ಬಳ್ಳಾರಿ- ರಾಜ್ಯದ ಪೊಲೀಸ್ ಮಹಾನಿರ್ದೇಶಕರಾದ ಪ್ರವೀಣ್ ಸೂದ್ ಅವರನ್ನು ಕ್ವಾರೆಂಟೆನ್ ಗೆ ದೂಡುತ್ತಾ -? ಎನ್ನುವ ಅನುಮಾನ ಕೊಪ್ಪಳ, ಬಳ್ಳಾರಿ ಜಿಲ್ಲೆಯಲ್ಲಿ ಕಾಡುತ್ತಿದೆ. ಬಳ್ಳಾರಿಯಲ್ಲಿ ನಿನ್ನೆ ಪೊಲೀಸರಿಗೆ ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಮೂರು ಜನ ಪೊಲೀಸರಿಗೆ ಕೊರೋನಾ ಪಾಸಿಟಿವ್ ಹಿನ್ನಲೆಯಲ್ಲಿ ಈ ಅನುಮಾನ ಕಾಡುತ್ತಿದೆ. ಟಿಬಿ ಡ್ಯಾಂನ ಸಿಪಿಐನಿಂದ DG& IGP ಕ್ವಾರೆಂಟೆನ್ ಗೆ ಒಳಗಾಗುವ ಸಂಭವವಿದೆ ಎನ್ನಲಾಗುತ್ತಿದೆ. ಮೊ ಪ್ರವೀಣ್ ಸೂದ್ ಅವರು, ಬಳ್ಳಾರಿ ಜಿಲ್ಲೆಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದರು ಈ ಸಭೆಯಲ್ಲಿ ಟಿಬಿ ಡ್ಯಾಂನ ಸಿಪಿಐ ಕೂಡ ಭಾಗಿಯಾಗಿದ್ದರು ಈ ಸಭೆಯಲ್ಲಿ ಬಳ್ಳಾರಿ ಜಿಲ್ಲೆಯ 40 ಕ್ಕೂ ಹೆಚ್ಚು ಜನ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು- ಪೊಲೀಸ್ ಮಹಾನಿರ್ದೇಶಕರು ಬಳ್ಳಾರಿ ವಿಸಿಟ್ ಬಂದಾಗ, ಇವರ ಜತೆಗೆ ಇದ್ದ ಟಿಬಿಡ್ಯಾಂ ಸಿಪಿಐ ಪ್ರವೀಣ್ ಸೂದ್ ಅವರು ಮೊದಲು, ಬಳ್ಳಾರಿಯ ಡಿಎಆರ್ ಮೈದಾನಕ್ಕೆ ಭೇಟಿ, ನೀಡಿದ್ರು, ನಂತರ ಬಳ್ಳಾರಿಯ ಎಸ್ಪಿ ಕಚೇರಿಗೆ ಭೇಟಿ ನೀಡಿ, ಉದ್ಯಮಿ ಎಸ್ ಕೆ ಮೋದಿ ಅವರ ಮನೆಗೆ ಊಟಕ್ಕೆ ತೆರಳಿದ್ದರು, ನಂತರ ಜಿಮ್ ಖಾನಾದಲ್ಲಿ ಸಭೆ ನಡೆಸಿದ್ದರು ಸಿಪಿಐ ಈ ಎಲ್ಲಾ ಸ್ಥಳದಲ್ಲೂ ಓಡ್ಯಾಡಿದ್ದಾರೆ ಇದಲ್ಲದೇ, ಸಭೆಯ ಬಳಿಕ ಖಾಸಗಿ ಹೊಟೇಲ್ ಒಂದ್ರಲ್ಲಿ ಎಲ್ಲಾ ಪೊಲೀಸ್ ಅಧಿಕಾರಿಗಳ ಜತೆ ಊಟ ಕೂಡ ಮಾಡಿದ್ರು- ಒಬ್ಬ ಸಿಪಿಐ ನಿಂದ ಜಿಲ್ಲೆಯ, ಎಸ್ಪಿ, ಎಎಸ್ಪಿ, ಸಿಪಿಐಗಳು, ಡಿವೈಎಸ್ಪಿ ಗಳಿಗೂ ಎದುರಾಗಿದೆ ಆತಂಕ ಈಗಾಗಲೇ ಇವರ ಪ್ರಾಥಮಿಕ ಸಂಪರ್ಕದಲ್ಲಿರೋರ್ನ ಪತ್ತೆ ಹಚ್ವುತ್ತಿದೆ ಬಳ್ಳಾರಿ ಜಿಲ್ಲಾಡಳಿತ. ಇಷ್ಟೇ ಅಲ್ಲದೇ ಕೊಪ್ಪಳ ಜಿಲ್ಲೆಗೂ ಪ್ರವೀಣ್ ಸೂದ್ ಅವರು ಭೇಟಿ ನೀಡಿದ್ದರು. ಇಲ್ಲಿಯೂ ಸಭೆ ನಡೆಸಿದ್ದರು. ಹೀಗಾಗಿ ಕೊಪ್ಪಳ , ಬಳ್ಳಾರಿ ಜಿಲ್ಲೆಯಲ್ಲಿ ಆತಂಕ ಶುರುವಾಗಿದೆ