ಫೆ. 28 ರಂದು ಜಿಲ್ಲೆಯಲ್ಲಿ ಪ್ರ.ದ.ಸ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆ : ನಿಷೇದಾಜ್ಞೆ ಜಾರಿ

ಕೊಪ್ಪಳ,  : ಪ್ರಥಮ ದರ್ಜೆ ಸಹಾಯಕರು ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳು ಇದೇ ಫೆ. 28 ರಂದು ಕೊಪ್ಪಳ ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಪರೀಕ್ಷೆಗಳು ದೋಷರಹಿತವಾಗಿ, ಸುಗಮ ಹಾಗೂ ಶಾಂತಿಯುತವಾಗಿ ನಡೆಯುವ ಉದ್ದೇಶದಿಂದ ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇದಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ಆದೇಶ ಹೊರಡಿಸಿದ್ದಾರೆ.
ಪ್ರಥಮ ದರ್ಜೆ ಸಹಾಯಕರು ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳು ಫೆ. 28 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 03-30 ಗಂಟೆಯವರೆಗೆ ಜಿಲ್ಲೆಯ ಕೊಪ್ಪಳ ಹಾಗೂ ಗಂಗಾವತಿ ತಾಲೂಕಿನ ಒಟ್ಟು 39 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿವೆ.  ಪರೀಕ್ಷಾ ಕೇಂದ್ರದ ಸುತ್ತಮುತ್ತಲಿನ 200 ಮೀಟರ್ ವ್ಯಾಪ್ತಿಯ ಪ್ರದೇಶದಲ್ಲಿ ಹಾಗೂ ಪರೀಕ್ಷಾ ಕೇಂದ್ರದಲ್ಲಿ ಯಾವುದೇ ರೀತಿಯ ಅಕ್ರಮ/ ಅವ್ಯವಹಾರ ನಡೆಯದಂತೆ ಸಿ.ಆರ್.ಪಿ.ಸಿ 1973ರ ಕಲಂ 144ನೇ ಕಲಂ ಅನ್ವಯ ನಿಷೇದಾಜ್ಞೆಯನ್ನು ಜಾರಿಗೊಳಿಸಲಾಗಿದ್ದು, ಇದರನ್ವಯ ನಿಷೇಧಿತ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಎಸ್.ಟಿ.ಡಿ., ಮೊಬೈಲ್, ಪೇಜರ್, ಜೆರಾಕ್ಸ್, ಟೈಪಿಂಗ್ ಮುಂತಾದವುಗಳವನ್ನು ನಿಷೇಧಿಸಲಾಗಿದೆ. ಪರೀಕ್ಷೆಯಲ್ಲಿ ಪ್ರವೇಶ ಪತ್ರ ಹೊಂದಿದ ವಿದ್ಯಾರ್ಥಿಗಳು ಹಾಗೂ ನಿಯೋಜಿತ ಶಿಕ್ಷಕರನ್ನು, ಜಾಗೃತ ದಳದವರನ್ನು ಹೊರತುಪಡಿಸಿ ಇನ್ನುಳಿದವರಿಗೆ ಪರವಾನಿಗೆ ಇಲ್ಲದೇ ಪರೀಕ್ಷಾ ಕೇಂದ್ರದಲ್ಲಿ ಪ್ರವೇಶ ಮಾಡುವುದನ್ನು ನಿಷೇಧಿಸಲಾಗಿದೆ. ನಿಷೇಧಿತ ವ್ಯಾಪ್ತಿಯಲ್ಲಿ ಜನರು ಮಾರಕಾಸ್ತçಗಳನ್ನು ಹಿಡಿದು ತಿರುಗಾಡುವುದನ್ನು ನಿಷೇಧಿಸಿದೆ. ಈ ಆದೇಶವು ಮದುವೆ, ಶವ ಸಂಸ್ಕಾರಗಳು ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಿಗೆ ಅನ್ವಯವಾಗುವುದಿಲ್ಲ ಎಂದು ಕೊಪ್ಪಳ ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.
ಪರೀಕ್ಷಾ ಕೇಂದ್ರಗಳ ವಿವರ ;
ಪ್ರಥಮ ದರ್ಜೆ ಸಹಾಯಕರು ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳು ಜಿಲ್ಲೆಯ ಕೊಪ್ಪಳ ಹಾಗೂ ಗಂಗಾವತಿ ತಾಲೂಕುಗಳಲ್ಲಿ ನಡೆಯಲಿದ್ದು, ಪರೀಕ್ಷಾ ಕೇಂದ್ರಗಳ ವಿವರ ಇಂತಿದೆ.  ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ (ಬಾಲಕರ) ಕಾಲೇಜು, ಸರ್ಕಾರಿ ಪದವಿ ಪೂರ್ವ ಬಾಲಕರ ಕಾಲೇಜು, ಸರ್ಕಾರಿ ಪ.ಪೂ ಬಾಲಕಿಯರ ಕಾಲೇಜು, ಸರಕಾರಿ ಪ್ರಥಮ ದರ್ಜೆ (ಬಾಲಕಿಯರ) ಕಾಲೇಜು, ಸರಕಾರಿ ಪದವಿ ಪೂರ್ವ ಕಾಲೇಜು ಭಾಗ್ಯನಗರ, ನವಚೇತನ ಪಿ.ಯು ವಿಜ್ಞಾನ ಕಾಲೇಜು ಭಾಗ್ಯನಗರ, ನ್ಯಾಷನಲ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಭಾಗ್ಯನಗರ, ಜ್ಞಾನಬಂಧು ಪ್ರೌಢ ಶಾಲೆ ಭಾಗ್ಯನಗರ, ಆದರ್ಶ ವಿದ್ಯಾಲಯ ಟಣಕನಕಲ್, ಮೊರಾರ್ಜಿ ದೇಸಾಯಿ ವಸತಿ ಶಾಲೆ ಟಣಕನಕಲ್, ಕೊಪ್ಪಳ ನಗರದ ಕುಷ್ಟಗಿ ರಸ್ತೆಯ ಕಾಳಿದಾಸ ಪ್ರೌಢ ಶಾಲೆ, ನ್ಯೂ ಆಕ್ಸ್ಫರ್ಡ್ ಪಬ್ಲಿಕ್ ಸ್ಕೂಲ್, ಗದಗ ರಸ್ತೆಯ ಮಿಲೇನಿಯಮ್ ಪಬ್ಲಿಕ್ ಸಿ.ಬಿ.ಎಸ್.ಸಿ ಶಾಲೆ ದದೇಗಲ್, ಎಸ್.ಎ ನಿಂಗೋಜಿ ಪಬ್ಲಿಕ್ ಸ್ಕೂಲ್ ದದೇಗಲ್, ವಿ.ಎಸ್.ಎಸ್. ಟ್ರಸ್ಟ್ ಪಿಯೋನಿಕ್ಸ್ ಬಿ.ಎಡ್. ಕಾಲೇಜು ದದೇಗಲ್, ಸರಕಾರಿ ಪಾಲಿಟೆಕ್ನಿಕ್ ಕಾಲೇಜು, ನ್ಯೂ ಎಕ್ಸಲೆಂಟ್ ಸ್ಕೂಲ್ ಮಂಗಳಾಪುರ ಕ್ರಾಸ್ (ಗದಗ ರಸ್ತೆ), ಸರಸ್ವತಿ ವಿದ್ಯಾಮಂದಿರ ಬಹದ್ದೂರ ಬಂಡಿ, ನಗರದ ನಿವೇದಿತಾ ಆಂಗ್ಲ ಮಾಧ್ಯಮ ಪ್ರೌಢ ಶಾಲೆ (ಹಮಾಲರ ಕಾಲೋನಿ), ನಗರದ ಗವಿಸಿದ್ದೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಶ್ರೀ ಗವಿಸಿದ್ದೇಶ್ವರ ಪಿ.ಯು. ಕಾಲೇಜು, ಶಿವಶಾಂತವೀರ ಪ್ರೌಢ ಶಾಲೆ (ಗವಿಮಠ ಆವರಣ),  ಶ್ರೀ ಗವಿಸಿದ್ದೇಶ್ವರ ಪ್ರೌಢ ಶಾಲೆ, ಶಾರದಾ ಇಂಟರ್ ನ್ಯಾಷನಲ್ ಸ್ಕೂಲ್ ಕಿಡದಾಳ, ಹೊಸಪೇಟೆ ರಸ್ತೆಯ ಎಸ್.ಎಫ್.ಎಸ್ ಶಾಲೆ ಹಾಗೂ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಮತ್ತು ಗಂಗಾವತಿಯ ಬೇಥಲ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಹೆಚ್.ಆರ್. ಶ್ರೀರಾಮುಲು ಮೆಮೊರಿಯಲ್ ಸ್ಮಾರಕ ಮಹಾವಿದ್ಯಾಲಯ ಆನೆಗೊಂದಿ ರಸ್ತೆ, ಎನ್.ಕೆ.ಎನ್.ಜಿ (ಬ್ಲಾಕ್-ಎ) ಸರಕಾರಿ ಡಿಗ್ರಿ ಕಾಲೇಜು, ಎನ್.ಕೆ.ಎನ್.ಜಿ (ಬ್ಲಾಕ್-ಬಿ) ಸರಕಾರಿ ಡಿಗ್ರಿ ಕಾಲೇಜು, ಸರಕಾರಿ ಎಮ್.ಎನ್.ಎಮ್. ಬಾಲಕಿಯರ ಪಿ.ಯು ಕಾಲೇಜು, ಸರಕಾರಿ ಬಾಲಕರ ಪಿ.ಯು ಕಾಲೇಜು, ಲಯನ್ಸ್ ಪಿ.ಯು ಕಾಲೇಜು, ಲಿಟ್ಲ್ ಹಾರ್ಟ್ಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಎಸ್.ಕೆ.ಎಸ್. ಟ್ರಸ್ಟ್ ಕಲ್ಮಠ ಡಿ.ಇಡಿ ಕಾಲೇಜು ಪಂಪಾನಗರ, ಕೊಟ್ಟೂರೇಶ್ವರ ಪಿ.ಯು. ಕಾಲೇಜು, ಕಲ್ಮಠ ಚನ್ನಬಸವಸ್ವಾಮಿ ಕಲಾ ಮತ್ತು ವಾಣಿಜ್ಯ ಬಾಲಕಿಯರ ಡಿಗ್ರಿ ಕಾಲೇಜು, ಚೈತನ್ಯ (ಸಪ್ತಗಿರಿ) ಟೆಕ್ನೋ ಸ್ಕೂಲ್ ಹಾಗೂ ಕೆ.ಎಲ್.ಇ. ಸೊಸೈಟಿ ಇಂಡಿಪೆAಡೆAಟ್ ಪಿ.ಯು. ಕಾಲೇಜಿನಲ್ಲಿ ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.

Please follow and like us:
error