‘ನಾವು 162 ಜನರಿದ್ದೇವೆ, ಬಂದು ನೋಡಿ’: ಮಹಾರಾಷ್ಟ್ರ ರಾಜ್ಯಪಾಲರಿಗೆ ಸಂಜಯ್ ರಾವತ್ ಟ್ವೀಟ್

ಮುಂಬೈ, ನ.25: ಶಿವಸೇನೆ, ಕಾಂಗ್ರೆಸ್ ಮತ್ತು ಎನ್ ಸಿಪಿಯ ಶಾಸಕರು ಬಸ್ ಗಳು ಮತ್ತು ಕಾರುಗಳಲ್ಲಿ ಇಂದು ಮುಂಬೈನ ಹೊಟೇಲ್ ತಲುಪಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಶಿವಸೇನೆ ನಾಯಕ ಸಂಜಯ್ ರಾವತ್, “ನಾವು 162 ಮಂದಿಯಿದ್ದೇವೆ. ಬಂದು ನೋಡಿ” ಎಂದು ಟ್ವೀಟ್ ಮಾಡಿದ್ದಾರೆ.

ಹೊಟೇಲ್ ನ ಕಾನ್ಫರೆನ್ಸ್ ಹಾಲ್ ನಲ್ಲಿ ಶಾಸಕರು ಸೇರಲಿದ್ದಾರೆ ಎನ್ನಲಾಗಿದೆ. ‘ನಾವು 162’ ಎಂದು ಬರೆಯಲಾದ ಪೋಸ್ಟರ್ ಒಂದನ್ನು ಟ್ವೀಟ್ ಮಾಡಿರುವ ಸಂಜಯ್ ರಾವತ್, ‘ನಾವೆಲ್ಲರೂ ಒಂದಾಗಿದ್ದೇವೆ ಮತ್ತು ಜೊತೆಗಿದ್ದೇವೆ. 7 ಗಂಟೆಗೆ ಗ್ಯಾಂಡ್ ಹ್ಯಾಟ್ ನಲ್ಲಿ ನಾವೆಲ್ಲರೂ 162 ಮಂದಿ ಜೊತೆಗಿರುವುದನ್ನು ನೋಡಬಹುದು. ಬಂದು ನೋಡಿ” ಎಂದು ಮಹಾರಾಷ್ಟ್ರ ರಾಜ್ಯಪಾಲರನ್ನು ಟ್ಯಾಗ್ ಮಾಡಿ ಅವರು ಟ್ವೀಟ್ ಮಾಡಿದ್ದಾರೆ.

Please follow and like us:
error