ನೊಂದವರ‌ಕಡೆ ಯುವಕರ ನಡೆ – ಮಹಾಂತೇಶ ಮಲ್ಲಗೌಡ್ರ

ಕೊಪ್ಪಳ : ೧೨ – ನಗರದ ಮಾಸ್ತಿ ಪಬ್ಲಿಕ್ ಸ್ಕೂಲ್ ನಲ್ಲಿ ವಿಶ್ವ ಅವ್ವಂದಿರ ದಿನಾಚರಣೆಯ ಅಂಗವಾಗಿ “ಹಸಿವಿದ್ದ ಕಡೆ ನಮ್ಮ ನಡೆ” ಎಂಬ

ಧ್ಯೇಯದೊಂದಿಗೆ ಸುಧಾ ಕಲ್ಚರಲ್ ಅಕಾಡೆಮಿ (ರಿ) ಕೊಪ್ಪಳ ಎಂಬ ಸಂಸ್ಥೆಯನ್ನು ಉದ್ಘಾಟಿಸಲಾಯಿತು. ಇದೇ ವೇಳೆ ಕನ್ನಡ ಮತ್ತು ಸರ್ಕಾರಿ ಕನ್ನಡ ಶಾಲೆಯ ಉಳಿವಿಗಾಗಿ ಅನ್ನ ಕೊಡುವ ಭೂಮಿತಾಯಿಯನ್ನೆ ದಾನ ಮಾಡಿ ಅಕ್ಷರ ದಾಸೋಹದ ಜೊತೆಗೆ ಅನ್ನ ದಾಸೋಹ ಮಾಡುತ್ತಾ ಶಾಲೆಗೆ ಬರುವ ಮಕ್ಕಳೆ ತನ್ನ ಮಕ್ಕಳೆಂದು‌ ಪ್ರೀತಿಸುತ್ತಿರುವ ಜಿಲ್ಲೆಯ ದಾನ ಚಿಂತಾಮಣಿ ಹುಚ್ಚಮ್ಮ ಚೌದ್ರಿ ಅವರು ಉದ್ಘಾಟಿಸಿದರು. ಇದೆ ವೇಳೆ ಅವರಿಗೆ ೨೦೧೮ ನೇ ಸಾಲಿನ “ಅವ್ವ” ಅವಾರ್ಡ ಕೊಟ್ಟು ಸನ್ಮಾನಿಸಲಾಯಿತು.

ಕೊಪ್ಪಳದ ಹಿರಿಯ ಸಾಹಿತಿಗಳಾದ‌ ಮಹಾಂತೇಶ ಮಲ್ಲನಗೌಡ್ರ ಮಾತನಾಡಿ ವ್ಯಕ್ತಿಯ ಜೀವನ ಸಾರ್ಥಕವಾಗ ಬೇಕಾದರೆ ಸಮಾಜಮುಖಿಯಾಗಿ ಬದುಕಬೇಕು, ನೊಂದವರ ಬಾಳಿಗೆ ಹೆಗಲಾಗಬೇಕು ಈ ನಿಟ್ಟಿನಲ್ಲಿ ಕೆಲಸ ಮಾಡುವ ಈ ಯುವ ಮನಸ್ಸುಗಳ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಇದೇ ವೇಳೆ ಸಂಘಟಕ ಸಾಹಿತಿ ಬಿ.ಎನ್.ಹೊರಪೇಟಿ ಮಾತನಾಡಿ ಯುವ‌ ಪಿಳಿಗೆಯು ಸಮಾಜಪರ ಏಳ್ಗೆಗಾಗಿ ಶ್ರಮಿಸಬೇಕಿದೆ. ತೆರೆ ಮರೆಯ ಸಮಾಜಸೇವಕರನ್ನು ಗುರುತಿಸುವ ಕೆಲಸವಾಗಬೇಕಿದೆ ಸರಕಾರ ಅಂತಹ ಕೆಲಸಗಳಿಗೆ‌ ಉತ್ತೇಜನ ನೀಡಬೇಕಾಗಿದೆ ಎಂದು ಆಶಯ‌ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕ ಬಸವರಾಜ‌ ಮರದೂರು ಸಾಹಿತಿ ಸಂಘಟಕ ಬಿ.ಎನ್.ಹೊರಪೇಟಿ, ಜಿ.ಶಿವಪುರ, ವರದಿಗಾರ್ತಿ ರಚನಾ, ಇಂದಿರಾ, ಮಹೇಶ ಹಳ್ಳಿಕೇರಿ, ಯಮನೂರ ನಾಯಕ ಉಪಸ್ಥಿತಿ ಇದ್ದರು.
Please follow and like us:
error