ನೀವು ಭಾರತೀಯರಾಗಿದ್ದರೆ ಗೂಂಡಾಗಳನ್ನು ಸಹಿಸಲು ಸಾಧ್ಯವಿಲ್ಲ: ಜೆಎನ್ ಯು ದಾಳಿ ಬಗ್ಗೆ ಆನಂದ್ ಮಹೀಂದ್ರಾ

ಹೊಸದಿಲ್ಲಿ, ಜ. 6: ‘ಕಾನೂನುಬಾಹಿರ ಗೂಂಡಾಗಳನ್ನು ಸಹಿಸಲು ಸಾಧ್ಯವಾಗದು’ ಎಂದು ಜೆಎನ್ ಯು ಮೇಲಿನ ದಾಳಿಗೆ ಸಂಬಂಧಿಸಿ ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ.

“ನಿಮ್ಮ ರಾಜಕೀಯ ಏನು ಎಂಬುದು ಮುಖ್ಯವಲ್ಲ. ನಿಮ್ಮ ಸಿದ್ಧಾಂತ ಏನು ಎಂಬುದು ಮುಖ್ಯವಲ್ಲ. ನಿಮ್ಮ ನಂಬಿಕೆ ಏನು ಎಂಬುದು ಮುಖ್ಯವಲ್ಲ. ನೀವು ಭಾರತೀಯರಾಗಿದ್ದರೆ ಸಶಸ್ತ್ರ, ಕಾನೂನುಬಾಹಿರ ಗೂಂಡಾಗಳನ್ನು ಸಹಿಸಲು ಸಾಧ್ಯವಾಗದು” ಎಂದು ಉದ್ಯಮಿ ಆನಂದ ಮಹಿಂದ್ರಾ ಟ್ವೀಟ್ ಮಾಡಿದ್ದಾರೆ.

ಜವಾಹರ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರ ಮೇಲೆ ದಾಳಿ ನಡೆಸಿದವರನ್ನು ಶೀಘ್ರ ಪತ್ತೆ ಹಚ್ಚಬೇಕು ಹಾಗೂ ಶಿಕ್ಷೆಗೆ ಗುರಿಪಡಿಸಬೇಕು ಎಂದು ಅವರು ಹೇಳಿದ್ದಾರೆ.

Please follow and like us:
error