ಪ್ರೊ.ಕೆ.ಎಸ್.ಭಗವಾನ್ ಮುಖಕ್ಕೆ ಮಸಿ : ವಿಚಾರವನ್ನು ವಿಚಾರದಿಂದಲೇ ಗೆಲ್ಲಬೇಕು

Kannadanet NEWS ಕೋರ್ಟಿಗೆ ಹಾಜರಾಗಿ ಅಂಗರಕ್ಷಕರೊಂದಿಗೆ ಮರಳುತ್ತಿರುವಾಗ ಮೀರಾ ರಾಘವೇಂದ್ರ ಎಂಬ ವಕೀಲರು ಪ್ರೊ.ಕೆ.ಎಸ್.ಭಗವಾನ್ ಅವರ ಮುಖಕ್ಕೆ ಮಸಿ ಹಚ್ಚಿ ವೀಡಿಯೋ ಮಾಡಿ ಅವರೊಂದಿಗೆ ವಾದಕ್ಕಿಳಿದದ್ದು ಒಂದು ವಿಚಿತ್ರ ಘಟನೆ. ಹಿಂದೂ ಧರ್ಮದ ಬಗ್ಗೆ ವಿಮರ್ಶಾತ್ಮಕವಾಗಿ ಮಾತನಾಡುವ ವಾತಾವರಣ ಉಳಿದಿಲ್ಲ. ಹಿಂದೆ ವಿವೇಕಾನಂದರು, ಮಹಾತ್ಮಾಗಾಂಧಿಯವರು ಮತ್ತು ಅನೇಕ ವಿದ್ವಾಂಸರು ವಿಮರ್ಶಿಸಿದ್ದಾರೆ. ಪ್ರತಿಧರ್ಮದಲ್ಲಿಯೂ ಈ ಕಾಲಕ್ಕೆ ಒಗ್ಗದ ಅನೇಕ ವಿಚಾರಗಳಿರುತ್ತವೆ. ಅದನ್ನು ವಿಮರ್ಶಿಸಿ ತಿದ್ದಿಕೊಂಡರೆ ನಾವು ನಿಜವಾದ ಆಧುನಿಕರಾಗುತ್ತೇವೆ.
ಶಂಕರಾಚಾರ್ಯ ಮತ್ತು ಪ್ರತಿಗಾಮಿತನ, ಕುವೆಂಪು ಯುಗ, ಬದಲಾವಣೆ, ರಾಮಮಂದಿರ ಏಕೆ ಬೇಡ? ಮುಂತಾದ ಕೃತಿಗಳ ಮೂಲಕ ಅವರು ನಾಡಿನ ಪ್ರಜ್ಞಾವಂತರ, ಮಹಾಕವಿ ಕುವೆಂಪು ಅವರ ಗಮನಸೆಳೆದ ಲೇಖಕರು. ಅವರ ವಿಚಾರಗಳನ್ನು ಒಪ್ಪದವರು ವಿಮರ್ಶಿಸಲಿ, ಟೀಕಿಸಲಿ. ಕೊಲ್ಲಲು ಪ್ರಯತ್ನಿಸುವದು, ಅಪಮಾನಗೊಳಿಸಲು ಯತ್ನಿಸುವದು ಹೇಡಿತನದ ಕೃತ್ಯವಾಗಿದೆ. ವಿಮರ್ಶೆಯಿಂದ ದೂರ ಇರುವವರು ಬೆಳೆಯಲಾರರು. ಎಲ್ಲರಿಗೂ ಒಂದು ಕಾಲವಿರುವಂತೆ ಇದು ಮೂಲಭೂತವಾದಿಗಳ ಕಾಲ. ಇದು ಬಹಳ ದಿನ ನಡೆಯಲಾರದು. ಏಕಸಂಸ್ಕೃತಿ ಹೇರಿಕೆ ವಿರುದ್ಧ ಬಹುಸಂಸ್ಕೃತಿಯ ಬರಹಗಾರರು ಎಚ್ಚರಗೊಳ್ಳುವ ಅಗತ್ಯವಿದೆ.
ಭಗವಾನರೇ ನೀವು ಅಂಜಬೇಕಾಗಿಲ್ಲ. ನಮ್ಮ ಲೇಖಕರನ್ನು ಅವರು ಕೊಂದಿದ್ದಾರೆ. ದೇಶದಲ್ಲಿ ಹೋರಾಟದ ಪ್ರಜ್ಞೆ ದುಡಿಯುವ ಜನರಲ್ಲಿ ಕಾಣಿಸಿಕೊಂಡಿದ್ದು ಇನ್ನೂ ಕೆಲವು ಕಾಲ ನಮ್ಮನ್ನು ನಾವು ಸಂಯಮದ ವಿಚಾರಧಾರೆ ಮೂಲಕ ಜನರ ಗಮನ ಸೆಳೆಯೋಣ. ನಿಮ್ಮ ವಿಚಾರಗಳು ಸ್ಪಷ್ಟವಾಗಿ ನಿಮ್ಮ ಕೃತಿಗಳಲ್ಲಿ ಮಡುಗಟ್ಟಿವೆ. ಚಿಕ್ಕ ಚಿಕ್ಕ ವೇದಿಕೆಗಳಲ್ಲಿ ನಾಡಿನ ಜನರನ್ನು ಜಾಗೃತಗೊಳಿಸೋಣ. ಪ್ರಚೋದನೆಯ ಟಿ.ವಿ.ಮಾಧ್ಯಮದಲ್ಲಿ ಪಾಲ್ಗೊಂಡು ಸಂದರ್ಶನ ನೀಡಬೇಡಿ ಎಂದು ವಿನಂತಿಸುತ್ತೇವೆ.

ಅಲ್ಲಮಪ್ರಭು ಬೆಟ್ಟದೂರು.ವಿಠ್ಠಪ್ಪ ಗೋರಂಟ್ಲಿ ,ಎಚ್.ಎಸ್.ಪಾಟೀಲ ಎ.ಎಂ.ಮದರಿ
ಬಸವರಾಜ ಆಕಳವಾಡಿ ಖಾಸಿಂ ಸಾಹೇಬ ಶಾಂತಾದೇವಿ ಹಿರೇಮಠ ಈಶ್ವರ ಹತ್ತಿ ಡಿ.ಎಚ್.ಪೂಜಾರ ಡಾ.ವಿ.ಬಿ.ರಡ್ಡೇರ ವಿಜಯಅಮೃತರಾಜ

Please follow and like us:
error