ಪ್ರಭಾಕರ ಕೋರೆ-ಕತ್ತಿ ಬ್ರದರ್ಸ್ ಗೆ ಬಿಗ್ ಶಾಕ್

ಬೆಂಗಳೂರು : ಉಮೇಶ ಕತ್ತಿ ಶಿಷ್ಯ ಬೆಳಗಾವಿಯ  ಈರಣ್ಣಾ ಕಡಾಡಿ ಗೆ ರಾಜ್ಯಸಭಾ ಟಿಕೆಟ್  ನೀಡಿದ ಬಿಜೆಪಿ ಪಕ್ಷ  ಈ ಮೂಲಕ ಪ್ರಭಾಕರ ಕೋರೆ ಕತ್ತಿ ಬ್ರದರ್ಸಗೆ ಶಾಕ್ ನೀಡಿದೆ. ಹಲವಾರು ವರ್ಷಗಳಿಂದ ಪಕ್ಷ ನಿಷ್ಠಾವಂತ ಕಾರ್ಯಕರ್ತರು ಎಂದು ಗುರುತಿಸಿಕೊಂಡಿರುವ ರಾಯಚೂರಿನ ಅಶೋಕ ಗಸ್ತಿಯವರನ್ನ ಹಾಗೂ ಈರಣ್ಣ ಕಡಾಡಿಗೆ ಬಿಜೆಪಿ ರಾಜ್ಯ ಸಭಾ ಟಿಕೇಟ್ ಘೋಷಣೆ ಮಾಡಿದೆ.  ಬಿಜೆಪಿ ಪ್ರಭಾರಿಯಾಗಿರುವ ಈರಣ್ಣಾ ಕಡಾಡಿ  ಕಳೆದ  30 ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ಕೆಲಸ ಮಾಡುತ್ತಿದ್ಧಾರೆ.  ಉಮೇಶ ಕತ್ತಿ ನಾಯಕತ್ವದಲ್ಲಿ ಮೊದಲಿನಿಂದಲೂ ಕೆಲಸ ಮಾಡಿರುವ ಈರಣ್ಣಾ ಕಡಾಡಿಗೆ ಟಿಕೆಟ್ ನೀಡುವ ಮೂಲಕ ಅವರಿಗೆ ಶಾಕ್ ನೀಡಿದೆ.

Please follow and like us:
error