ಬಡ ಹುಡುಗ ಇಂದು ರಾಜ್ಯ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ನಿರ್ದೇಶಕ
ಕಲ್ಯಾಣ ಕಾರ್ಯಕ್ರಮದಲ್ಲಿ ಹೋಗಿ ಒಂದೊತ್ತಿಗೆ ಹೊಟ್ಟೆತುಂಬಿಸಿಕೊಳ್ಳುತ್ತಿದ್ದ ಬಡ ಹುಡುಗ ಇಂದು ರಾಜ್ಯ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ನಿರ್ದೇಶಕ.ಹೌದು ಕೊಪ್ಪಳ ಜಿಲ್ಲೆ ಕಾರಟಗಿ ಮೂಲದ ಮೆಹಬೂಬ ಸಾಬ ಎಂಬ ಇವರು ನಿನ್ನೆ ತಾನೆ ರಾಜ್ಯ ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಯ ನಿರ್ದೇಶಕರಾಗಿ ಅಧಿಕಾರ ಸ್ವೀಕಾರಮಾಡಿದ್ದಾರೆ.ಈ ಮೂಲಕ ಇಲಾಖೆಯಲ್ಲಿ ಮತ್ತೊಂದು ಹೊಸ ಭರವಸೆ ಮೂಡಿದಂತಾಗಿದೆ. ಕಾರಣ ಈ ಇಲಾಖೆ ಇರುವುದೇ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ, ಅದರಲ್ಲೂ ಮೆಹಬೂಬ್ ರಂತ ಉತ್ತಮ ಅಧಿಕಾರಿ ಈ ಇಲಾಖೆಗೆ ಬಂದಿರುವುದು ಇಲಾಖೆಗೆ ಹೊಸ ಜೀವಕಳೆ ಬಂದಿದೆ .
ಬಡ ಟೈಲರ್ ಮಗನಾಗಿದ್ದ ಮೆಹಬೂಬ್ ಅವರು ಕಷ್ಟದ ದಿನದಲ್ಲಿ ವಿದ್ಯಾಭ್ಯಾಸ ಮುಗಿಸಿದ್ದು ನಮ್ಮ ಕಣ್ಣ ಮುಂದಿದೆ, ದಾರವಾಡದ ಕಿಟೆಲ್ ಕಾಲೇಜಿನಲ್ಲಿ ವಿಧ್ಯಾಭ್ಯಾಸಮಾಡಿದ ಮೆಹಬೂಬ್ ಅವರು, ಪದವಿಯ ತೃತೀಯ ವರ್ಷದಲ್ಲಿ ಅಂಕಗಳ ಆಧಾರದ ಮೇಲೆ ಜಿ.ಎಸ್.ಆಗಿದ್ದವರು, ಆ ಸಂದರ್ಭದಲ್ಲಿ ಉಡುವುದಕ್ಕೂ ಒಂದೊಳ್ಳೆ ಬಟ್ಟೆ ಇಲ್ಲದೆ ಕಷ್ಟದ ದಿನ ಕಳೆದ ಅವರು ಹಂತ ಹಂತವಾಗಿ ಮೇಲೇರುತ್ತೆಲೇ ಬಂದವರು, ಬಿ.ಎ.ಪದವಿ ಮುಗಿದ ನಂತರ ಬಿ.ಎಡ್. ಮುಗಿಸಿ, ಹೈಸ್ಕೂಲ್ ಶಿಕ್ಷಕರಾದರು, ಅದಾದ ಬಳಿಕ ಕೆ.ಇ.ಎಸ್.ಪರೀಕ್ಷೆ ಬರೆದು ಹೈಸ್ಕೂಲ್ ಹೆಡ್ ಮಾಸ್ಟರ್ ಆದರು, ತದನಂತರ ಛಲ ಬಿಡದ ಅವರ ಪ್ರಯತ್ನ ಹಾಗೇ ಮುಂದುವರೆಯಿತು, ಕೆ.ಎ.ಎಸ್.ಪರೀಕ್ಷೆ ಬರೆದು ರಾಜ್ಯದಲ್ಲಿ 62ನೇ ರ್ಯಾಂಕ್ ಗಳಿಸಿ ವಿದಾನಸೌದದಲ್ಲಿ ಸೆಕ್ಷನ್ ಆಫಿಸರ್ ಆಗಿ ತಮ್ಮ ವೃತ್ತಿ ಜೀವನ ಆರಂಬಿಸಿದರು,ಅಲ್ಲಿಂದ ಗುಲ್ಬರ್ಗದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಕಲ್ಯಾಣಾದಿಕಾರಿಯಾಗಿ ಅವರ ಸೇವೆ ಮುಂದುವರೆಯಿತು, ಇಂದು ರಾಜ್ಯ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ನಿರ್ದೇಶಕರಾಗಿ ಉನ್ನತ ಹುದ್ದೆಗೆ ಪದೋನ್ನತಿ ತಲುಪಿದ್ದಾರೆ, ಚಿಕ್ಕ ವಯಸ್ಸಿನಲ್ಲಿಯೇ ಇವರುಮಾಡಿದ ಈ ಸಾಧನೆ, ರಾಜ್ಯದ ಪ್ರತಿಯೊಂದು ಬಡ ಮಕ್ಕಳಿಗೆ ಆದರ್ಶವಾಗಿದೆ. ಛಲವೊಂದಿದ್ದರೆ ಏನುಬೇಕಾದ್ರು ಸಾಧನೆಮಾಡಬಹುದು ಎನ್ನುವುದಕ್ಕೆ ಮೆಹಬೂಬ್ ಸಾಬ ಅವರು ಒಂದು ಪಕ್ಕಾ ಉದಹಾರಣೆ…