ಪಿಝಾ ಡೆಲಿವರಿ ಬಾಯ್‍ಗೆ ಕೊರೋನ: 72 ಕುಟುಂಬಗಳು ಕ್ವಾರಂಟೈನ್ ನಲ್ಲಿ

ಹೊಸದಿಲ್ಲಿ: ದಕ್ಷಿಣ ದಿಲ್ಲಿಯ 19 ವರ್ಷದ ಪಿಝಾ ಡೆಲಿವರಿ ಬಾಯ್ ಒಬ್ಬನಿಗೆ ಕೊರೋನ ಪಾಸಿಟಿವ್ ಆಗಿರುವುದು ದೃಢಪಟ್ಟಿದ್ದು, ಆತ ಪಿಝಾ ಡೆಲಿವರಿ ಮಾಡಿದ್ದ ಹೌಝ್ ಕಸ್, ಮಾಲವಿಯ ನಗರ್ ಹಾಗೂ ಸಾವಿತ್ರಿ ನಗರ್ ಪ್ರದೇಶಗಳ 72 ಕುಟುಂಬಗಳನ್ನು ಕ್ವಾರಂಟೈನ್ನಲ್ಲಿರಿಸಲಾಗಿದೆ. ಯುವಕನನ್ನು ಆರ್ ಎಂಎಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಯುವಕ ಎಪ್ರಿಲ್ 12ರ ತನಕ ಪಿಝಾ ಡೆಲಿವರಿ ಕಾರ್ಯ ನಿರ್ವಹಿಸಿದ್ದು ಕಳೆದ 15 ದಿನಗಳಲ್ಲಿ 72ಕ್ಕೂ ಅಧಿಕ ಕುಟುಂಬಗಳಿಗೆ ಡೆಲಿವರಿ ಮಾಡಿದ್ದ.

ಈತನ ಜತೆ ಸಂಪರ್ಕಕ್ಕೆ ಬಂದಿದ್ದ 20 ಇತರ ಡೆಲಿವರಿ ಬಾಯ್‍ಗಳನ್ನು ಛತ್ತರಪುರ್ ಎಂಬಲ್ಲಿ ಕ್ವಾರಂಟೀನಿನಲ್ಲಿರಿಸಲಾಗಿದೆ. ಈಗಾಗಲೇ ಕೊರೋನ ಪಾಸಿಟಿವ್ ಆಗಿರುವ ಡೆಲಿವರಿ ಬಾಯ್ ಎಲ್ಲಿಗೂ ಪ್ರಯಾಣ ಬೆಳೆಸಿರಲಿಲ್ಲ, ಆದರೆ ಆತ ಪಿಝಾ ಡೆಲಿವರಿ ಮಾಡಿದ ಯಾವುದಾದರೂ ಕುಟುಂಬದಿಂದ ಆತನಿಗೆ ಸೋಂಕು ತಗಲಿರಬಹುದೆಂದು ಶಂಕಿಸಲಾಗಿದೆ,

ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಝೊಮ್ಯಾಟೋ, ಆಹಾರ ಡೆಲಿವರಿ ಮಾಡಿದ್ದ ಸಂದರ್ಭ ಡೆಲಿವರಿ ಬಾಯ್‍ಗೆ ಕೊರೋನ ಲಕ್ಷಣಗಳಿದ್ದವೇ ಎಂಬುದು ತಿಳಿದಿಲ್ಲ. ನಮ್ಮ ಯಾವುದೇ ಕೆಲಸಗಾರರು ತಮಗೆ ಸೋಂಕು ತಗಲಿದೆ ಎಂದು ತಿಳಿದರೆ  ತಮ್ಮ ಕರ್ತವ್ಯದಲ್ಲಿ ತೊಡಗುವುದಿಲ್ಲ ಎಂಬ ವಿಶ್ವಾಸ ನಮಗಿದೆ,” ಎಂದು ಝೊಮ್ಯಾಟೋ ಹೇಳಿದೆ.

 

Please follow and like us:
error