ನಾನು ಸಿಎಂ ಹುದ್ದೆಯ ಆಕಾಂಕ್ಷಿ ,ಡಿಸಿಎಂ ಹುದ್ದೆ ಬೇಡ : ಉಮೇಶ್ ಕತ್ತಿ

 


ಬೆಂಗಳೂರು, ಡಿ. 12: ಉಪಮುಖ್ಯಮಂತ್ರಿ ಹುದ್ದೆ ನನಗೆ ಬೇಡ. ನಾನು ಎಂಟು ಬಾರಿ ಶಾಸಕನಾಗಿದ್ದು, ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿದ್ದೇನೆ ಎಂದು ಬಿಜೆಪಿಯ ಹಿರಿಯ ಶಾಸಕ ಉಮೇಶ್ ಕತ್ತಿ ಬೇಡಿಕೆ ಇಟ್ಟಿದ್ದಾರೆ.

ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಈ ಹಿಂದೆಯೂ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿದ್ದೆ. ಮುಂದೆಯೂ ಆಕಾಂಕ್ಷಿಯಾಗಿರುತ್ತೇನೆ. ಡಿಸಿಎಂ ಹುದ್ದೆ ಬೇಕಿಲ್ಲ. ಕೊಟ್ಟರೆ ಸಚಿವ ಸ್ಥಾನ ನೀಡಲಿ ಎಂದು ತಿಳಿಸಿದರು.

ಮೂರ್ನಾಲ್ಕು ತಿಂಗಳಿಂದ ನನಗೆ ಅಧಿಕಾರ ನೀಡಿಲ್ಲ. ನಾನು ಸಚಿವನಾಗಲಿ ಅಥವಾ ಆಗದೆ ಇರಲಿ ಶಾಸಕನಾಗಿ ಕೆಲಸ ಮಾಡುತ್ತೇನೆ. ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪನವರ ತೀರ್ಮಾನಕ್ಕೆ ಬದ್ಧ ಎಂದು ಉಮೇಶ್ ಕತ್ತಿ ಸ್ಪಷ್ಟಣೆ ನೀಡಿದರು.

 

Please follow and like us:
error