ಬಜೆಟ್ ನಲ್ಲಿ ಶಿಕ್ಷಣ ಕ್ಷೇತ್ರದ ನಿರ್ಲಕ್ಷ : SFI ಆರೋಪ

Koppal ಇಂದು ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿರುವ ಬಜೆಟ್ ಕಳೆದಬಾರಿಗಿಂತ ಗಾತ್ರದಲ್ಲಿ ದೊಡ್ಡದಾಗಿ ಕಾಣುತ್ತಿದೆ. ಆದರೆ ಶಿಕ್ಷಣ ಕ್ಷೇತ್ರವನ್ನು ದೊಡ್ಡ ಪ್ರಮಾಣದಲ್ಲಿ ನಿರ್ಲಕ್ಷಿಸಲಾಗಿದೆ. ಕಳೆದ ಬಾರಿ ಶಿಕ್ಷಣಕ್ಕೆ 11.68 ರಷ್ಟು ಹಣ ಮೀಸಲಿಟ್ಟಿದ್ದರು. ಈ ಬಾರಿ ಕೇವಲ 11% ನಷ್ಟು ಮೀಸಲಿಟ್ಟಿದ್ದಾರೆ. ಆ ಮೂಲಕ 0.68% ಹಣ ಕಡಿತ ಮಾಡುವ ಮೂಲಕ ವಿದ್ಯಾರ್ಥಿ ವಿರೋದಿ ನೀತಿಯನ್ನು ಮುಂದುವರೆಸಿದೆ.

ವಿದ್ಯಾರ್ಥಿಗಳಿಗೆ ಉಚಿತಬಸ್ ಪಾಸ್ ನೀಡುವುದಾಗಿ ಹೇಳಿದ್ದ ಸರಕಾರ, ಬಜೆಟ್ ನಲ್ಲಿ ಆ ಬಗ್ಗೆ ಪ್ರಸ್ಥಾಪವನ್ನು ಮಾಡದೆ ದ್ರೋಹ ಎಸಗಿದೆ. ರಾಜ್ಯದಲ್ಲಿ 55 ಸಾವಿರಕ್ಕೂ ಹೆಚ್ಚು ಶಾಲೆಗಳು ಮೂಲ ಸೌಲಭ್ಯವಿಲ್ಲದೆ ನರಳುತ್ತಿವೆ. ಅವುಗಳಿಗೆ ಮೂಲಸೌಲಭ್ಯ ಕಲ್ಪಿಸುವ ಬದಲು ಕೇವಲ 5000 ಶಾಲೆಗಳಿಗೆ ಮೂಲ ಸೌಲಭ್ಯನೀಡುವುದಾಗಿ ಪ್ರಸ್ಥಾಪಿಸಿದೆ. 1000 ಶಾಲೆಗಳಿಗೆ ಮಾತ್ರ ಕಲಿಕಾಸಾಮಗ್ರಿಗಳಿಗೆ ಹಣ ತೆಗೆದಿಡಲಾಗಿದೆ. ಹಾಗಾದರೆ ಉಳಿದ ಶಾಲೆಗಳಿಗೆ ಕಲಿಕಾಸಾಮಗ್ರಿಗಳ ಅಗತ್ಯವಿಲ್ಲವೆ? ಸರಕಾರ ಈ ದ್ವಂದನೀತಿ ತಾರತಮ್ಯವನ್ನು ಹುಟ್ಟಿಸುತ್ತದೆ.

ಖಾಸಗಿ ಶಾಲೆಗಳನ್ನು ನಿಯಂತ್ರಿಸುವ ಬದಲು ಅವುಗಳಿಗೆ ಪೈಪೋಟಿ ನೀಡುವುದಕ್ಕಾಗಿ 1000 ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯಲು ಮುಂದಾಗಿರುವುದು ನಾಡದ್ರೋಹದ ಕೆಲಸವಾಗಿದೆ. ಸರಕಾರವೇ ಈ ರೀತಿ ಪೋಷಕರಿಗೆ ಇಂಗ್ಲೀಷ ವ್ಯಾಮೋಹವನ್ನು ತುಂಬುತ್ತಿರುವುದು ಅಪಾಯಕಾರಿ ನಡೆಯಾಗಿದೆ. ಹಾಗಾಗಿ ಇಂಗ್ಲೀಷ ಮಾಧ್ಯಮ ಶಾಲೆಗಳ ಸ್ಥಾಪನೆಯ ಪ್ರಸ್ಥಾಪವನ್ನು ಕೈ ಬಿಟ್ಟು, ಇಂಗ್ಲೀಷನ್ನು ಒಂದು ಭಾಷೆಯಾಗಿ ಕಲಿಸಬೇಕಿದೆ. ಸರಕಾರಿ ಶಾಲೆಗಳನ್ನು ಬಲಪಡಿಸಿ ಮಾತೃಭಾಷಾ ಶಿಕ್ಷಣಕ್ಕೆ ಮುಂದಾಗಬೇಕಿದೆ.

100 ಹಾಸ್ಟೇಲ್ ಗಳಿಗೆ ಸ್ವಂತ ಕಟ್ಟಡಕ್ಕೆ ಹಣ ನೀಡುವುದಾಗಿ ಜುಲೈ ತಿಂಗಳಲ್ಲಿ ಮಂಡಿಸಿದ್ದ ಬಜೆಟ್ ನಲ್ಲಿ ಹೇಳಲಾಗಿತ್ತು. ಅದನ್ನು ಜಾರಿ ಮಾಡದೆ ಮತ್ತೆ ಅದೇ ಭರವಸೆಯನ್ನು ಪುನರಾವರ್ತನೆ ಮಾಡಿದೆ. ಹಾಸ್ಟೇಲ್ ವಿದ್ಯಾರ್ಥಿಗಳ ಆಹಾರಭತ್ಯೆಯನ್ನು ಹೆಚ್ಚಿಸದಿರುವುದನ್ನು SFI ವಿರೋಧಿಸುತ್ತದೆ.

ನೇಮಕಾತಿಗಳ ಬಗ್ಗೆ ಸರಿಯಾದ ಪ್ರಸ್ಥಾಪವನ್ನು ಮಾಡದೆ ಉದ್ಯೋಗದ ಕುರಿತು ಕಾಲೇಜುಗಳಲ್ಲಿ ವಿಷಯವಾಗಿ ಕಲಿಸಲು ಪ್ರಸ್ಥಾಪಿಸಲಾಗಿದೆ. ಉದ್ಯೋಗವನ್ನು ಸೃಷ್ಟಿಮಾಡದೆ ಅದರ ಬಗ್ಗೆ ಅಧ್ಯಯನ ನಡೆಸಿದರೆ ಯಾವ ಪ್ರಯೋಜನವು ಸಿಗುವುದಿಲ್ಲ. ಈ ಮೂಲಕ ಉದ್ಯೋಗದ ಆಸೆಯಲ್ಲಿದ್ದವರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ.

ರಾಜ್ಯದಲ್ಲಿ 1,19 ಲಕ್ಷ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಅವರನ್ನು ಶಾಲೆಗೆ ಮರಳಿತರುವ ಮಹತ್ವಾಕಾಂಕ್ಷಿ ಯೋಜನೆಯನ್ನು ಪ್ರಸ್ಥಾಪಿಸಿಲ್ಲ.

ಒಟ್ಟಾರೆ ರಾಜ್ಯ ಸರಕಾರ ಶಿಕ್ಷಣಕ್ಕೆ ಹಣ ಕಡಿತ ಗೊಳಿಸುವ ಮೂಲಕ ಸಮಸ್ಯೆಗಳಲ್ಲಿ ನರಳುವಂತೆ ಮಾಡಿದೆ ಈ ಬಜೆಟ್ ನ್ನು ಭಾರತ ವಿದ್ಯಾರ್ಥಿ ಫೇರೇಷನ್ (SFI) ವಿರೋದಿಸುತ್ತದೆ.

ಎಂದು ವಿ.ಅಂಬರೀಷ್, ಗುರುರಾಜ್ ದೇಸಾಯಿ ಪ್ರತಿಕ್ರಿಯಡ ನೀಡಿದ್ದಾರೆ.

Please follow and like us:
error