fbpx

ನಾನು ಪಾಂಡವನೂ ಅಲ್ಲ, ಕೌರವನೂ ಅಲ್ಲ, ಐಯಾಮ್ ಸಿದ್ದರಾಮಯ್ಯ ಓನ್ಲಿ-ಸಿದ್ದರಾಮಯ್ಯ

ಸಚಿವ ಸುಧಾಕರ್ ಗೆ ಟಾಂಗ್ ನೀಡಿದ ಸಿದ್ದರಾಮಯ್ಯ

ಕರ್ನಾಟಕದ ಬಿಜೆಪಿ  ನಾಯಕರಿಗೆ ರಾಮಾಯಣ-ಮಹಾಭಾರತ ಎಂದರೆ ರಾಜಕೀಯ ಅಸ್ತ್ರಗಳು. ನಮಗೆ‌ ಅದು ಬದುಕಿನ‌ ಪಾಠದ ಪುಸ್ತಕಗಳು.

ಪ್ರಸ್ತಾವನೆ,ಅನುಮೋದನೆ ಮಂಜೂರಾತಿ, ಖರ್ಚು-ವೆಚ್ಚ ಗೊತ್ತಿದ್ದೇ ನಾನು 13 ಬಜೆಟ್ ಮಂಡಿಸಿದ್ದು. ಆದರೆ ಈ ಸಚಿವ ಸುಧಾಕರ್

ಯಾರು? ಹೇಗೆ ಎಂದು ಸರಿಯಾಗಿ ಗೊತ್ತಿರಲಿಲ್ಲ. ಅವರಿಗೆ ಟಿಕೆಟ್ ನೀಡಿದ್ದೇ ತಪ್ಪಾಯಿತು. ಮೊದಲ ಬಾರಿ ಸಚಿವರಾದವರು 13 ಬಾರಿ ಬಜೆಟ್ ಮಂಡಿಸಿದ್ದವರಿಗೆ‌ ಪಾಠ ಹೇಳ್ತಾರೆ. ಸಮ್ಮಿಶ್ರ ಸರ್ಕಾರ ಇದ್ದಾಗ ಖರೀದಿ ಮಾಡಿರುವ ವೆಂಟಿಲೇಟರ್ ಗಳ ಬಗ್ಗೆ ಅವರು ಆರೋಪ‌‌ ಮಾಡಿದ್ದಾರೆ. ನಾನು ಆಗ ಸರ್ಕಾರದಲ್ಲಿ ಇರಲಿಲ್ಲ. ದಾಖಲೆಗಳು ಅವರ ಬಳಿಯೇ ಇದೆ ಅಲ್ಲವೇ ? ಆ ಬಗ್ಗೆಯೂ ತನಿಖೆ ಮಾಡಿಸಿ ಸತ್ಯ ಹೊರತನ್ನಿ. ಮಹಾಭಾರತದ ಪಾಂಡವರು- ಕೌರವರ ಚರ್ಚೆ ಈಗ ಯಾಕೆ? ದ್ವಾಪರ ಯುಗದಲ್ಲಿ ನಡೆದಿದ್ದನ್ನು ಈಗ ಎಳೆದು ತರುವುದೇಕೆ ? ಅವರು ಕೌರವರಾಗಲೂ ಅರ್ಹತೆ ಇಲ್ಲದ ದುಷ್ಟರು. ನಾನು ನನ್ನನ್ನು ಬೇರೆಯವರಿಗೆ ಹೋಲಿಕೆ ಮಾಡಿಕೊಳ್ಳುವುದಿಲ್ಲ. ನಾನು ಪಾಂಡವನೂ ಅಲ್ಲ, ಕೌರವನೂ ಅಲ್ಲ, ಐಯಾಮ್ ಸಿದ್ದರಾಮಯ್ಯ ಓನ್ಲಿ. ಈ

ಕರ್ನಾಟಕದ ಬಿಜೆಪಿ  ನಾಯಕರಿಗೆ ರಾಮಾಯಣ-ಮಹಾಭಾರತ ಎಂದರೆ ರಾಜಕೀಯ ಅಸ್ತ್ರಗಳು. ನಮಗೆ‌ ಅದು ಬದುಕಿನ‌ ಪಾಠದ ಪುಸ್ತಕಗಳು. ಅದರಿಂದ ನಾವು ನಿತ್ಯ‌ ಒಳ್ಳೆಯದನ್ನು ಕಲಿಯುತ್ತೇವೆ. ಇವರಿಗೆ ಕೌರವರದ್ದೇ ಧ್ಯಾನ,‌ ಅವರವರ ಯೋಗ್ಯತೆಗೆ ತಕ್ಕ ಹಾಗೆ. ಕೊರೊನಾ ನಿಯಂತ್ರಣದ ವಿಚಾರದಲ್ಲಿ ರಾಜಕೀಯ ಮಾಡುವ ಉದ್ದೇಶ ನಮಗಿಲ್ಲ, ಅದರ ಅಗತ್ಯವೂ ಇಲ್ಲ. ಇದಕ್ಕಾಗಿಯೇ ಇವರ ಇತರ ಕರ್ಮ‌ಕಾಂಡಗಳ ಬಗ್ಗೆ ನಾವು ಈಗ ಮಾತನಾಡುತ್ತಿಲ್ಲ. ಆದರೆ ಕೊರೊನಾ ಸಂಬಂಧಿತ ಭ್ರಷ್ಟಾಚಾರಕ್ಕೆ ಜನ ಬಲಿಯಾಗುತ್ತಿರುವುದನ್ನು ನೋಡುತ್ತಾ ಸುಮ್ಮನಿರುವುದು ಹೇಗೆ? ನಮ್ಮ ಆರೋಪದಿಂದ ಅಧಿಕಾರಿಗಳ‌ ನೈತಿಕ ಸ್ಥೈರ್ಯ ಕುಸಿಯುತ್ತದೆ‌ ಎಂದು

ಕರ್ನಾಟಕದ ಬಿಜೆಪಿ ಸಚಿವರು ಕಣ್ಣೀರು ಹಾಕಿದ್ದಾರೆ. ಬಿಬಿಎಂಪಿ ಆಯುಕ್ತರ ಏಕಾಏಕಿ ವರ್ಗಾವಣೆ ಯಾಕಾಯ್ತು? ಯಾವ ಸಚಿವರ ಭ್ರಷ್ಟಾಚಾರ ಮುಚ್ಚಿಡಲು ಅವರನ್ನು ಬಲಿ‌ಕೊಟ್ಟಿರಿ? ಇದರಿಂದ ಅಧಿಕಾರಿಗಳ ನೈತಿಕ ಸ್ಥೈರ್ಯ ಕುಸಿಯಲಿಲ್ಲವೇ? ನಮ್ಮ ಆರೋಪಕ್ಕೆ ಪ್ರತಿಕ್ರಿಯಿಸಲು ಐವರು ಸಚಿವರು ಓಡೋಡಿ ಬಂದಿದ್ದಾರೆ. ‘ಮಾಡಿದ್ದಿರಲ್ಲಾ, ಅನುಭವಿಸಿ’ ಎಂದು

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ ಗದರಿಸಿ ಕಳಿಸಿರಬಹುದು. ಈ ಒಗ್ಗಟ್ಟನ್ನು ಕೊರೊನಾ ನಿಯಂತ್ರಣದಲ್ಲಿ ತೋರಿಸಿದ್ದರೆ ಪರಿಸ್ಥಿತಿ ಈಗಿನಂತೆ ಕೈ ಮೀರಿ ಹೋಗುತ್ತಿರಲಿಲ್ಲ  ಎಂದು ಮಾಜಿ ಸಿಎಂ ವಿಪಕ್ಷ ನಾಯಕ ಸಿದ್ದರಾಮಯ್ಯ ಸರಕಾರದ ವಿರುದ್ದ ಹರಿಹಾಯ್ದಿದ್ದಾರೆ.

Please follow and like us:
error
error: Content is protected !!