ಕೊಪ್ಪಳ : ನಗರದ ಬಾಲಕೀಯರ ಪದವಿ ಪೂರ್ವ
ಕಾಲೇಜ್ನ ಪಿಯುಸಿ ದ್ವಿತೀಯ ಸೈನ್ಸ್ ವಿಭಾಗದಿಂದ ಕುಮಾರಿ ತಸ್ಮೀಯಾ ಸರ್ದಾರಹುಸೇನ್ ದಪೇದಾರ ವಿದ್ಯಾರ್ಥಿನಿಯು 456 ಅಂಕಗಳನ್ನು ಗಳಿಸಿ ಕಾಲೇಜ್ಗೆ ದ್ವಿತೀಯ ಟಾಪರ್ ಆಗಿ ಕಾಲೇಜ್ ಕೀರ್ತಿ ತಂದಿದ್ದಾಳೆ.
ವಿದ್ಯಾರ್ಥಿನೀಯ ತಂದೆ ಸರ್ದಾರಹುಸೇನ್ ದಪೇದಾರ ಕೊಪ್ಪಳ ಜಿಲ್ಲಾ ಪಂಚಾಯತ್ನಲ್ಲಿ ‘ಡಿ’ ಗ್ರುಪ್ನ ಚಾಲಕರಾಗಿದ್ದು ಮಗಳ
ವಿದ್ಯಾಭ್ಯಾಸಕ್ಕಾಗಿ ಸಾಕಷ್ಟು ಶ್ರಮಿಸುತ್ತಿದ್ದು ಪಿಯುಸಿ ಸೈನ್ಸ್ ವಿಭಾಗದಲ್ಲಿ ಮಗಳ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಪತ್ರಿಕೆಯೊಂದಿಗೆ ಮಾತನಾಡಿದ ಸರ್ದಾರಹುಸೇನ್ ದಪೇದಾರ
ಈ ಬಾರಿ ಫರೀಕ್ಷೆಯಲ್ಲಿ ಮಗಳ ಉತ್ತಮ ಫಲಿತಾಂಶಕ್ಕಾಗಿ
ಇಲ್ಲಿಯ ಪ್ರಾಚಾರ್ಯರಾದ ಷಂಶುದ್ದೀನ್ ಹಾಗೂ ಎಂ.ಸಿದ್ದಣ್ಣ,
ಸುರೇಶ,ಅನ್ವರ್,ವಿಜಯಲಕ್ಷ್ಮಿ ಉಪನ್ಯಾಸಕರ ವೃಂದ
ರವಿವಾರ ಮತ್ತು ರಜೆ ದಿನಗಳಲ್ಲಿ ಸಹ ವಿದ್ಯಾರ್ಥಿನೀಯರಿಗೆ
ವಿಶೇಷ ತರಗತಿಗಳನ್ನು ತೆಗೆದುಕೊಂಡು ವಿದ್ಯಾರ್ಥಿಗಳ
ಉತ್ತಮ ಭವಿಷ್ಯತ್ತಿಗಾಗಿ ಶ್ರಮಿಸಿದ್ದು ಉತ್ತಮ ಫಲಿತಾಂಶ
ಲಭಿಸಲು ಸಾಧ್ಯವಾಯಿತು ಅವರನ್ನು ಅಭಿನಂದಿಸುವುದಾಗಿ
ತಿಳಿಸಿದ ಅವರು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರು ಹಾಗೂ
ಹಾಲಿ ಸದಸ್ಯರಾದ ಎಸ್.ಬಿ.ನಾಗರಳ್ಳಿಯವರು ಮಗಳ
ವಿದ್ಯಾಭ್ಯಾಸಕ್ಕೆ ಸಾಕಷ್ಟು ಪ್ರೋತ್ಸಾಹ ನೀಡಿದ್ದು ಇಂದು
ನೆನೆಯಬೇಕಾಗಿದೆ ಎಂದರು.