ಪೊಲೀಸ್ ಠಾಣೆಗಳನ್ನು ಮೇಲ್ದರ್ಜೆಗೇರಿಸಲು  ಬಿಜೆಪಿ ಮುಖಂಡ ಅಮರೇಶ ಕರಡಿ ಮನವಿ

ಕನ್ನಡನೆಟ್ : ಕೊಪ್ಪಳ ಜಿಲ್ಲೆಯ ವಿವಿಧ ಮೇಲ್ಡರ್ಜೆಗೇರಿಸಲು ಬಿಜೆಪಿ ಮುಖಂಡ ಅಮರೇಶ ಕರಡಿ ಗೃಹ ಇಲಾಖೆಯ ಕಾರ್ಯದರ್ಶಿ ಡಿ.ರೂಪಾರವರಿಗೆ ಮನವಿ ಮಾಡಿದ್ದಾರೆ.

ಡಿಜಿಪಿ  ಕರ್ನಾಟಕ ರಾಜ್ಯರವರು ಆಯಾ ಜಿಲ್ಲೆಯ ಎಸ್ಪಿಗಳಿಗೆ ತಮ್ಮಲ್ಲಿರುವ ಯಾವ ಯಾವ ಠಾಣೆಗಳನ್ನು ಮೇಲ್ದರ್ಜೆಗೇರಿಸ ಬೇಕೆಂದು ಅಭಿಪ್ರಾಯ ವರದಿ ಕಳುಹಿಸಿಕೊಡಲು ತಿಳಿಸಿದ್ದು ಇರುತ್ತದೆ .ಈ ಅಭಿಪ್ರಾಯವನ್ನು ಎಸ್ಪಿ ಅವರು ತಮಗೆ ಕೊಡುವಾಗ ತಮ್ಮ ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ವರದಿಯಾಗುವ ಅಪರಾಧಗಳ ಸಂಖ್ಯೆ, ಕಾನೂನು ಸುವ್ಯವಸ್ಥೆ ಸಮಸ್ಯೆ ಹಾಗೂ ಅಲ್ಲಿ ಮಂಜೂರಾಗಿರುವ ಪೊಲೀಸ್ ಉಪ ನಿರೀಕ್ಷಕ ಹುದ್ದೆಗಳ ಸಂಖ್ಯೆ ಆಧರಿಸಿ ನೀಡುವುದು ಸೂಕ್ತವಾಗಿರುತ್ತದೆ .ಈ ರೀತಿಯ ಅಂಶಗಳನ್ನು ಪರಿಗಣಿಸಿದಾಗ ಕೊಪ್ಪಳ ಜಿಲ್ಲೆಯಲ್ಲಿ ಕೊಪ್ಪಳ ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಗಂಗಾವತಿ ಗ್ರಾಮಾಂತರ ಪೊಲೀಸ್ ಠಾಣೆಗಳು ಮೇಲ್ದರ್ಜೆಗೇರಲು ಸೂಕ್ತವಾಗಿರುತ್ತವೆ .ಈ ಎರಡು ಠಾಣೆಗಳಲ್ಲಿ ಕೊಪ್ಪಳ ಜಿಲ್ಲೆಯ ಎಲ್ಲ ಠಾಣೆ ಗಳಿಗಿಂತ ಅಧಿಕ ಅಪರಾಧ ಪ್ರಕರಣಗಳು ವರದಿಯಾಗುತ್ತಿರುತ್ತವೆ .ಕೊಪ್ಪಳ ಗ್ರಾಮೀಣ ಠಾಣೆಗೆ ಮೂರು ಉಪನಿರೀಕ್ಷಕರನ್ನು ಹಾಗೂ ಗಂಗಾವತಿ ಗ್ರಾಮೀಣ ಠಾಣೆಗೆ ನಾಲ್ಕು ಉಪ ನಿರೀಕ್ಷಕರನ್ನು ಮಂಜೂರು ಮಾಡಲಾಗಿದೆ ಈ ಎಲ್ಲ ಅಂಶಗಳನ್ನು ಪರಿಗಣಿಸಿದಾಗ ಕೊಪ್ಪಳ ಜಿಲ್ಲೆಯಲ್ಲಿ ಈ ಎರಡು ಠಾಣೆಗಳು ಮೇಲ್ದರ್ಜೆಗೇರಿಸುವುದು ಸೂಕ್ತವಾಗಿರುತ್ತದೆ .ಕೊಪ್ಪಳ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳು ಈ ಎರಡು ಠಾಣೆಗಳನ್ನು ಮೇಲ್ದರ್ಜೆಗೇರಿಸುವ ತಮ್ಮ ಅಭಿಪ್ರಾಯದಲ್ಲಿ   ಈ ಎರಡು ಪೊಲೀಸ್ ಠಾಣೆಗಳನ್ನು ಪರಿಗಣಿಸದೆ ಯಾವುದೋ ಕಾರಣಕ್ಕಾಗಿ ಅಸಮಂಜಸವಾಗಿ ಕಾರಟಗಿ ಠಾಣೆ ಮತ್ತು ಕನಕಗಿರಿ ಠಾಣೆಗಳನ್ನು ಮೇಲ್ದರ್ಜೆಗೇರಿಸಲು ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ .ಈ ಎರಡೂ ಠಾಣೆಗಳಲ್ಲಿ ವರದಿಯಾದ ಪ್ರಕರಣಗಳನ್ನು ಪರಿಗಣಿಸಲಾಗಿ ಹಾಗೂ ಅಲ್ಲಿ ಮಂಜೂರಾಗಿರುವ ಆರಕ್ಷಕ ಉಪನಿರೀಕ್ಷಕ ಹುದ್ದೆಗಳನ್ನು ಪರಿಗಣಿಸಲಾಗಿ ಈ ಎರಡೂ ಠಾಣೆಗಳು ಮೇಲ್ದರ್ಜೆಗೇರಲು ಸೂಕ್ತವಾಗಿರುವುದಿಲ್ಲ ,ತಾವುಗಳು ಈ ವಿಷಯದ ಬಗ್ಗೆ ಪರಿಶೀಲಿಸಿ, ಗಂಗಾವತಿ ಗ್ರಾಮೀಣ ಠಾಣೆ ಮತ್ತು ಕೊಪ್ಪಳ ಗ್ರಾಮೀಣ ಠಾಣೆಯನ್ನು ಮೇಲ್ದರ್ಜೆಗೇರಿಸಿ ಪೊಲೀಸ್ ಇನ್ಸ್ಪೆಕ್ಟರ್ ಹುದ್ದೆಯ ಅಧಿಕಾರಿಯನ್ನು ಠಾಣಾಧಿಕಾರಿ ಗಳನ್ನಾಗಿ   ಹಾಗೂ ಈ ಎರಡು ಠಾಣೆಗಳನ್ನು ಮೇಲ್ದರ್ಜೆಗೇರಿಸಿದ ಬಾಧಿತರಾಗುವ ವೃತ್ತಗಳಾದ ಗಂಗಾವತಿ ಗ್ರಾಮೀಣ ವೃತ್ತ ಮತ್ತು ಕೊಪ್ಪಳ ಗ್ರಾಮೀಣ ವೃತ್ತಗಳನ್ನು  ಮರು ಹೊಂದಾಣಿಕೆ ಮಾಡಿ ಕೊಪ್ಪಳ ಗ್ರಾಮೀಣ ವೃತ್ತವನ್ನು ಮುನಿರಾಬಾದ್ ವೃತ್ತವನ್ನಾಗಿ ಬದಲಾಯಿಸಿ ಆ ವೃತ್ತಕ್ಕೆ ಮುನಿರಾಬಾದ್ ಪೊಲೀಸ್ ಠಾಣೆ ಹಾಗೂ ಅಳವಂಡಿ ಪೊಲೀಸ್ ಠಾಣೆಗಳನ್ನು ಮತ್ತು ಗಂಗಾವತಿ ಗ್ರಾಮೀಣ ವೃತ್ತಕ್ಕೆ ಕನಕಗಿರಿ ವೃತ್ತ ಎಂದು ನಾಮಕರಣ ಮಾಡಿ  ಆ ವೃತ್ತಕ್ಕೆ ಕನಕಗಿರಿ ಠಾಣೆ ಮತ್ತು ಕಾರಟಗಿ ಪೊಲೀಸ್ ಠಾಣೆಗಳನ್ನು ಒಳಗೊಂಡಂತೆ ಮರು ಹೊಂದಾಣಿಕೆ ಮಾಡಿ ನೇಮಿಸಲು ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.

Please follow and like us:
error