ಪೌರತ್ವ ತಿದ್ದುಪಡಿ ಕಾಯ್ದೆ : ಕೇಂದ್ರ ಸರಕಾರಕ್ಕೆ  ಸುಪ್ರೀಂ ಕೋರ್ಟ್ ನೋಟಿಸ್

ಹೊಸದಿಲ್ಲಿ, ಡಿ.19: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಸಿದ ಮನವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಬುಧವಾರ  ಕೇಂದ್ರ ಸರಕಾರಕ್ಕೆ  ನೋಟಿಸ್ ಜಾರಿಗೊಳಿಸಿದೆ. ಆದರೆ ಹೊಸ ಕಾನೂನನ್ನು ತಡೆಯಲು ನಿರಾಕರಿಸಿದೆ.

ಜನವರಿ ಎರಡನೇ ವಾರದೊಳಗೆ ಸ್ಪಷ್ಟನೆ ನೀಡುವಂತೆ  ಸುಪ್ರೀಂ ಕೋರ್ಟ್  ಕೇಂದ್ರಕ್ಕೆ  ಸೂಚಿಸಿದೆ

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಪ್ರಶ್ನಿಸಿ 59  ಸಾರ್ವಜನಿಕ ಅರ್ಜಿಗಳು ಸುಪ್ರೀಂ ಕೋರ್ಟ್ ಗೆ ಸಲ್ಲಿಕೆಯಾಗಿವೆ.  ಸುಪ್ರೀಂ ಕೋರ್ಟ್   ಕೇಂದ್ರ ಸರಕಾರಕ್ಕೆ ನೋಟಿಸ್ ನೀಡಿದೆ ಆದರೆ ಹೊಸ ಪೌರತ್ವ ಕಾಯ್ದೆಗೆ ತಡೆಯಾಜ್ಞೆ  ನೀಡಲು  ನಿರಾಕರಿಸಿದೆ. ಇದು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತರ ಸದಸ್ಯರಿಗೆ ಪೌರತ್ವವನ್ನು ನೀಡುತ್ತದೆ.

ಏತನ್ಮಧ್ಯೆ, ಜಾಮಿಯಾ ವಿಶ್ವವಿದ್ಯಾಲಯದಲ್ಲಿ ಹಿಂಸಾಚಾರದ ಬಗ್ಗೆ  ತನಿಖೆಗೆ ಸತ್ಯ ಶೋಧನಾ ಸಮಿತಿ ರಚಿಸಲು ಹೈಕೋರ್ಟ್ ಒಪ್ಪಿದೆ

Please follow and like us:
error