fbpx

ಪರೀಕ್ಷೆಗೆ ಮಗನನ್ನು ಬಿಡಲು ಹೊರಟಿದ್ದ ಶಿಕ್ಷಕ ಅಪಘಾತದಲ್ಲಿ ಸಾವು

ರಾಯಚೂರು :  ಪರೀಕ್ಷೆಗೆ ಮಗನನ್ನು ಬಿಡಲು ಹೊರಟಿದ್ದ ಶಿಕ್ಷಕ ಅಪಘಾತದಲ್ಲಿ ಸಾವನ್ನಪ್ಪಿದ ದುರ್ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ಇಂದು ಎಸ್ ಎಸ್ ಎಲ್ ಸಿ ಪರೀಕ್ಷೆ ನಿಮಿತ್ತ ಪರೀಕ್ಷಾ ಕೇಂದ್ರಕ್ಕೆ ತೆರಳುತ್ತಿದ್ದ ಮಗನನ್ನು ಬಿಟ್ಟು ತಾನು ತನ್ನ ನಿಯೋಜಿತ ಶಾಲೆಗೆ ತೆರಳುತ್ತಿದ್ದ  ಶಿಕ್ಷಕ ನಾಗಿರೆಡ್ಡಿ (57) ಅಪಘಾತದಲ್ಲಿ ಸಾವನ್ನಪ್ಪಿದವರು. ರಾಯಚೂರಿನ ದೇವದುರ್ಗದ ಮೀಯಾಪುರ ಕ್ರಾಸ್ ಬಳಿ ಘಟನೆ ನಡೆದಿದೆ. ಅಪಘಾತದಲ್ಲಿ ಮಗನಿಗೆ ಗಂಭೀರ ಗಾಯಗಳಾಗಿವೆ. ಬೈಕ್ ಗೆ ಆಕಳು ಅಡ್ಡ ಬಂದಿದ್ದರಿಂದ ನಿಯಂತ್ರಣ ತಪ್ಪಿ ಅಪಘಾತ. ಸಂಭವಿಸಿದೆ. ಮಗ ವಿಶ್ವನಾಥ್ ಗೆ ಗಾಯಗೊಂಡಿದ್ದರಿಂದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.  ಸುಂಕೇಶ್ವರಾಳದ ಶಿಕ್ಷಕ ನಾಗಿರೆಡ್ಡಿಯನ್ನ ಮಸರಕಲ್ ಪರೀಕ್ಷಾ ಕೇಂದ್ರಕ್ಕೆ ನಿಯೋಜಿಸಲಾಗಿತ್ತು. ಮಗನನ್ನು  ಪರೀಕ್ಷಾ ಕೇಂದ್ರಕ್ಕೆ ಬಿಟ್ಟು ಕರ್ತವ್ಯಕ್ಕೆ ತೆರಳಲು ಹೊರಟಿದ್ದ ಶಿಕ್ಷಕ ಸಾವನ್ನಪ್ಪಿದ್ಧಾರೆ.

Please follow and like us:
error
error: Content is protected !!