ಫೆ.೧೬ ರಿಂದ ಕೊಪ್ಪಳದಲ್ಲಿ ದ್ರಾಕ್ಷಿ ಮತ್ತು ದಾಳಿಂಬೆ ಮೇಳ


ದ್ರಾಕ್ಷಿ ಮತ್ತು ದಾಳಿಂಬೆ ಪ್ರದರ್ಶನ ಮತ್ತು ಮಾರಾಟ ಮೇಳ : ಕೃಷಿ ತಾಂತ್ರಿಕ ಕಾರ್ಯಾಗಾರ
ಕೊಪ್ಪಳ ಫೆ. : ಕೊಪ್ಪಳ ತೋಟಕಾರಿಕೆ ಇಲಾಖೆ (ಜಿ.ಪಂ.) ವತಿಯಿಂದ “ದ್ರಾಕ್ಷಿ ಮತ್ತು ದಾಳಿಂಬೆ” ಪ್ರದರ್ಶನ ಮತ್ತು ಮಾರಾಟ ಮೇಳ ಹಾಗೂ ತಾಂತ್ರಿಕ ಕಾರ್ಯಾಗಾರವನ್ನು ಫೆ. ೧೬ ರಿಂದ ೧೮ ರವರೆಗೆ ಆಯೋಜಿಸಲಾಗಿದ್ದು, ಕಾರ್ಯಕ್ರಮದ ಉದ್ಘಾಟನಾ ಸಮಾರಂಭವನ್ನು ಫೆ. ೧೬ ರಂದು ಬೆಳಿಗ್ಗೆ ೧೧ ಗಂಟೆಗೆ ಕೊಪ್ಪಳ ತೋಟಗಾರಿಕೆ ಕಛೇರಿ ಆವರಣದಲ್ಲಿ ಏರ್ಪಡಿಸಲಾಗಿದೆ.
ಕೊಪ್ಪಳ ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಹೆಚ್. ವಿಶ್ವನಾಥ ರೆಡ್ಡಿ ಅವರು ಕಾರ್ಯಕ್ರಮದ ಉದ್ಘಾಟನೆ ನೆರೆವೇರಿಸುವರು. ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಸಮಾರಂಭದ ಅಧ್ಯಕ್ಷತೆ ವಹಿಸುವರು. ಸಂಸದ ಕರಡಿ ಸಂಗಣ್ಣ ಅವರು ತಾಂತ್ರಿಕ ಕೈಪಿಡಿ ಬಿಡುಗಡೆಗೊಳಿಸುವರು. ಮುಖ್ಯ ಅತಿಥಿಗಳಾಗಿ ಶಾಸಕರುಗಳಾದ ಅಮರೇಗೌಡ ಪಾಟೀಲ್ ಬಯ್ಯಾಪುರ, ಪರಣ್ಣ ಈಶ್ವರಪ್ಪ ಮುನವಳ್ಳಿ, ಹಾಲಪ್ಪ ಆಚಾರ ಹಾಗೂ ಬಸವರಾಜ ದಢೇಸೂಗೂರು, ವಿಧಾನಪರಿಷತ್ ಸದಸ್ಯರುಗಳಾದ ಬಸವರಾಜ ಪಾಟೀಲ ಇಟಗಿ, ಡಾ. ಚಂದ್ರಶೇಖರ ಬಿ. ಪಾಟೀಲ ಹಾಗೂ ಶರಣಪ್ಪ ಮಟ್ಟೂರ, ಜಿ.ಪಂ. ಉಪಾಧ್ಯಕ್ಷೆ ರತ್ನವ್ವ ಭರಮಪ್ಪ ನಗರ, ತಾ.ಪಂ ಅಧ್ಯಕ್ಷ ಬಾಲಚಂದ್ರನ್, ಕೃಷಿ ಮತ್ತು ಕೈಗಾರಿಕಾ ಸ್ಥಾಯಿಸಮಿತಿ ಅಧ್ಯಕ್ಷ ಗೂಳಪ್ಪ ಹಲಗೇರಿ, ಜಿಲ್ಲಾ ಹಾಪ್‌ಕಾಮ್ಸ್ ಅಧ್ಯಕ್ಷ ಯಂಕಣ್ಣ ಯರಾಶಿ, ಕೊಪ್ಪಳ ಅಭಿನವಶ್ರೀ ತೋಟಗಾರಿಕೆ ರೈತ ಉತ್ಪಾದಕರ ಕಂಪನಿ ಲಿ. ಅಧ್ಯಕ್ಷ ಕೆ. ಶಿವರಾಮಮಪ್ಪ ಕುರಿ, ಕರ್ನಾಟಕ ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಹಮಂಡಳಿ ಅಧ್ಯಕ್ಷ ಬಸವರಾಜ ಆರ್. ಪಾಟೀಲ್, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಶಿವಣ್ಣ ಮೂಲಿಮನಿ, ಕಪಿಲತೀರ್ಥ ತೋಟಗಾರಿಕೆ ಬೆಳೆಗಾರರ ರೈತ ಉತ್ಪಾದಕ ಕಂಪನಿ ಲಿ. ಅಧ್ಯಕ್ಷ ಸಿದ್ದನಗೌಡ ಹೆಚ್.ಪೊಲೀಸ್ ಪಾಟೀಲ್, ಯಲಬುರ್ಗಾ ತೋಟಗಾರಿಕ ರೈತ ಉತ್ಪಾದಕ ಕಂಪನಿ ಲಿ. ಅಧ್ಯಕ್ಷ ಮಲ್ಲಪ್ಪ ಸಿದ್ದಪ್ಪ ಕೋನನಗೌಡ ಪಾಲ್ಗೊಳ್ಳುವರು.
ಕಾರ್ಯಾಗಾರದ ಅಂಗವಾಗಿ ತಾಂತ್ರಿಕ ಉಪನ್ಯಾಸಕರಾಗಿ ಬಾಗಲಕೋಟೆ ತೋಟಗಾರಿಕೆಗಳ ವಿಜ್ಞಾನಗಳ ವಿಶ್ವ ವಿದ್ಯಾಲಯದ ಡಿ.ಆರ್. ಪಾಟೀಲ್, ಬಾಗಲಕೋಟೆ ತೋಟಗಾರಿಕೆಗಳ ವಿಜ್ಞಾನಗಳ ವಿಶ್ವ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ (ಹಣ್ಣು ವಿಭಾಗ) ಡಾ.ಆನಂದ ನಂಜಪ್ಪನವರ ಹಾಗೂ ಕಲಬುರ್ಗಿಯ ಪ್ರಗತಿಪರ ದ್ರಾಕ್ಷಿ ಬೆಲೆಗಾರರು ಮತ್ತು ರಫ್ತುದಾರರಾದ ಗುರುಪ್ರಸಾದ ಪಟಾಟೆ ಭಾಗವಹಿಸುವರು. ವಿಶೇಷ ಆಹ್ವಾನಿತರಾಗಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸರ್ಕಾರದ ಕಾರ್ಯದರ್ಶಿ ಉಮಾ ಮಹದೇವನ್, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಎಮ್. ಮಹೇಶ್ವರ್‌ರಾವ್, ಲಾಲ್‌ಬಾಗ್ ತೋಟಗಾರಿಕೆ ನಿರ್ದೇಶಕರು ವೈ.ಎಸ್. ಪಾಟೀಲ್, ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ಎಸ್. ಪೆದ್ದಪ್ಪಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೇಣುಕಾ ಕೆ. ಸುಕುಮಾರ್, ಲಾಲ್‌ಬಾಗ್ ತೋಟಗಾರಿಕೆ ಅಪರ ನಿರ್ದೇಶಕರಾದ (ತಾಳೆ ಬೆಳೆ) ಹೆಚ್.ಎಸ್. ಶಿವಕುಮಾರ, ಲಾಲ್‌ಬಾಗ್, ಲಾಲ್‌ಬಾಗ್ ತೋಟಗಾರಿಕೆ ಅಪರ ನಿರ್ದೇಶಕರಾದ (ಹಣ್ಣುಗಳು) ಕೆ.ಎಂ.ಪರಮಶಿವಮೂರ್ತಿ, ಲಾಲ್‌ಬಾಗ್ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಕಾರ್ಯನಿರ್ವಾಹಕ ನಿರ್ದೇಶಕರಾದ ಕೆ.ಬಿ. ದುಂಡಿ, ತೋಟಗಾರಿಕೆ ಜಂಟಿ ನಿರ್ದೇಶಕರು ಹಾಗೂ ಜಿಲ್ಲಾ ನೋಡಲ್ ಅಧಿಕಾರಿ ಲಕ್ಷ್ಮೀ ಡಿ. ರಾಜು, ಬೆಂಗಳೂರು ತೋಟಗಾರಿಕೆ ಜಂಟಿ ನಿರ್ದೇಶಕರಾದ ಹೇಮಾ, ಕಲಬುರಗಿ ವಿಭಾಗದ ತೋಟಗಾರಿಕೆ ಜಂಟಿ ನಿರ್ದೇಶಕರು ಎಸ್.ಬಿ. ದಿಡ್ಡಿಮನಿ, ಮುನಿರಾಬಾದ್ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ. ಪಿ.ಎಂ. ಗಂಗಾಧರಪ್ಪ, ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ವಿಸ್ತರಣಾ ಮುಂದಾಳು ಡಾ. ಎಮ್.ಬಿ ಪಾಟೀಲ್, ಜಿಲ್ಲಾ ವಾರ್ತಾಧಿಕಾರಿ ಬಿ. ಧನಂಜಯಪ್ಪ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಕೊಪ್ಪಳ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:

Related posts