ಪ್ರೀತಿಸಿ ಮದುವೆಯಾದ ದಲಿತ ಹುಡುಗನನ್ನು ಕೊಂದ ಜಾತಿ ಭಾರತ

ಎಲ್ಲಿದೆ ಜಾತಿ ಎಂಬ ಭೂಪರು ದಯವಿಟ್ಟು ಓದಿ…..

ಮರ್ಯಾದೆ ಹತ್ಯೆ ಅದು ಮೆಲ್ವರ್ಗದ ಜನರಿಗೆ ಮಾತ್ರ ಆದರೆ ಅಸ್ಪೃಶ್ಯ ಜನರ ಮರ್ಯಾದೆ ಹೀನರಾ? ಅವರ ಜೀವ ತೆಗೆದು ಜಾತಿ ಆಹಂ ನಿಂದ ಬೀಗುವ ಜನರಿಗೆ ಧರ್ಮ ಜಾತಿ ಅದು ರಾಕ್ಷಸರಿಗೆ ಸಮಾನವಾದದ್ದು…..
ಹಿಂದೂ ನಾವೆಲ್ಲರೂ ಒಂದೇ ಬಾಯ ಚಪಲಕ್ಕೆ ಅನ್ನುವ ಅವಿವೇಕಗಳು ಇಲ್ಲಿ ನೋಡಿ….ಜಾತಿ ಭಾರತ ಇದು, ಪ್ರೀತಿಸಿ ಮದುವೆಯಾದ ದಲಿತ ಹುಡುಗನನ್ನು ಕೊಂದಿದ್ದು ಇದೇ ಜಾತಿ ಭಾರತ .

ತೆಲಂಗಾಣದಲ್ಲಿ ಪ್ರೀತಿಸಿ ಮದುವೆಯಾಗಿದ್ದ ದಲಿತನನ್ನು ಜಾತಿ ಪ್ರತಿಷ್ಠೆಗಾಗಿ ಕೊಂದ ಹುಡುಗಿಯ ತಂದೆ ಈತನ ಹೆಸರು ಪ್ರಣಯ್. ಹೈಸ್ಕೂಲಿನಲ್ಲಿ ಓದುತ್ತಿರುವಾಗಿನಿಂದಲೇ ತನ್ನ ಸ್ನೇಹಿತೆಯನ್ನ ಪ್ರೀತಿಸುತ್ತಿದ್ದ. ಹುಡುಗಿ ಕೋಮಟಿ(ವೈಶ್ಯರು) ಮೇಲ್ಜಾತಿಗೆ ಸೇರಿದಾಕೆ. ಪ್ರಣಯ್ ದಲಿತ(ಮಾದಿಗ) ಸಮುದಾಯಕ್ಕೆ ಸೇರಿದ ಹುಡುಗ. ಇಬ್ಬರ ಪ್ರೀತಿ ಹುಡುಗಿ ಮನೆಯಲ್ಲಿ ಗೊತ್ತಾದ ಕೂಡಲೇ ಆಕೆ ತಂದೆ ಪ್ರಣಯ್ಗೆ ವಾರ್ನ್ ಮಾಡಿದ್ಧಾರೆ. ಜೊತೆಗೆ ನಿನಗೆ 3 ಕೋಟಿ ರೂಪಾಯಿ ಕೊಡುವೆ ನನ್ನ ಮಗಳನ್ನು ಬಿಟ್ಟುಬಿಡಿ ಎಂದು ಪ್ರಣಯ್ಗೆ ತಾಖೀತು ಮಾಡಿದ್ಧಾರೆ.

ದುಡ್ಡಿನ ಆಮೀಷಕ್ಕೆ ಒಳಗಾಗದ ಪ್ರಣಯ್ ಮತ್ತು ಆಕೆ ಓಡಿ ಹೋಗಿ ಮದುವೆಯಾಗಿದ್ಧಾರೆ. ನಂತರ ವಿಜಯವಾಡದಲ್ಲಿ ಒಂದು ವರ್ಷದ ತನಕ ಯಾರಿಗೂ ಗೊತ್ತಿಲ್ಲದೆ ಈ ದಂಪತಿ ಸಾಂಸರಿಕ ಜೀವನ ನಡೆಸಿದೆ.ಒಂದು ವರ್ಷ ಕಳೆಯುತ್ತಿದ್ದಂತೆ ಜೋಡಿ ತವರೂರಿಗೆ ವಾಪಸ್ಸಾಗಿದೆ. ಸಹಜವಾಗಿ ಹುಡುಗಿ ತಂದೆ ಕಡೆಯಿಂದ ಪ್ರಣಯ್ಗೆ ಜೀವ ಬೆದರಿಕೆಗಳು ಬರಲಾರಂಭಿಸುತ್ತವೆ. ಆದರೆ, ವಿವಾಹಿತ ಜೋಡಿ ಸ್ಥಳೀಯ ಡಿಐಜಿ ಪೊಲೀಸ್ ಮೊರೆ ಹೋಗುತ್ತಾರೆ. ಡಿಐಜಿ ಪೊಲೀಸ್ ಆಫೀಸರ್ ಈ ಜೋಡಿಗೆ ಭದ್ರತೆ ನೀಡುವಂತೆ ಸ್ಥಳೀಯ ಪೊಲೀಸರಿಗೆ ಸೂಚಿಸುತ್ತಾರೆ. ನಂತರ ಹುಡುಗಿ ಕಡೆಯವರಿಗೆ ಒಂದು ಸುತ್ತ ಕೌನ್ಸಿಲಿಂಗ್ ಮಾಡಿ ವಾರ್ನ್ ಮಾಡಲಾಗುತ್ತದೆ. ಅವರು ಜೋಡಿ ಮದುವೆಯನ್ನು ಒಪ್ಪಿಕೊಂಡ ಹಾಗೇ ನಾಟಕವಾಡುತ್ತಾರೆ.

ಕೆಲವು ದಿನಗಳ ಕಾಲ ಪ್ರಣಯ್ ಕೂಡ ಹುಡುಗಿ ಮೆನಗೆ ಹೋಗುವುದು ಬರುವುದು ನಡೆಯುತ್ತದೆ. ಆದರೆ, ತನ್ನ ಮಾವ ಪ್ರಣಯ್ನನ್ನು ಕೊಲ್ಲುವ ಸಮಯಕ್ಕಾಗಿ ಕಾದುಕುಳಿತ್ತಿದ್ದ.

ಈಗ ಪ್ರಣಯ್ ಹೆಂಡತಿ ಗರ್ಭಿಣಿ. ಇಬ್ಬರು ಹೈದರಬಾದ್ಗೆ ಆಸ್ಪತ್ರೆಗೆ ಹೋಗಿ ಬರುವಾಗ ಕಿಡಿಗೇಡಿಯೋರ್ವ ಮಚ್ಚಿನಿಂದ ಪ್ರಣಯ್ನನ್ನು ಕೊಚ್ಚಿಹಾಕುತ್ತಾನೆ. ನಂತರ ಈ ಹತ್ಯೆಯ ಹಿಂದೆ ಮಾವನ ಕೈವಾಡವಿದೆ ಎಂದು ಸಾಬಿತಾಗುತ್ತದೆ. ಪ್ರೇಮಿಸಿ ಅಂತರ್ಜಾತಿ ವಿವಾಹವಾದ ಮುದ್ದು ಜೋಡಿ ಭಾರೀ ಸಂತೋಷದಿಂದ ಜೀವನ ನಡೆಸುತ್ತಿತ್ತು. ಈ ಜೋಡಿಯನ್ನು ಹುಡುಗಿ ತಂದೆಯೇ ಕೊಂದು ಹಾಕಿದ್ಧಾನೆ. ಮಗಳ ಸಂತೋಷಕ್ಕಿಂತ ಜಾತಿ ಮುಖ್ಯ, ಹೀಗಾಗಿ ಕೊಂದೆ ಎಂದು ಪೊಲೀಸರ ಬಳಿ ಹಂಚಿಕೊಂಡಿದ್ಧಾನೆ.

ಎಲ್ಲಿದೆ ಜಾತಿ ಎಂಬ ಭೂಪರು ದಯವಿಟ್ಟು ಓದಿ. ಇಲ್ಲಿ ತಮ್ಮ ವೆಡ್ಡಿಂಗ್ ವಿಡಿಯೋ ಪೋಸ್ಟ್ ಮಾಡಿರುವೆ. ಜೋಡಿ ಎಷ್ಟು ಪ್ರೀತಿಯನ್ನು ಹೃದಯದಲ್ಲಿ ಕಾಪಿಟ್ಟುಕೊಂಡು ಬದುಕುತ್ತಿತ್ತು ಎಂದು ಗೊತ್ತಾಗುತ್ತದೆ. ಗಂಡ ಸತ್ತ ಈಗ ಆಕೆ ಗರ್ಭಿಣಿ. ದುಡ್ಡು, ಆಸ್ತಿ, ಪ್ರತಿಷ್ಠೆಯಿಂದ ಮಗಳಿಗೆ ಸಂತೋಷ ಕೊಡಲಾದಿತೇ.

ಎಂತಹ ಕ್ರೂರ ಜಗತ್ತಿನಲ್ಲಿ ಬದಕುತ್ತಿದ್ದೆವೆ
ಜಾತಿ ಕಾರಣಕ್ಕಾಗಿ ಮನುಷ್ಯರನ್ನು ಕೊಲ್ಲುವ ಅನಾಗರಿಕತೆ ..

Hanumesh gundur

https://www.facebook.com/hanumesh.gundur.7?hc_ref=ARS3NokmavlR6J-rNBau3GkLadbc6F42J-0ZsQChkPi0koVAp4xAaNdh_5VEYKDk2t0&fref=nf&__xts__%5B0%5D=68.ARDzuuoeqRt48HiXQAZwEAqK-vKR6iOmXVDnTbrCycZhdFw74YPg42cLEbgLdAH2v7rmUsIz18IUioi_SZ022P3WjeM7ScRCDGMe7Apr1oDhm_l1O6WSFLlPpOAgpo3ro5YIZNQQVkIJsfOIQp415_xYS7kRJAmknn6oQInO3yGpDLGpKWZm&__tn__=C-R

Please follow and like us:
error