ ಸಮ್ಮೇ ಳನ ನ ಭೂತೋ ನ ಭವಿಷ್ಯತಿ ಎನ್ನುವಂತಿತ್ತು. ಜಿಲ್ಲೆಯ ಕನ್ನಡದ ಮನಸುಗಳು ಯುದ್ಧೋಪಾದಿ ಯಲ್ಲಿ ಕೆಲಸ ಮಾಡಿದ್ದೂ ಇನ್ನೂ ಹಸಿರಾಗಿದೆ.
ಗೋಗೇರಿ ಗ್ರಾಮದಲ್ಲಿ ಸ್ವೀಕಾರ ಮಾಡಿದ ಸನ್ಮಾನ ಸ್ಮರಣೀಯ. ಸಮ್ಮೇಳನ ಸ್ವಾಗತ ಸಮಿತಿಗೆ ಗೀತಾ ಅವರು ಹಾಕಿದ ಕೆಲ ಕರಾರು ಗಳು. ಷರತ್ತುಗಳು ನುಂಗಲಾರದ ತುತ್ತಾಗಿದ್ದರೂ ನಾಜೂಕಿ ನಿಂದ ಬಗೆಹರಿಸಿ ಸಮಾಧಾನ ಪಡಿಸಿದ್ದು ಗೀತಾ ಅವರ ಇನ್ನೊಂದು ಮುಖ ದರ್ಶನ ಮಾಡಿಸಿದಂತಿತ್ತು.
ಜೊತೆಗೆ ಡಾ ಕೆ ಷರೀಫಾ  ಬಸು ಜೊತೆಗೂಡಿ ಗೀತಾ ಅವರ ವಿಮರ್ಶೆ ಲೇಖನಗಳ ಸಂಕಲನ ಲಡಾಯಿ ಪ್ರಕಾಶನ ಪ್ರಕಟಿಸಿತು. ಮೈ ಮ ಪ್ರಕಾಶನ ಕೂಡ ಗೀತಾ ಅವರ  ಹಲವು ಅಲಭ್ಯ ಕೃತಿಗಳನ್ನು ಪ್ರಕಟಣೆ ಮಾಡಿದ್ದೂ ಇತಿಹಾಸ.
ನಿರಂತರ ಪ್ರಕಾಶನ, ಮಕಾನದಾರ ಸಾಹಿತ್ಯ ಪ್ರತಿಷ್ಠಾನ ನಮ್ಮನು ಅಗಲಿದ ಹಿರಿಯ ಜೀವ ಸಾಹಿತಿ ಗೀತಾ ನಾಗಭೂಷಣ್ ಅವರಿಗೆ ನುಡಿ ನಮನ ಸಲ್ಲಿಸುತ್ತದೆ
ಎ ಎಸ್. ಮಕಾನದಾರ
ಗದಗ
Please follow and like us:
error