ಪೊಲೀಸರ ಬೈಕ್ ಗಳಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದ ಕತರ್ನಾಕ್ ಕಳ್ಳ ಕೊರೊನಾಗೆ ಬಲಿ !

Kannadanet NEWS  ಗದಗ ಜಿಲ್ಲೆಯ ನಾರಾಯಣಪುರದ ಸಂತೋಷ ಹಿರೇಮಠ ಕೊರೊನಾಗೆ ಮೃತಪಟ್ಟ ಕಳ್ಳ. ಶುಕ್ರವಾರದಂದು 11 ಗಂಟೆ ಸುಮಾರಿಗೆ ಸಂತೋಷ್ ನನ್ನ ಹಿಡಿದು ನ್ಯಾಯಾಲಯಕ್ಕೆ ಒಪ್ಪಿಸುವ ಮುನ್ನ ಕೋವಿಡ್ ಟೆಸ್ಟ್ ಮಾಡಲಾಗಿತ್ತು. ಕೋವಿಡ್ ಟೆಸ್ಟ್ ನಲ್ಲಿ ಪೊಸಟಿವ್ ವರದಿ ಬಂದಿತ್ತು. ಆತ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ  ನಿನ್ನೆ ಜಿಮ್ಸ್ ನಲ್ಲಿ ಮೃತಪಟ್ಟಿದ್ದಾನೆ. ಈ ಬಗ್ಗೆ ಗದಗ ಎಸ್.ಪಿ ಎನ್ ಯತೀಶ್ ಸ್ಪಷ್ಡಪಡಿಸಿದ್ದು ಈತನ ಮೇಲೆ ವಿವಿಧ ಪ್ರಕರಣಗಳಲ್ಲಿ ಸುಮಾರು ಹತ್ತ ಕೇಸ್ ಗಳು ದಾಖಲಾಗಿದ್ವು. ಜೊತೆಗೆ ಪೊಲೀಸರ ಮೇಲೆ ಕುಡುಗೋಲಿನಿಂದ ಹಲ್ಲೆ ಮಾಡಿರುವ ಮತ್ತು ಪೊಲೀಸರ ಬೈಕ್ ಗಳನ್ನು ಸುಟ್ಟಿರುವ ಬಗ್ಗೆ ಗ್ರಾಮೀಣ ಠಾಣೆ ಸೇರಿದಂತೆ ಹಲವು   ಕೇಸ್ ದಾಖಲಾಗಿದ್ವು.  ಆತನನ್ನ ನ್ಯಾಯಾಲಯಕ್ಕೆ ಒಪ್ಪಿಸುವ ಮುನ್ನ ಕೋವಿಡ್ ಟೆಸ್ಟ್ ಮಾಡಲಾಗಿತ್ತು.

ಡಿವೈಎಸ್.ಪಿ ಪ್ರಹ್ಲಾದ್ ಅವರ ನೇತೃತ್ವದಲ್ಲಿ ಸಿಪಿಐ ಪಿಎಸ್.ಐ ಕಾನಸ್ಟೇಬಲ್ ಗಳ ತಂಡವೇ ಈತನನ್ನ ಹಿಡಿಯಲು ಹೊಲ ಹೊಲ ತಿರುಗಾಡಿ ಸುಸ್ತಾಗಿದ್ದಾರೆ. ನಾರಾಯಣಪುರ, ಕೋಟಮಚಗಿ, ನೀರಲಗಿ ಗ್ರಾಮದ ಜಮೀನುಗಳಲ್ಲಿ ಅಡಗಿಕೊಂಡು ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿದ್ದಾನೆ. ಕೋಟಮಚಗಿಯಲ್ಲಿ ಎಣ್ಣೆ ಹೊಡೆದು ಊರವರಿಗೆ ಧಮ್ಕಿ ಹಾಕಿ ಅಲ್ಲಿಂದ ಕಾಲ್ಕಿತ್ತಿದ್ದ. ಬಳಿಕ ಪೊಲೀಸರ ಹುಡುಕಾಟದ ವಾಸನೆ ನೋಡಿ ಪೊಲೀಸರಿಗೆ ಚಳ್ಳೆ ಹಣ್ಣು ತಿನಿಸಲು ಪ್ರಯತ್ನಿಸಿದ್ದ. ಜೊತೆಗೆ ಸುಮಾರು 3 ಗಂಟೆಗಳ ಕಾರ್ಯಾಚರಣೆಯಲ್ಲಿ  ನೀರಲಗಿ ಬಳಿ ಒಂದು ಕಂಟಿಯಲ್ಲಿ ಅಡಗಿಕೊಂಡಿದ್ದ ಈತನನ್ನ ಪೊಲೀಸರು ಹಿಡಿಯಲು ಹೋದಾಗ ಕುಡುಗೋಲು ತೋರಿಸಿ ಪೊಲೀಸರಿಗೆನೆ ಧಮ್ಕಿ ಹಾಕಿದ್ದ. ಆದ್ರೆ ಪೊಲೀಸ್ ಪಡೆಯ ದಂಡಿಗೆ ಈತನ ಬೆದರಿಕೆ ಸಾಕಾಗಿರಲಿಲ್ಲ. ತಕ್ಷಣವೇ ಈತನನ್ನ ಸುತ್ತುವೊರಿದು ವಶಕ್ಕೆ ಪಡೆದಿದ್ದರು.

Please follow and like us:
error