ಫೆಬ್ರುವರಿ 27 ಕ್ಕೆ ಎನ್.ಪಿ.ಎಸ್ ನೌಕರರ ಸಮಾಲೋಚನೆ ಸಭೆ

ಕೊಪ್ಪಳ :- ನೂತನ ಪಿಂಚಣಿ ಯೋಜನೆ ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಲು ಈಗಾಗಲೇ ರಾಜ್ಯಾದ್ಯಾಂತ ಅನೇಕ ಹೋರಾಟಗಳ ಫಲವಾಗಿ ಕರ್ನಾಟಕದ ಘನ ಸರ್ಕಾರವು ಮಾನ್ಯ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ

ಅಧಿಕಾರಿಗಳ ಸಮಿತಿಯನ್ನು ರಚಿಸಿರುತ್ತದೆ. ಅಧಿಕಾರಿಗಳ ಸಮಿತಿಯು ಎನ್.ಪಿ.ಎಸ್ ಯೋಜನೆ ರದ್ದತಿ ಬಗ್ಗೆ ಈಗಾಗಲೇ ಅಧ್ಯಯನ ನಡೆಸುತ್ತಿದೆ. ಅಧಿಕಾರಿಗಳ ಸಮಿತಿಯ ಮುಂದೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ವಿವರವಾದ ಹಾಗೂ ಸಮರ್ಥನೀಯವಾದ ಮಾಹಿತಿಯನ್ನು ಸಲ್ಲಿಸಬೇಕಾಗಿರುತ್ತದೆ. ಹಾಗೂ ನೂತನ ಪಿಂಚಣಿ ಯೋಜನೆಯನ್ನು ರದ್ದುಪಡಿಸಲು ಸಂಘವು ಮುಂದಿನ ಹೋರಾಟಕ್ಕೆ ಅಣಿಯಾಗಬೇಕಾಗಿರುತ್ತದೆ. ಕಾರಣ ನೂತನ ಪಿಂಚಣಿ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ ಕೊಪ್ಪಳ ಜಿಲ್ಲೆಯ ರಾಜ್ಯ ಸರ್ಕಾರಿ ನೌಕರರ ಅಭಿಪ್ರಾಯ ಸಂಗ್ರಹಿಸಲು ಹಾಗೂ ಸಲಹೆಗಳನ್ನು ಪಡೆಯಲು ತೀರ್ಮಾನಿಸಿರುವದರಿಂದ ಎನ್.ಪಿ.ಎಸ್. ನೌಕರರ ಸಮಾಲೋಚನಾ ಸಭೆಯನ್ನು ಇದೇ ದಿನಾಂಕ 27-02-2019 ರಂದು ಸಾಯಂಕಾಲ 5.30 ಕ್ಕೆ ಕೊಪ್ಪಳದ ಸರ್ಕಾರಿ ನೌಕರರ ಭವನದಲ್ಲಿ ಏರ್ಪಡಿಸಲಾಗಿದೆ. ಕಾರಣ ನೂತನ ಪಿಂಚಣಿ ಯೋಜನೆಗೆ ಒಳಪಡುವ ಸಂಘದ ಎಲ್ಲ ಪದಾಧಿಕಾರಿಗಳು ಹಾಗೂ ಎನ್.ಪಿ.ಎಸ್. ನೌಕರರು ಹಾಗೂ ಎಲ್ಲ ಇಲಾಖೆಗಳ ವೃಂದ ಸಂಘಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸದರಿ ಸಭೆಯಲ್ಲಿ ಪಾಲ್ಗೊಂಡು ಸೂಕ್ತ ಸಲಹೆಗಳನ್ನು ನೀಡಲು ಜಿಲ್ಲಾ ಅಧ್ಯಕ್ಷರಾದ ನಾಗರಾಜ ಆರ್ ಜುಮ್ಮನ್ನವರ, ಹಾಗೂ ಕಾರ್ಯದರ್ಶಗಳಾದ ಶಿವಪ್ಪ ಜೋಗಿ, ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Please follow and like us:
error