ಪೌರತ್ವ ತಿದ್ದುಪಡಿ ಕಾಯ್ದೆ ಅನುಷ್ಠಾನದಿಂದ ಹಿಂದೆ ಸರಿಯುವುದಿಲ್ಲ: ಅಮಿತ್ ಶಾ

ಹೊಸದಿಲ್ಲಿ, ಡಿ.18:ಪೌರತ್ವ ತಿದ್ದುಪಡಿ ಕಾಯ್ದೆ ಅನುಷ್ಠಾನ   ವಿರುದ್ಧ ರಾಜಧಾನಿ ದಿಲ್ಲಿ ಮತ್ತು ವಿವಿಧ ರಾಜ್ಯಗಳಲ್ಲಿ ತೀವ್ರ ಆಕ್ರೋಶ  ವ್ಯಕ್ತವಾಗಿದ್ದರೂ  ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಪೌರತ್ವ ತಿದ್ದುಪಡಿ ಕಾಯ್ದೆ ಅನುಷ್ಠಾನದಿಂದ  ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಪ್ರತಿಪಾದಿಸಿದರು ಮತ್ತು ಪ್ರತಿಪಕ್ಷಗಳು ಇದರ  ಬಗ್ಗೆ ಅಪಪ್ರಚಾರದಲ್ಲಿ  ತೊಡಗಿದೆ ಎಂದು ಆರೋಪಿಸಿದ್ದಾರೆ.

ಭಾರತದ ಆರ್ಥಿಕ ಸಮಾವೇಶದಲ್ಲಿ ಮಾತನಾಡಿದ ಅಮಿತ್ ಶಾ, ಕಳೆದ ವಾರ ಸಂಸತ್ತು ಅಂಗೀಕರಿಸಿದ ಮತ್ತು ರಾಷ್ಟ್ರಪತಿ ಅವರು ಒಪ್ಪಿಗೆ ಪಡೆದಿರುವ ಪೌರತ್ವ (ತಿದ್ದುಪಡಿ) ಕಾಯ್ದೆಯಲ್ಲಿ (ಸಿಎಎ) ಅಲ್ಪಸಂಖ್ಯಾತರ ವಿರುದ್ಧ ಏನೂ ಇಲ್ಲ ಎಂದು ಹೇಳಿದರು.

“ಪೌರತ್ವ ತಿದ್ದುಪಡಿ ಕಾಯ್ದೆ ಅನುಷ್ಠಾನದ ವಿಚಾರದಲ್ಲಿ ಸರಕಾರದ  ನಿಲುವು ದೃಢವಾಗಿದೆ  ಎಂದು ಶಾ ಅವರು ಈ ಕಾಯ್ದೆಯನ್ನು  “ಅಸಂವಿಧಾನಿಕ ಮತ್ತು ವಿಭಜಕ” ಎಂದು ಕರೆಯುವದನ್ನು ಹಿಂತೆಗೆದುಕೊಳ್ಳಬೇಕೆಂದು ವಿರೋಧ ಪಕ್ಷಗಳ ಬೇಡಿಕೆಯ ನಡುವೆ ಹೇಳಿದರು.

ಹೊಸದಿಲ್ಲಿಯಲ್ಲಿ  ವಿರೋಧ ಪಕ್ಷಗಳ ಮುಖಂಡರು ಅಧ್ಯಕ್ಷ ರಾಮ್ ನಾಥ್ ಕೋವಿಂದ್  ಅವರನ್ನು ಭೇಟಿಯಾಗಿ ಕೇಂದ್ರ ವಿಶ್ವವಿದ್ಯಾಲಯಗಳಲ್ಲಿನ ಹಿಂಸಾಚಾರದ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ಒತ್ತಾಯಿಸಿದರು ಮತ್ತು “ಅಸಂವಿಧಾನಿಕ ಮತ್ತು ವಿಭಜಕ” ಪೌರತ್ವ ತಿದ್ದುಪಡಿ ಕಾನೂನನ್ನು ಹಿಂತೆಗೆದುಕೊಳ್ಳುವಂತೆ ಕೇಂದ್ರ  ಸರ್ಕಾರವನ್ನು  ಆಗ್ರಹಿಸಿದರು.

ತಿದ್ದುಪಡಿ ಮಾಡಿದ ಪೌರತ್ವ ಕಾಯ್ದೆ ಕಾನೂನು ಪರಿಶೀಲನೆ ಬಗ್ಗೆ ಶಾ ವಿಶ್ವಾಸ ವ್ಯಕ್ತಪಡಿಸಿದರು.

ಸಿಎಎ ವಿರೋಧಿಸುವ ವಿದ್ಯಾರ್ಥಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದರು. ಆದಾಗ್ಯೂ, ಪ್ರತಿಭಟನೆಯ ಸಮಯದಲ್ಲಿ ವಿಧ್ವಂಸಕ ಕೃತ್ಯ ಮತ್ತು ಅಗ್ನಿಸ್ಪರ್ಶದಲ್ಲಿ ತೊಡಗಿರುವವರ ವಿರುದ್ಧ ಮಾತ್ರ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

‘ಅಲ್ಪಸಂಖ್ಯಾತ ವಿರೋಧಿ’ ಅಲ್ಲ 

ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಕಿರುಕುಳಕ್ಕೊಳಗಾದ ಮುಸ್ಲಿಮೇತರ ನಿರಾಶ್ರಿತರಿಗೆ ಭಾರತೀಯ ಪೌರತ್ವವನ್ನು ಒದಗಿಸುವ ಶಾಸನದಲ್ಲಿ “ಅಲ್ಪಸಂಖ್ಯಾತ ವಿರೋಧಿ” ಏನೂ ಇಲ್ಲ ಎಂದು ಶಾ ಹೇಳಿದರು.

ಹೊಸ ಪೌರತ್ವ ಕಾಯ್ದೆಯ ಬಗ್ಗೆ “ಸುಳ್ಳು” ಅಭಿಯಾನದಲ್ಲಿ ತೊಡಗಿದೆ ಎಂದು ಪ್ರತಿಪಕ್ಷಗಳ ಮೇಲೆ ಹರಿಹಾಯ್ದರು .

ವಿರೋಧ ಪಕ್ಷದ ನಿಯೋಗದ ನೇತೃತ್ವ ವಹಿಸಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು  ಮೋದಿ ಸರ್ಕಾರವು ಜನರ ಧ್ವನಿಯನ್ನು “ಅಡಗಿಸುತ್ತಿದೆ” ಮತ್ತು ಜನರಿಗೆ  ಸ್ವೀಕಾರಾರ್ಹವಲ್ಲದ ಶಾಸನಗಳನ್ನು ತರುತ್ತಿದೆ ಎಂದು ಆರೋಪಿಸಿದರು.

 

Please follow and like us:
error