ಪತ್ರಿಕೋದ್ಯಮ ಹೇಗಿರಬಾರದು ಎಂಬುದಕ್ಕೆ ಅರ್ನಬ್ ಗೋಸ್ವಾಮಿ ಉದಾಹರಣೆ: ಸಿದ್ದರಾಮಯ್ಯ

ಬೆಂಗಳೂರು, ಎ.22: ಪತ್ರಿಕೋದ್ಯಮವು ಗೌರವಾನ್ವಿತ ವೃತ್ತಿಯಾಗಿದ್ದು, ಇದು ಪ್ರಜಾಪ್ರಭುತ್ವದ 3 ಸ್ತಂಭಗಳನ್ನು ಮೌಲ್ಯಮಾಪನ ಮಾಡಲು ಜನರಿಗೆ ಅನುವು ಮಾಡಿಕೊಡುತ್ತದೆ. ಆದರೆ ಅರ್ನಬ್ ಗೋಸ್ವಾಮಿ ಮತ್ತು ರಿಪಬ್ಲಿಕ್ ಟಿವಿ ಪತ್ರಿಕೋದ್ಯಮವನ್ನು ಹೇಗೆ ನಡೆಸಬಾರದು ಎಂಬುದಕ್ಕೆ ಉದಾಹರಣೆಗಳಾಗಿವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಸಂಬಂಧವಿಲ್ಲದ ವಿಷಯವೊಂದರಲ್ಲಿ ಸೋನಿಯಾ ಗಾಂಧಿಯನ್ನು ಉಲ್ಲೇಖಿಸುವುದು ಮಾನಹಾನಿಕರ ಮತ್ತು ಅವರಲ್ಲಿ ಒಬ್ಬ ಸ್ತ್ರೀದ್ವೇಷಿಯನ್ನು ಬಹಿರಂಗಪಡಿಸಿದೆ ಎಂದು ಅರ್ನಬ್ ಗೋಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಸೋನಿಯಾ ಗಾಂಧಿ ನಮ್ಮೆಲ್ಲರಂತೆ ಭಾರತೀಯರು. ಅವರು ಖಂಡಿತವಾಗಿಯೂ ಅರ್ನಾಬ್ ಗೋಸ್ವಾಮಿಗಿಂತ ಹೆಚ್ಚು ಭಾರತೀಯರು. ಅವರು ನಮ್ಮ ದೇಶದಲ್ಲಿ ಸಾಮರಸ್ಯ ಮತ್ತು ಸಹೋದರತ್ವವನ್ನು ಸೃಷ್ಟಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ. ಮತ್ತೊಂದೆಡೆ ಅರ್ನಬ್ ತನ್ನ ವಿಷದ ಮೂಲಕ 4ನೇ ಸ್ತಂಭವನ್ನು ದುರ್ಬಲಗೊಳಿಸಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

 

Please follow and like us:
error