ಪಿಜಿ ಸೆಂಟರ್ ಕಟ್ಟಡ ನಿರ್ಮಾಣಕ್ಕೆ ೫೫ ಕೋಟಿಗೆ ಬೇಡಿಕೆ

ಡಿಸಿಎಂ ಅಶ್ವತ್ಥನಾರಾಯಣ ಅವರಿಗೆ ಅಮರೇಶ್ ಕರಡಿ ಮನವಿ | ಕಟ್ಟಡ ನಿರ್ಮಿಸಿದರೆ ವಿದ್ಯಾಥಿWಗಳಿಗೆ ಅನುಕೂಲ | ೫೫ ಕೋಟಿ ಬಿಡುಗಡೆಗೆ ಸಕರಾತ್ಮಕ ಸ್ಪಂದಿಸಿದ ಸಚಿವ
ಕೊಪ್ಪಳ: ಕೊಪ್ಪಳ ನಗರದಲ್ಲಿನ ವಿಜಯನಗರ 
ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರಕ್ಕೆ ಇದುವರೆಗೂ ಸ್ವಂತ ಕಟ್ಟಡ ಇಲ್ಲದೆ ವಿದ್ಯಾರ್ಥಿಳಿಗಳಿಗೆ ತೀವ್ರ ತೊಂದರೆಯಾಗಿದೆ. ಹೀಗಾಗಿ ಕೂಡಲೇ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಸರ್ಕಾರ ಅವಶ್ಯಕವಿರುವ ೫೫ ಕೋಟಿ ಅನುದಾನ ಬಿಡುಗಡೆ ಮಾಡಬೇಕು ಎಂದು ಕೊಪ್ಪಳ ವಿಧಾನಸಭಾ ಕೇತ್ರದ ಬಿಜೆಪಿ ಬೂತ್ ಸಮಿತಿ ಸಂಚಾಲಕ ಅಮರೇಶ ಕರಡಿ ಅವರು ಉನ್ನತ ಶಿಕ್ಷಣ ಸಚಿವ, ಡಿಸಿಎಂ ಡಾ. ಅಶ್ವತ್ಥನಾರಾಯಣ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.

ಅವರು ಬೆಂಗಳೂರಿನಲ್ಲಿ ಸಚಿವರ ಕಚೇರಿಗೆ ಶುಕ್ರವಾರ ಭೇಟಿ ನೀಡಿ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿ, ಸ್ನಾತಕೋತ್ತರ ಕೇಂದ್ರಕ್ಕೆ ಅನುದಾನ ಮಂಜೂರು ಮಾಡುವಂತೆ ಕೋರಿದರು. ಕೊಪ್ಪಳದ ಸ್ನಾತಕೋತ್ತರ ಕೇಂದ್ರದಲ್ಲಿ ವಿವಿಧ ವಿಷಯದ ೧೦ ವಿಭಾಗಗಳನ್ನು ಆರಂಭಿಸಿ ನಮ್ಮ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲ ಮಾಡಲಾಗಿದೆ. ಆದರೆ ಆರಂಭದ ದಿನದಿಂದಲೂ ಇದುವರೆಗೂ ಹಳೆ ಜಿಲ್ಲಾ ಆಸ್ಪತ್ರೆ ಕಟ್ಟಡದಲ್ಲೇ ಕೇಂದ್ರ ನಡೆಯುತ್ತಿದೆ. ಇಲ್ಲಿ ಸಧ್ಯ ೭೦೦ಕ್ಕೂ ಹೆಚ್ಚು ವಿದ್ಯಾರ್ಥಿಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇದಲ್ಲದೆ ಬೋಧಕ, ಬೋಧಕೇತರ ಸಿಬ್ಬಂದಿ ಸೇರಿ ಸಾವಿರಾರು ಜನತೆ ಸ್ನಾತಕೋತ್ತರ ಕೇಂದ್ರ ಅವಲಂಬಿಸಿದ್ದಾರೆ. ಇಷ್ಟಿದ್ದರೂ ಇದುವರೆಗೂ ಸ್ವಂತ ಕಟ್ಟಡ ನಿರ್ಮಿಸಿಕೊಳ್ಳಲು ಸರ್ಕಾರ ಇದುವರೆಗೂ ಸೂಕ್ತ ಅನುದಾನ ಬಿಡುಗಡೆ ಮಾಡಿಲ್ಲ. ಸ್ವಂತ ಕಟ್ಟಡ ನಿರ್ಮಿಸಲು ಈಗಾಗಲೇ ಸರ್ಕಾರ ನಗರದ ಮಳೆಮಲ್ಲೇಶ್ವರ ದೇವಸ್ಥಾನದ ಬಳಿಯ ಸರ್ವೇ ನಂ. ೬೨೬ರಲ್ಲಿ ೧೩ ಎಕರೆ ಜಮೀನು ಮಂಜೂರಿ ಮಾಡಿದೆ. ಆದರೆ ಅಗತ್ಯ ಅನುದಾನ ಕೊರತೆ ಹಿನ್ನೆಲೆಯಲ್ಲಿ ಕಟ್ಟಡ ನಿರ್ಮಾಣವಾಗದೇ ಹಾಗೆಯೆ ಇದೆ ಎಂದಿದ್ದಾರೆ.

ನಮ್ಮ ಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ಈ ಭಾಗದಲ್ಲಿ ಶೈಕ್ಷಣಿಕ ವಾತಾವರಣ ಹೆಚ್ಚಿಸುವ ನಿಟ್ಟಿನಲ್ಲಿ ಈ ಕೇಂದ್ರಕ್ಕೆ ಸುಸಜ್ಜಿತ ಸ್ವಂತ ಕಟ್ಟಡದ ಅವಶ್ಯಕತೆ ಈಗ ಹೆಚ್ಚಾಗಿದೆ. ಕಳೆದ ಸರ್ಕಾರಗಳು ಕೇವಲ ಭರವಸೆ ನೀಡುತ್ತಲೇ ಕಾಲ ಕಳೆದವು. ತಾವು ಉನ್ನತ ಶಿಕ್ಷಣ ಪಡೆದ ಪದವೀಧರರಾಗಿದ್ದು ಈಗಲಾದರೂ ನಮ್ಮ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸ್ನಾತಕೋತ್ತರ ಕೇಂದ್ರದ ಸ್ವಂತ ಕಟ್ಟಡಕ್ಕೆ ಬೇಕಾಗಿರುವ ಅವಶ್ಯಕ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಇದರ ಜೊತೆಗೆ ಕೇಂದ್ರದಲ್ಲಿ ಶೈಕ್ಷಣಿಕ ವಾತಾವರಣ ಇನ್ನಷ್ಟೂ ಹೆಚ್ಚಿಸಲು ಬೇಕಾದ ವಿವಿಧ ಮೂಲಭುತ ಸೌಲಭ್ಯ ಒದಗಿಸಲು ಬೇಕಾದ ಎಲ್ಲಾ ರೀತಿಯ ಅನುದಾನ, ಸಹಕಾರ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಕೊಪ್ಪಳ ನಗರ, ಕ್ಷೇತ್ರದ ಹಲವು ಮುಖಂಡರು ಉಪಸ್ಥಿತರಿದ್ದರು.

ಬಾಕ್ಸ್:

ಅಭಿವೃದ್ಧಿ ಪರ್ವ ಆರಂಭ.

ಕಳೆದ ಸರ್ಕಾರದ ಅವಧಿಯಲ್ಲಿ ಎರಡೂ ಪಕ್ಷದವರು ಅಧಿಕಾರಕ್ಕಾಗಿ ಕಚ್ಚಾಡಿದ್ದರು. ಇದರಿಂದಾಗಿ ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಿತ್ತು. ಆದರೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಭಿವೃದ್ಧಿ ಪರ್ವ ಇದೀಗ ಆರಂಭವಾಗಿದೆ. ನಮ್ಮ ಕೇತ್ರದ ಅಭಿವೃದ್ಧಿ ಅಲ್ಲದೆ ಇಡೀ ರಾಜ್ಯದ ಅಭಿವೃದ್ಧಿ ಆಗಲಿದೆ. 

ಅಮರೇಶ ಕರಡಿ, ಬಿಜೆಪಿ ಮುಖಂಡರು, ಕೊಪ್ಪಳ

ಬಾಕ್ಸ್.

ಅನುದಾನ

ಆಡಳಿತ ಕಟ್ಟಡಕ್ಕೆ- ೪೫ ಲಕ್ಷ, ನೀರು ಸರಬರಾಜಿಗೆ ೧೫ ಲಕ್ಷ, ರಸ್ತೆ ನಿರ್ಮಾಣಕ್ಕೆ ೩೦ ಲಕ್ಷ, ಕಾಪೌಂಡ್ ನಿರ್ಮಾಣಕ್ಕೆ ೫ ಲಕ್ಷ, ಸಮಾಜ ವಿಜ್ಞಾನ ಫಾಕಲ್ಟಿ ಕಟ್ಟಡ ನಿರ್ಮಾಣಕ್ಕೆ ೪೫ ಲಕ್ಷ, ವಿಜ್ಞಾನ ಫಾಕಲ್ಟಿ ಕಟ್ಟಡ ನಿರ್ಮಾಣಕ್ಕೆ ೪೯ ಲಕ್ಷ, ವಾಣಿಜ್ಯಶಾಸ್ತ್ರ ಫಾಕಲ್ಟಿ ಕಟ್ಟಡಕ್ಕೆ ೪೨.೫ ಲಕ್ಷ, ಕಲಾ ವಿಭಾಗದ ಫಾಕಲ್ಟಿ ಕಟ್ಟಡಕ್ಕೆ ೪೨.೫ ಲಕ್ಷ, ಗ್ರಂಥಾಲಯ ಕಟ್ಟಡಕ್ಕೆ ೩೦ ಲಕ್ಷ, ಎಸ್ಸಿ, ಎಸ್ಟಿ ಹಾಸ್ಟೆಲ್‌ಗೆ ೪೫ ಲಕ್ಷ, ಎಸ್ಸಿ-ಎಸ್ಟಿ ಮಹಿಳಾ ಹಾಸ್ಟೆಲ್‌ಗೆ ೪೨ ಲಕ್ಷ, ಸಾಮಾನ್ಯ ವಿದ್ಯಾರ್ಥಿ ನಿಲಯಕ್ಕೆ ೪೨ ಲಕ್ಷ, ಸಾಮಾನ್ಯ ವಿದ್ಯಾರ್ಥಿನಿಯರ ಹಹಾಸ್ಟೆಲ್‌ಗೆ ೪೫ ಲಕ್ಷ, ಬೊಧಖ ಬೋಧಕೇತರ ಸಿಬ್ಬಂದಿ ವಸತಿಗೆ ೪೯.೫ ಲಕ್ಷ, ಅತಿಥಿಗೃಹಕ್ಕೆ ೨೨.೫ ಲಕ್ಷ ಹಾಗೂ ಕ್ಯಾಂಟೀನ್ ನಿರ್ಮಾಕ್ಕೆ ೮೦ ಲಕ್ಷ ಸೇರಿ ಒಟ್ಟು ೫೫.೮೦ ಕೋಟಿ ಅನುದಾನಕ್ಕೆ ಪ್ರಸ್ತಾವನೆ

ಸಚಿವರ ಸಕರಾತ್ಮಕ ಸ್ಪಂದನೆ.

ಅಮರೇಶ ಕರಡಿ ಅವರಿಂದ ಮನವಿ ಸ್ವೀಕರಿಸಿದ ಸಚಿವರಾದ ಅಶ್ವತ್ಥನಾರಾಯಣ ಅವರು ಸಕರಾತ್ಮಕವಾಗಿ ಸ್ಪಂದಿಸಿದ್ದು, ಕೂಡಲೇ ಈ ಮನವಿ ಕುರಿತು ಕ್ರಮ ಕೈಗೊಳ್ಳುತ್ತೇನೆ. ಸಂಬಂಧಿಸಿದ ಇಲಾಖೆಗೆ ಪತ್ರ ಬರೆದು ಸ್ನಾತಕೋತ್ತರ ಕೇಂದ್ರದ ಸ್ವಂತ ಕಟ್ಟಡ ನಿರ್ಮಾಣಕ್ಕೆ ಬೇಕಾದ ೫೫.೮೦ ಕೋಟಿ ಅನುದಾನ ಬಿಡಗಡೆ ಮಾಡುತ್ತೇನೆ ಎಂದು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

Please follow and like us:
error