ಪೆಂಕಾಕ್ ಸಿಲತ್‌ಗೆ ಆಯ್ಕೆ

ಕೊಪ್ಪಳ: ಮಾರ್ಚ್ 19 ರಿಂದ 22 ರವರೆಗೆ ಅಮೃತಸರದ ಗುರುನಾನಕ್ ದೇವ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯಗಳ ಪೆಂಕಾಕ್ ಸಿಲತ್ ಚಾಂಪಿಯನ್‌ಷಿಪ್-2019ಗೆ ಬಳ್ಳಾರಿಯ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾವಿದ್ಯಾಲಯದ ಬಿಕಾಂ ನಾಲ್ಕನೇ ಸೆಮ್‌ನ ವಿದ್ಯಾರ್ಥಿನಿ ರುಕ್ಮಿಣಿ ದ್ಯಾವಪ್ಪ ಬಂಗಾಳಿಗಿಡದ್ ಭಾಗವಹಿಸಲಿದ್ದಾಳೆ. ವಿದ್ಯಾರ್ಥಿನಿ ರುಕ್ಮಿಣಿ ಬಂಗಾಳಿಗಿಡದ್‌ಗೆ ಮಹಾವಿದ್ಯಾಲಯದ ಕಾರ್ಯದರ್ಶಿ ಎಸ್.ಮಲ್ಲಿಕಾರ್ಜುನ, ಪ್ರಾಚಾರ್ಯ ಮನೋಹರ ದಾದ್ಮಿ, ಆಡಳಿತಾಧಿಕಾರಿ ಡಾ.ಆರ್.ಮರಿಗೌಡ, ದೈಹಿಕ ನಿರ್ದೇಶಕ ವಿನೋದ್, ಉಪನ್ಯಾಸಕರಾದ ಡಾ.ಬಸವರಾಜ ಪೂಜಾರ, ಡಾ.ದಯಾನಂದ ಸಾಳುಂಕೆ, ಇತರೆ ಸಿಬ್ಬಂದಿ ಶುಭ ಹಾರೈಸಿದ್ದಾರೆ.
Please follow and like us:
error