ಪತ್ರಿಕೆಯನ್ನು ಓದುಗರಿಗೆ ತಲುಪಿಸುವುದು ಸಾಮಾನ್ಯ ಸಂಗತಿಯಲ್ಲ- ವಿಶ್ವನಾಥ್ ಬೆಳಗಲ್ ಮಠ

ಸ್ಥಳೀಯ ಪತ್ರಿಕೆಗಳಿಂದ ಪತ್ರಿಕಾ ವಿತರಕರ ದಿನಾಚರಣೆ

ಕೊಪ್ಪಳ : ಪತ್ರಿಕೆಗಳನ್ನು ಹೊರಕ್ಕೆ ತರುವುದು ಎಷ್ಟು ಸವಾಲಿನ ಕೆಲಸವೋ, ಮುದ್ರಣಗೊಂಡ ಪತ್ರಿಕೆಗಳನ್ನು ಓದುಗರಿಗೆ ಸಕಾಲಕ್ಕೆ ತಲುಪಿಸುವುದು ಕೂಡ ಅಷ್ಟೆ ಸವಾಲಿನ ಕೆಲಸ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ವಿಶ್ವನಾಥ ಬೆಳಗಲ್ ಮಠ ಹೇಳಿದರು.
ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ಅಂಗವಾಗಿ ಜಿಲ್ಲೆಯ ಗಂಗಾವತಿ ನಗರದಲ್ಲಿ ವಿವಿಧ ಪತ್ರಿಕೆಯ ಸಂಪಾದಕರು ಹಾಗೂ ಪತ್ರಕರ್ತರು ಸಹಯೋಗದಲ್ಲಿ ಹಿರಿಯ ಪತ್ರಿಕಾ ವಿತರಕರಾದ ಪಂಪಾಪತಿ ಹಾಗೂ ಚನ್ನಬಸವ ಅವರಿಗೆ ಸನ್ಮಾನಿಸಿ ಮಾತನಾಡಿದರು.
ಸುದ್ದಿಗಳನ್ನು ಸಂಗ್ರಹಿಸಿ, ಹೊಂದಿಸಿ ಉತ್ತಮ ಶಿರ್ಷಿಕೆ ಕೊಟ್ಟು, ಚಿತ್ರ ಸಮೇತ ಪತ್ರಿಕೆಯಲ್ಲಿ ಮುದ್ರಿಸುತ್ತೇವೆ. ಆದರೆ ಆ ಮುದ್ರಣಗೊಂಡ ಪತ್ರಿಕೆಗಳು ಸಕಾಲಕ್ಕೆ ಓದುಗರನ್ನು ತಲುಪದಿದ್ದರೆ ನಮ್ಮೆಲ್ಲಾ ಪರಿಶ್ರಮ ವ್ಯರ್ಥವಾದಂತೆ ಎಂದರು.
ಆನ್ಮೋಲ್ ದಿನಪತ್ರಿಕೆಯ ಸ್ಥಾನಿಕ ಸಂಪಾದಕ ನಾಗರಾಜ್ ಇಂಗಳಗಿ ಮಾತನಾಡಿ, ಚಳಿ, ಮಳೆ ಅಥವಾ ಬೇಸಿಗೆ ಕಾಲವನ್ನು ಲೆಕ್ಕಿಸದೇ ಬೆಳಗ್ಗೆ ಆರು ಗಂಟೆಯೊಳಗೆ ಓದುಗರಿಗೆ ಪತ್ರಿಕೆಗಳನ್ನು ತಲುಪಿಸುವುದು ಅತ್ಯಂತ ಮಹತ್ವದ ಕೆಲಸ. ಇದನ್ನು ವಿತರಕರು ಯಾವುದೇ ಪ್ರತಿಫಲಪೇಕ್ಷೆ ಇಲ್ಲದೇ ಕೆಲಸ ಮಾಡುತ್ತಾರೆ ಎಂದರು.
ಸಮರ್ಥವಾಣಿ ದಿನಪತ್ರಿಕೆಯ ಉಪ ಸಂಪಾದಕ ಹರೀಶ್ ಕುಲಕರ್ಣಿ ಮಾತನಾಡಿದರು. ಪ್ರಜಾಪರ್ವ ದಿನಪತ್ರಿಕೆಯ ಸಂಪಾದಕ ಶ್ರೀನಿವಾಸ ಎಂ.ಜೆ., ಹಿರಿಯ ಉಪ ಸಂಪಾದಕ ಪರಶುರಾಮ ಪ್ರಿಯ, ಕಿತ್ತೂರ ಕರ್ನಾಟಕ ಪ್ರಾದೇಶಿಕ ಪತ್ರಿಕೆಯ ಜಿಲ್ಲಾ ವರದಿಗಾರರಾದ ನಾಗರಾಜ್ ವೈ, ಸಾಕ್ಷಿ ರವಿ,
ಎಚ್. ಗಣೇಶ ಆನೆಗೊಂದಿ, ನಟರಾಜ್ ಎಂ.ಎಂ ಸೇರಿದಂತೆ ಮತ್ತಿತರರು ಇದ್ದರು

Please follow and like us:
error