fbpx

ನಿಯಮಾನುಸಾರ ಜನನ-ಮರಣ ಪ್ರಮಾಣಪತ್ರ ನೀಡಿ : ನಾಗರಾಜ ಜುಮ್ಮನ್ನವರ

ಕೊಪ್ಪಳ, : ಆರೋಗ್ಯಾಧಿಕಾರಿಗಳು ಜನನ ಮತ್ತು ಮರಣ ಪ್ರಮಾಣ ಪತ್ರ ನೀಡುವ ಮೊದಲು ನಮೂನೆ-1 ಮತ್ತು 2 ರಲ್ಲಿ ನೀಡಿರುವ ಮಾಹಿತಿಗಳನ್ನು ಸರಿಯಾಗಿ ನಮೂದಿಸಿ ನಿಯಮನುಸಾರ ಜನನ ಮತ್ತು ಮರಣ ಪ್ರಮಾಣ ಪತ್ರ ನೀಡಬೇಕು ಎಂದು ಜಿಲ್ಲಾ ಆರೋಗ್ಯ ಆಡಳಿತ ಅಧಿಕಾರಿ ಮತ್ತು ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ನಾಗರಾಜ ಜುಮ್ಮನ್ನವರ ಹೇಳಿದರು.
ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಶುಕ್ರವಾರದಂದು ನಾಗರಿಕ ನೋಂದಣಿ ಪದ್ಧತಿ ನಿಯಮಗಳು ಹಾಗೂ ಇ-ಜನ್ಮ ತಂತ್ರಾAಶದ ನಿರ್ವಹಣೆ ಕುರಿತ ತರಬೇತಿ ಕಾರ್ಯಾಗಾರವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸರಕಾರಿ ಸೌಲಭ್ಯ ಮತ್ತು ಶೈಕ್ಷಣಿಕ ಸೌಲಭ್ಯಗಳನ್ನು ಪಡೆಯಲು ಜನನ ಮತ್ತು ಮರಣ ಪ್ರಮಾಣ ಪತ್ರ ಅವಶ್ಯವಾಗಿದೆ. ಸಿಬ್ಬಂದಿಗಳು ಈ ತಂತ್ರಾAಶವನ್ನು ಸರಿಯಾಗಿ ಅರಿತುಕೊಂಡು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದರು.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ಅವರು ಮಾತನಾಡಿ, ಜನನ-ಮರಣ ಪ್ರಮಾಣ ಪತ್ರವನ್ನು ಡಿಜಿಟಲ್ ಸಹಿಯೊಂದಿಗೆ ನೀಡುವ ಪ್ರಕ್ರಿಯೆಯು 2021 ರ ಜನೆವರಿ 01 ರಿಂದ ಆರಂಭವಾಗುತ್ತಿದ್ದು, ಆರೋಗ್ಯ ಅಧಿಕಾರಿಗಳು ಮತ್ತು ವಿಷಯ ನಿರ್ವಾಹಕರು, ಡಾಟಾ ಎಂಟ್ರಿ ಅಪರೇಟರ್‌ಗಳು ಸೂಕ್ತ ಮತ್ತು ನಿಖರ ಮಾಹಿತಿಗಳನ್ನು ಪಡೆದು ಸ್ಥಳ, ದಿನಾಂಕ, ಹೆಸರುಗಳ ಕುರಿತು ನಿಖರ ಮಾಹಿತಿಯನ್ನು ತಂತ್ರಾAಶದಲ್ಲಿ ನಮೂದಿಸಬೇಕು. ಇ-ಜನ್ಮ ತಂತ್ರಾAಶವು ಡಾಟಾ ಎಂಟ್ರಿ ಆಪರೇಟರ್ ಪೋರ್ಟಲ್ ಮತ್ತು ನೋಂದಣಾಧಿಕಾರಿಗಳ/ಉಪನೋAದಣಾಧಿಕಾರಿಗಳ ಪೋರ್ಟಲ್ ಎಂದು 2 ಪೋರ್ಟಲ್‌ಗಳನ್ನು ಹೊಂದಿದೆ. ಬಹುತೇಕ ಶೇ.70-80 ರಷ್ಟು ಜನನಗಳು ಆಸ್ಪತ್ರೆಯಲ್ಲಿಯೇ ಆಗುವುದರಿಂದ ಆನ್‌ಲೈನ್ ನೋಂದಣಿ ಸುಲಭವಾಗುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಪ್ರಮಾಣ ಪತ್ರ ನೀಡುವ ಸಂದರ್ಭದಲ್ಲಿ ನಿಯಮನುಸಾರ ಮಾಹಿತಿ ಪಡೆದು ಪ್ರಮಾಣಪತ್ರ ನೀಡಬೇಕು. ಎಲ್ಲಾ ಗ್ರಾಮ ಪಂಚಾಯತಗಳಲ್ಲಿ ಅಂಗೀಕೃತಗೊAಡ ಪ್ರಮಾಣಪತ್ರಗಳನ್ನು ಪಿ.ಡಿ.ಒ ಅಧಿಕಾರಿಗಳು ನೀಡುತ್ತಾರೆ ಎಂದು ಹೇಳಿದರು.
ಮರಣ ಪ್ರಮಾಣ ಪತ್ರ ನೀಡುವಾಗ ಅಗತ್ಯ ಮತ್ತು ಕಡ್ಡಾಯ ದಾಖಲೆಗಳನ್ನು ಪರಿಶೀಲಿಸಿ ಆನ್‌ಲೈನ್ ನಲ್ಲಿ ನಮೂದಿಸಿ. ನಕಲಿ ಮರಣ ಪ್ರಮಾಣ ಪತ್ರಗಳಿಂದ ಅಥವಾ ಅಪೂರ್ಣ ಮಾಹಿತಿಯೊಂದಿಗೆ ನೀಡುವ ಪ್ರಮಾಣ ಪತ್ರಗಳಿಂದ ಸಂಬAಧಿಸಿದ ಕುಟುಂಬದವರು ವಿವಿಧ ರೀತಿಯ ಕಾನೂನು ತೊಡಕುಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ ಮರಣ ಪ್ರಮಾಣ ಪತ್ರ ನೀಡುವಾಗ ಎಲ್ಲ ರೀತಿಯ ದಾಖಲೆಗಳನ್ನು ಪರಿಶೀಲಿಸಿ ಎಂದು ಅವರು ಹೇಳಿದರು.
ಕಾರ್ಯಾಗಾರದಲ್ಲಿ ಗಂಗಾವತಿ ತಾಲ್ಲೂಕು ಆರೋಗ್ಯಾಧಿಕಾರಿ ಗೌರಿ ಶಂಕರ, ಕಾರಟಗಿ ಪುರಸಭೆಯ ಮುಖ್ಯಾಧಿಕಾರಿ ಶಿವಲಿಂಗಪ್ಪ, ಕನಕಗಿರಿ ಪ.ಪಂ. ಮುಖ್ಯಾಧಿಕಾರಿ ತಿರುಮಲಾ ಎಂ., ಕಚೇರಿ ಅಧೀಕ್ಷಕ ಎನ್.ಮಂಜುನಾಥ ಸೇರಿದಂತೆ ಇತರರು ಉಪಸ್ಥಿತರಿದ್ದರು.

Please follow and like us:
error
error: Content is protected !!