ನವೆಂಬರ್ ಒಂದಕ್ಕೆ ವಿಕ್ಷಿಪ್ತ ಕಿರುಚಿತ್ರ ಬಿಡುಗಡೆ


ಗೊಂಡಬಾಳ ಮೂವಿ ಮೇಕರ್‍ಸ್ ಅರ್ಪಿಸುವ, ಎಸ್ ಎನ್ ಸಿನಿ ಕ್ರಿಯೇಷನ್ಸ್‌ರವರ ಪ್ರಥಮ ಕಾಣಿಕೆಯಾದ, ಸೈಕಾಲಾಜಿಕಲ್ ಥ್ರಿಲ್ಲರ್ ಕಥಾಹಂದರವುಳ್ಳ ‘ವಿಕ್ಷಿಪ್ತ’ ಕಿರುಚಿತ್ರವು ಇದೇ ನವೆಂಬರ್ ಒಂದು ಕರ್ನಾಟಕ ರಾಜ್ಯೋತ್ಸವ ದಿನದಂದು ಕೊಪ್ಪಳದ ಸಿಟಿ ಟಿವಿ ಚಾನಲ್‌ನಲ್ಲಿ ನೇರ ಪ್ರಸಾರದಲ್ಲಿ ಬಿಡುಗಡೆಗೊಳ್ಳಲಿದೆ. ಗೊಂಡಬಾಳ ಗ್ರಾಮದ ಸ್ಥಳೀಯ ಹುಡುಗರು ಸೇರಿ ತಯಾರಿಸಿರುವ ಈ ಕಿರುಚಿತ್ರಕ್ಕೆ ಇಸ್ಮಾಯಿಲ್ ತಳಕಲ್ ಕಥೆ, ಚಿತ್ರಕತೆ ಬರೆದು ನಿರ್ದೇಶನ ಮಾಡಿದ್ದಾರೆ. ಮೆಹಬೂಬ ಮಠದರವರ ಪರಿಕಲ್ಪನೆ, ರಮೇಶ್ ಪವಾರ್‌ರವರ ಛಾಯಾಗ್ರಹಣ ಹಾಗೂ ಸಂಕಲನವಿದ್ದರೆ ವೈಶಂಪಾಯನ್‌ರವರು ಹಿನ್ನಲೆ ಧ್ವನಿ ನೀಡಿದ್ದಾರೆ. ಮನೋರೋಗಿಯೊಬ್ಬನ ಸುತ್ತ ಹೆಣೆದುಕೊಂಡಿರುವ ಈ ಕಿರುಚಿತ್ರದ ಚಿತ್ರೀಕರಣವು ಒಂದು ಇಡೀ ರಾತ್ರಿ ಗೊಂಡಬಾಳ ಗ್ರಾಮದ ಗವಿ ಗುಗ್ರಿಯವರ ಪಾನ್‌ಶಾಪ್ ಹಾಗೂ ಅದರ ಸುತ್ತಮುತ್ತಲ ಸ್ಥಳಗಳಲ್ಲಿ ಚಿತ್ರೀಕರಣಗೊಂಡಿದೆ. ಇದೇ ವರ್ಷದ ಜುಲೈ ತಿಂಗಳಲ್ಲಿ ಬಿಡುಗಡೆಗೊಂಡಿದ್ದ ಟ್ರೇಲರ್‌ಗೆ ಬಂದ ಉತ್ತಮ ಪ್ರತಿಕ್ರಿಯೆಗಳಿಂದ ಉತ್ತೇಜಿತರಾಗಿ ಕೆಲವೊಂದು ತಾಂತ್ರಿಕ ಬದಲಾವಣೆಯೊಂದಿಗೆ ಈಗ ಬಿಡುಗಡೆಗೆ ಸಿದ್ಧವಾಗಿದೆ. ವಿಕ್ಷಿಪ್ತ ಕಥೆಯ ಒಂದೆಳೆಯ ಗುಟ್ಟನ್ನೂ ಬಿಟ್ಟುಕೊಡದ ನಿರ್ದೇಶಕರು ನವೆಂಬರ್ ಒಂದರಂದು ಕಿರುಚಿತ್ರವನ್ನು ನೋಡಿ ಹರಸಿ ಎಂದು ಕೇಳಿಕೊಂಡಿದ್ದಾರೆ.

Please follow and like us:
error