ನಾಗರಿಕ ಬಂದೂಕು ತರಬೇತಿಗಾಗಿ ಅರ್ಜಿ ಆಹ್ವಾನ

ಕೊಪ್ಪಳ  : ಕೊಪ್ಪಳ ಜಿಲ್ಲಾ ಪೊಲೀಸ್ ವತಿಯಿಂದ ನಾಗರಿಕರಿಗಾಗಿ ಬಂದೂಕು ತರಬೇತಿಯನ್ನು ಹಮ್ಮಿಕೊಂಡಿದ್ದು, ಜಿಲ್ಲೆಯ ಆಸಕ್ತ ನಾಗರಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ನಾಗರಿಕರಿಗಾಗಿ ಬಂದೂಕು ತರಬೇತಿಯನ್ನು ಮಾರ್ಚ್. 01 ರಿಂದ 07 ರವರೆಗೆ ಬೆಳಿಗ್ಗೆ 07 ಗಂಟೆಯಿAದ 09 ಗಂಟೆಯವರೆಗೆ ಕೊಪ್ಪಳ ನಗರದ ಜಿಲ್ಲಾ ಸಶಸ್ತç ಮೀಸಲು ಪೊಲೀಸ್ ಮೈದಾನದಲ್ಲಿ ಆಯೋಜಿಸಲಾಗಿದ್ದು, ಈ ತರಬೇತಿಯನ್ನು ಪಡೆಯಲಿಚ್ಛಿಸುವ ನಾಗರಿಕರು ಅರ್ಜಿಗಳನ್ನು ತಮ್ಮ ಸಮೀಪದ ಪೊಲೀಸ್ ಠಾಣೆಗಳಲ್ಲಿ ಫೆ. 15 ರಿಂದ 24 ರವರೆಗೆ ಪಡೆಯಬಹುದು.
ಅರ್ಜಿ ಸಲ್ಲಿಸಲು ಫೆ. 25 ಕೊನೆಯ ದಿನವಾಗಿದ್ದು, 21 ವರ್ಷ ಮೇಲ್ಪಟ್ಟ ಅಭ್ಯರ್ಥಿಗಳಿಗೆ ಮಾತ್ರ ತರಬೇತಿ ನೀಡಲಾಗುವುದು. ಭಾಗವಹಿಸುವ ನಾಗರಿಕರು ನಿಯಮಿತವಾಗಿ ತರಬೇತಿಗೆ ಹಾಜರಾಗುವುದು ಹಾಗೂ ಶಿಸ್ತು ಪಾಲನೆಯನ್ನು ಮಾಡಬೇಕು. ತರಬೇತಿಯಲ್ಲಿ ಅಶಿಸ್ತು ಕಂಡು ಬಂದಲ್ಲಿ ಅಂಥವರನ್ನು ತರಬೇತಿಯಿಂದ ವಜಾ ಮಾಡಲಾಗುವುದು. ತರಬೇತಿ ಅಭ್ಯರ್ಥಿಗಳು ಕಡ್ಡಾಯವಾಗಿ ಶೂಗಳನ್ನು ಧರಿಸಬೇಕು. ಲುಂಗಿ, ಪಂಚೆ, ಧರಿಸಲು ಅವಕಾಶ ಇರುವುದಿಲ್ಲ. ನಿಗದಿತ ಅರ್ಜಿ ಶುಲ್ಕ ಮತ್ತು ಮದ್ದುಗುಂಡುಗಳ ಶುಲ್ಕವನ್ನು ಭರಿಸಬೇಕು. ದೃಷ್ಟಿದೋಷ ಹೊಂದಿರಬಾರದು. ಮಾನಸಿಕ ಮತ್ತು ದೈಹಿಕವಾಗಿ ಸದೃಢವಾಗಿರುವ ಬಗ್ಗೆ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಬೇಕು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಯಾವುದೇ ನಾಗರಿಕರ ಅರ್ಜಿಯನ್ನು ತಿರಸ್ಕರಿಸುವ ಅಥವಾ ಪುರಸ್ಕರಿಸುವ ಅಧಿಕಾರ ಹೊಂದಿರುತ್ತಾರೆ. ಅಭ್ಯರ್ಥಿಗಳು ತರಬೇತಿ ವೇಳೆ ಸಣ್ಣ ನೋಟ್ ಪುಸ್ತಕ ಮತ್ತು ಪೆನ್ನು ತರಬೇಕು. ತರಬೇತಿ ಕೊನೆಯಲ್ಲಿ ಪರೀಕ್ಷೆ ನಡೆಸಿ ಉತ್ತೀರ್ಣರಾದವರಿಗೆ ಪ್ರಮಾಣ ಪತ್ರ ನೀಡಲಾಗುವುದು. ಶಿಬಿರಕ್ಕೆ ಹಾಜರಾಗುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ನಿಯಮಿತವಾಗಿ ಸ್ಯಾನಿಟೈಜರ್ ಬಳಕೆ ಮಾಡಬೇಕು. ಒಬ್ಬರಿಂದ ಒಬ್ಬರು ಕನಿಷ್ಟ 3 ಅಡಿ ಅಂತರವನ್ನು ಕಾಯ್ದುಕೊಳ್ಳುವುದು ಕಡ್ಡಾಯ. ಅಭ್ಯರ್ಥಿಗಳು ಕಡ್ಡಾಯವಾಗಿ ಕೋವಿಡ್-19 ಟೆಸ್ಟ್ ಮಾಡಿಸಿಕೊಂಡು ವರದಿಯೊಂದಿಗೆ ತರಬೇತಿಗೆ ಹಾಜರಾಗಬೇಕು. ಇಲ್ಲವಾದಲ್ಲಿ ತರಬೇತಿಗೆ ತೆಗೆದುಕೊಳ್ಳಲಾಗುವುದಿಲ್ಲ.
ಆಸಕ್ತ ನಾಗರಿಕರು 3 ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳನ್ನು, ಆಧಾರ್ ಕಾರ್ಡ, ಮತದಾರರ ಗುರುತಿನ ಚೀಟಿಯೊಂದಿಗೆ ನಿಗದಿತ ದಿನಾಂಕದೊಳಗೆ ತಮ್ಮ ಸಮೀಪದ ಪೊಲೀಸ್ ಠಾಣೆಗಳಲ್ಲಿ ಅರ್ಜಿಯನ್ನು ಸಲ್ಲಿಸಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್   ತಿಳಿಸಿದ್ದಾರೆ.

Please follow and like us:
error