ಬಡರೋಗಿಗಳ ಪಾಲಿನ ದೇವರು ಡಾ. ಹಲೀಂ

ಇಡೀ ದೇಶದ ವೈದ್ಯಕೀಯ ಕ್ಷೇತ್ರ ತನ್ನೆಲ್ಲ ಶಕ್ತಿ ಸಂಪನ್ಮೂಲಗಳನ್ನು ಕೊರೋನಾ ಸೋಂಕಿತರ ಉಪಚಾರಕ್ಕೆ ಮುಡುಪಾಗಿಟ್ಟಿರುವ ಈ ಬಿಕ್ಕಟ್ಟಿನ ದಿನಗಳಲ್ಲಿ ಕ್ಯಾನ್ಸರ್, ಸಿಹಿಮೂತ್ರ, ಕಿಡ್ನಿ ಸಮಸ್ಯೆ, ಹೃದಯ ತೊಂದರೆ ಮೊದಲಾದ ಕೋವಿಡ್ ಗಿಂತಲೂ ಗಂಭೀರ ರೂಪದ ಕಾಯಿಲೆವುಳ್ಳವರ ಸ್ಥಿತಿ ಚಿಂತಾಜನಕವಾಗಿದೆ. ಕೊರೋನಾ ವೈರಸ್ ಸೋಂಕಿನ ಭಯದಿಂದಾಗಿ ಯಾವ ಡಾಕ್ಟರ್, ಯಾವ ಆಸ್ಪತ್ರೆಯೂ ಇವರಿಗೆ ಚಿಕಿತ್ಸೆ ಕೊಡಲು ಮುಂದಾಗುವುದಿಲ್ಲ. ಕೊರೋನಾ ಸೋಂಕು ತಗಲಿದ್ದರೂ ರೋಗ ಲಕ್ಷಣಗಳಿಲ್ಲದಿರುವುದು ಸಾಮಾನ್ಯವಾದ ಮೇಲಂತೂ ಇವರುಗಳು ತಮ್ಮ ದಿನನಿತ್ಯದ ವೈದ್ಯಕೀಯ ಉಪಚಾರ ಪಡೆಯಲು ಹರಸಾಹಸ ಪಡುವಂತಾಗಿದೆ. ಡಾಕ್ಟರು, ನರ್ಸುಗಳು ಹಾಗೂ ಇತರ ರೋಗಿಗಳಿಗೆ ಸೋಂಕು ಹರಡುವುದೆಂಬ ಭಯದಿಂದ ಆಸ್ಪತ್ರೆಗಳು, ಡಾಕ್ಟರುಗಳು ಇವರನ್ನು ಹೊರ ಕಳಿಸುವ ಪ್ರಕರಣಗಳು ಸಾಮಾನ್ಯವಾಗುತ್ತಿವೆ. ನಿಯಮಿತವಾಗಿ ಡಯಾಲಿಸಿಸ್ ಮಾಡಿಸಿಕೊಳ್ಳಬೇಕಾದ ಕಿಡ್ನಿ ಸಮಸ್ಯೆಯಿಂದ ಬಳಲುವ ರೋಗಿಗಳ ಪಾಡಂತೂ ಹೇಳತೀರದು. ಕೆಲವು ಖಾಸಗೀ ಆಸ್ಪತ್ರೆ, ಡಾಕ್ಟರುಗಳು ಕೋವಿಡ್ ಬಿಕ್ಕಟ್ಟಿನ ಲಾಭ ಪಡೆದು ಬಡವರು ಶ್ರೀಮಂತರೆನ್ನದೆ ರೋಗಿಗಳ ಸುಲಿಗೆ ಮಾಡುತ್ತಿರುವುದೂ ನಡೆಯುತ್ತಿದೆ. ಇಂತಹ ಸನ್ನಿವೇಶದಲ್ಲಿ ಕೊಲ್ಕೋತಾದ ಡಾ. ಫುಹಾದ್ ಕಿಡ್ನಿ ಸಮಸ್ಯೆಯ ರೋಗಿಗಳಿಗೆ ಜೀವರಕ್ಷಕನಾಗಿ ಒದಗಿ ಬರುತ್ತಿದ್ದಾರೆ.

ಡಾ ಹಲೀಂ ತನ್ನ 56 ಜನ ಸ್ನೇಹಿತರು, ಸಂಬಂಧಿಕರ ಸಹಯೋಗದಲ್ಲಿ ‘ಕೊಲ್ಕೋತಾ ಸ್ವಾಸ್ತ್ಯ ಸಂಕಲ್ಪ’ ಎಂಬ ಒಂದು ಸಾಮಾಜಿಕ ಸಂಸ್ಥೆಯನ್ನು ಹುಟ್ಟು ಹಾಕಿ ಅದರ ಮೂಲಕ ಬಡ ರೋಗಿಗಳಿಗೆ ತೀರಾ ಅಗ್ಗದ ದರದಲ್ಲಿ ವೈದ್ಯಕೀಯ ಸೇವೆಯನ್ನು ಒದಗಿಸುತ್ತಿದ್ದಾರೆ. ಉದಾಹರಣೆಗೆ, ಬೇರೆ ಆಸ್ಪತ್ರೆಗಳಲ್ಲಿ ಒಂದು ಸಾರಿ ಡಯಾಲಿಸಿಸ್ ಮಾಡಲು ಸಾವಿರಾರು ರುಪಾಯಿ ಖರ್ಚಾದರೆ ಇಲ್ಲಿ ಕೇವಲ 350 ೩೫೦ ರುಪಾಯಿ! ಯಾವುದೇ ಆಸ್ಪತ್ರೆಗಾದರೂ ಒಂದು ಡಯಾಲಿಸಿಸಿಗೆ ಕನಿಷ್ಠ 850 ರುಪಾಯಿ ಖರ್ಚು ತಗಲುತ್ತದೆ. ಆದರೆ, ಲಾಕ್ ಡೌನ್ ನಂತರ ಕೆಲಸಲಿಲ್ಲದೆ ಒಂದು ಹೊತ್ತು ಊಟಕ್ಕೂ ಹಣವಿಲ್ಲದೆ ಒದ್ದಾಡುತಿರುವ ಬಡವರ ಗೋಳು ನೋಡಿ ಈ 350 ರುಪಾಯಿ ಚಾರ್ಜನ್ನು ಇನ್ನೂ ಕಡಿಮೆ ಮಾಡಿ 50 ರುಪಾಯಿಗೆ ಇಳಿಸಿದ್ದಾರೆ! ಅಷ್ಟೇ ಅಲ್ಲ, ತನ್ನ ಆಸ್ಪತ್ರೆಗೆ ಬರುವ ಯಾವ ರೋಗಿಯಿಂದಲೂ ಕೋವಿಡ್ ಪ್ರಮಾಣ ಪತ್ರವನ್ನೂ ಕೇಳದೆ ಚಿಕಿತ್ಷೆ ಕೊಡುತ್ತಾರೆ.

ಡಾ. ಹಲೀಮರ ಮನೆಗೆ ತಾಗಿ ಕಟ್ಟಲ್ಪಟ್ಟ ಕೇವಲ ಐದು ಹಾಸಿಗೆ, ಒಂಭತ್ತು ಡಾಯಾಲಿಸಿಸ್ ಯಂತ್ರಗಳಿರುವ ಈ ಆಸ್ಪತ್ರೆ ತೀರಾ ಸಾಧಾರಣವಾದುದು. ಇದರಲ್ಲಿ ಏರ್ ಕಂಡೀಷನರ್ ಆಗಲೀ, ಲಿಫ್ಟ್ ಆಗಲೀ, ರಿಷೆಪ್ಷನ್ ಕೌಂಟರ್ ಆಗಲೀ ಇಲ್ಲ. ಒಬ್ಬರು ಸ್ಟೈಪೆಂಡ್ ಪಡೆಯುವ ಡಾಕ್ಟರ್ ಹೊರತಾಗಿ ಉಳಿದ ಡಾಕ್ಟರುಗಳು ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಲಾಕ್ ಡೌನಿಗೆ ಮೊದಲು ಕೇವಲ ಬಡವರ್ಗದ ರೋಗಿಗಳಷ್ಟೇ ಡಾ. ಹಲೀಮರ ಈ ಆಸ್ಪತ್ರೆಗೆ ಬರುತ್ತಿದ್ದರು. ಆದರೆ, ಲಾಕ್ ಡೌನ್ ಹೇರಿಕೆಯಾದಂದಿನಿಂದ ಮಧ್ಯಮ ವರ್ಗದ ರೋಗಿಗಳೂ ಪ್ರಾರಂಭಿಸಿದ ಮೇಲೆ ಮತ್ತೊಂದು ಡಯಾಲಿಸಿಸ್ ಯಂತ್ರವನ್ನು ಅಳವಡಿಸಬೇಕಾಯಿತು.

ಕಮ್ಯುನಿಸ್ಟ್ ಪಾರ್ಟಿ(ಮಾ)ಯ ಸದಸ್ಯರಾಗಿರುವ ಡಾ ಹಲೀಂ 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಇವರ ತಂದೆ ಹಸೀಂ ಅಬ್ದುಲ್ ಹಲೀಂ ಪ. ಬಂಗಾಳ ವಿಧಾನಸಭೆಗೆ ಅತ್ಯಂತ ದೀರ್ಘಾವಧಿಗೆ ಸ್ಪೀಕರ್ ಆಗಿದ್ದರು. ಅಲಿಗಢ್ ಮುಸ್ಲಿಂ ಯೂನಿವರ್ಸಿಟಿಯ ಮಾಜೀ ಉಪಕುಲಪತಿ ಲೆಫ್ಟಿನೆಂಟ್ ಜನರಲ್ ಝಮೀರ್ ಉದ್ದೀನ್ ಶಾ ಇವರ ಮಾವ.

Panju Ganguli

https://www.facebook.com/panju.ganguli

Please follow and like us:
error