ಪಾಕ್ ಮಾಜಿ ಅಧ್ಯಕ್ಷ ಪರ್ವೇಝ್ ಮುಷರ್ರಫ್ ಗೆ ಮರಣದಂಡನೆ: ಕೋರ್ಟ್ ತೀರ್ಪು

ಹೊಸದಿಲ್ಲಿ: ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಝ್ ಮುಷರ್ರಫ್ ಅವರಿಗೆ ಅಲ್ಲಿನ ನ್ಯಾಯಾಲಯವೊಂದು ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪಿತ್ತಿದೆ.

2007ರಲ್ಲಿ ತುರ್ತು ಪರಿಸ್ಥಿತಿ ಘೋಷಣೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯವು ನವೆಂಬರ್ 19ರಂದು ಮುಕ್ತಾಯಗೊಳಿಸಿದ್ದು, ತೀರ್ಪನ್ನು ಕಾಯ್ದಿರಿಸಿತ್ತು.

ಪರ್ವೇಝ್ ಮುಷರ್ರಫ್  ಅವರು ಸಂವಿಧಾನವನ್ನು ಕಾನೂನುಬಾಹಿರವಾಗಿ ಅಮಾನತುಗೊಳಿಸಿದ್ದಾರೆ ಮತ್ತು 2007 ರಲ್ಲಿ ತುರ್ತು ನಿಯಮವನ್ನು ರೂಪಿಸಿದ್ದಾರೆ ಎಂಬ ಆರೋಪವಿದೆ.

ಪೇಶಾವರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಾಕರ್ ಅಹ್ಮದ್ ಸೇಠ್ ನೇತೃತ್ವದ ಪಾಕಿಸ್ತಾನದ ವಿಶೇಷ ನ್ಯಾಯಾಲಯದ ಮೂವರು ಸದಸ್ಯರ ಪೀಠವು ಮಂಗಳವಾರ ಮಾಜಿ ಮಿಲಿಟರಿ ಆಡಳಿತಗಾರ ಪರ್ವೇಝ್ ಮುಷರ್ರಫ್  ಅವರ ವಿರುದ್ಧದ ದೇಶದ್ರೋಹ ಪ್ರಕರಣದಲ್ಲಿ ಮರಣದಂಡನೆಯನ್ನು ವಿಧಿಸಿದೆ ಎಂದು ದಿ ಡಾನ್ ವರದಿ ಮಾಡಿದೆ. ಮಾಜಿ ಮಿಲಿಟರಿ ಮುಖ್ಯಸ್ಥ ಪ್ರಸ್ತುತ ದುಬೈನಲ್ಲಿದ್ದಾರೆ.

2001 ರಿಂದ 2008 ರವರೆಗೆ ಅಧ್ಯಕ್ಷರಾಗಿದ್ದ ಪರ್ವೇಝ್ ಮುಷರ್ರಫ್   ಪಾಕಿಸ್ತಾನದ ದೀರ್ಘಕಾಲ ಸೇವೆ ಸಲ್ಲಿಸಿದ ಆಡಳಿತಗಾರರಲ್ಲಿ ಒಬ್ಬರಾಗಿದ್ದರು.

Please follow and like us:
error