ನಾಳೆಯು ಮುಷ್ಕರ ಮುಂದುವರೆಯುವ ಹಿನ್ನೆಲೆ : ಡಿಪೋಗೆ ಮರಳಿದ ಬಸ್ ಗಳು

ಕನ್ನಡನೆಟ್ ನ್ಯೂಸ್:  ನಾಳೆಯು ಮುಷ್ಕರ ಮುಂದುವರೆಯುವ ಹಿನ್ನೆಲೆಯಲ್ಲಿ ಬಸ್ ಗಳನ್ನು ಆಯಾ ಡಿಪೋ ಗಳಿಗೆ ಬಿಡುವಂತೆ ಮ್ಯಾನೇಜರ್ ಸೂಚನೆ ನೀಡಿದ ಹಿನ್ನೆಲೆಯಲ್ಲಿ. ಕುಷ್ಟಗಿ 2 ಬಸ್, ಗಂಗಾವತಿ 2, ಯಲಬುರ್ಗಾ 2 ಹಾಗೂ ಕೊಪ್ಪಳದ 4 ಬಸ್ ಗಳು ಮರಳಿ ಡಿಪೋಗೆ ತೆರಳಿವೆ.
ಬಿಜಾಪೂರಗೆ ತೆರಳ ಬೇಕಾದ ಒಂದೇ ಬಸ್ ಬಸ್ ನಿಲ್ದಾಣದಿಂದ ಹೊರಗಡೆ ಹೋಗಿದೆ. ಇದರಿಂದ ಪ್ರಯಾಣಿಕರು ಮತ್ತೆ ಪರದಾಡುವಂತಾಗಿದೆ.ಗದಗ, ಸಿಂಧನೂರು, ಬಿಜಾಪುರಗೆ ತೆರಳಲು ಬಂದ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.  ಬಸ್ ಗಳನ್ನು ಸೈಡ್ ಹಾಕಿ ಪ್ರಯಾಣಿಕರನ್ನು ಕೆಳಗಿಳಿಸಿದ ಸಿಬ್ಬಂದಿಗಳು. ಬೆಂಗಳೂರಿಗೆ ತಲುಪಬೇಕಾದ‌ ಕಾರ್ಮಿಕರು ಪರದಾಡಿದರು.
ನಿರ್ಧಾರ ಸರಿಯಾಗಿ ತೆಗೆದುಕೊಳ್ಳದೆ  ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು

Please follow and like us:
error