ನವೆಂಬರ್ 17 ಪದವಿ, ಎಂಜಿನಿಯರಿಂಗ್ ಕಾಲೇಜು ಆರಂಭಕ್ಕೆ ನಿರ್ಧಾರ

ನವೆಂಬರ್ 17 ರಂದು ಕಾಲೇಜುಗಳ ಆರಂಭಕ್ಕೆ ನಿರ್ಧರಿಸಲಾಗಿದೆ.   ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದಲ್ಲಿ ಕಾಲೇಜು ಆರಂಭದ ಬಗ್ಗೆ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥನಾರಾಯಣ ಹೇಳಿದ್ಧಾರೆ.

ಪದವಿ, ಇಂಜಿನಿಯರಿಂಗ್, ಸ್ನಾತಕೋತ್ತರ ಹಾಗೂ ಡಿಪ್ಲೋಮ ಕಾಲೇಜುಗಳ ಪುನರಾರಂಭ ಕುರಿತು ಎಲ್ಲ ಇಲಾಖೆಗಳ ಜತೆ ಚರ್ಚಿಸಲಾಗಿದೆ. ತರಗತಿಗಳಿಗೆ ಹಾಜರಾಗಲು ವಿದ್ಯಾರ್ಥಿಗಳಿಗೆ ಆಯ್ಕೆ ಇರಲಿದ್ದು, ಆನ್ಲೈನ್ ಹಾಗೂ ಕ್ಲಾಸ್ ರೂಂ ತರಗತಿಗಳು ಸಂಯೋಜಿತವಾಗಿ ಇರಲಿವೆ. ಕ್ಲಾಸ್ ರೂಂಗೆ ಬರಬೇಕಾದರೆ ಪೋಷಕರಿಂದ ಪರವಾನಗಿ ಪತ್ರ ತರಬೇಕು. ಪ್ರಾಕ್ಟಿಕಲ್ ತರಗತಿಗಳ ಆರಂಭಕ್ಕೆ ಮೊದಲ ಆದ್ಯತೆ ನೀಡಲಾಗುವುದು. UGC ಯ ಮಾರ್ಗಸೂಚಿಯ ಅನುಗುಣವಾಗಿ ಎಲ್ಲಾ ಸುರಕ್ಷಾ ಕ್ರಮಗಳನ್ನು ಅನುಸರಿಸಲಾಗುವುದು. ಎಲ್ಲಾ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ ಹಾಗೂ ಪ್ರತಿ ಕಾಲೇಜಿನಲ್ಲಿ ಇದಕ್ಕಾಗಿ ಟಾಸ್ಕ್ ಫೋರ್ಸ್ ರಚಿಸಲಾಗುವುದು ಎಂದು ತಿಳಿಸಿದ್ದಾರೆ

Please follow and like us:
error