ಕೊಪ್ಪಳ ನ. : ಕೊಪ್ಪಳ ಜಿಲ್ಲೆಯ ಸುಪ್ರಸಿದ್ದ ಐತಿಹಾಸಿಕ ತಾಣವಾದ ಆನೆಗುಂದಿ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವ ಸಲುವಾಗಿ ಜಿಲ್ಲಾಡಳಿತದಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರು ತಿಳಿಸಿದ್ದಾರೆ.
ಕರ್ನಾಟಕ ಸರ್ಕಾರದ ಉಪ ಮುಖ್ಯಮಂತ್ರಿಗಳು, ಸಾರಿಗೆ ಮತ್ತು ಕೃಷಿ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷö್ಮಣ ಸಂಗಪ್ಪ ಸವದಿ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ (ಅಕ್ಟೋಬರ್.21) ನಡೆದ ಜಿ.ಪಂ. ಕೆಡಿಪಿ ಸಭೆಯಲ್ಲಿ ಚರ್ಚಿಸಿದಂತೆ ಹಾಗೂ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಸಕ್ಕರೆ ಸಚಿವರಾದ ಸಿ.ಟಿ. ರವಿ ಅವರ ಅಧ್ಯಕ್ಷತೆಯಲ್ಲಿ ಬುಧವಾರದಂದು (ನವೆಂಬರ್.13) ಬೆಂಗಳೂರಿನ ಕನ್ನಡ ಭವನದಲ್ಲಿ ನಡೆದ ಸಭೆಯಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗುಂದಿ ಉತ್ಸವವನ್ನು ಆಚರಣೆ ಮಾಡುವ ಕುರಿತು ಚರ್ಚಿಸಿದಂತೆ ಪ್ರಸಕ್ತ ಸಾಲಿನ (2019-20) ಆನೆಗುಂದಿ ಉತ್ಸವವನ್ನು 2020ರ ಜನವರಿ. 09 ಮತ್ತು 10 ರಂದು ಎರಡು ದಿನಗಳವರೆಗೆ ಆಚರಿಸಲು ಸಲಹೆ ನೀಡಿದ್ದು, ಸಚಿವರ ಸಲಹೆ ಮೇರೆಗೆ ಆನೆಗುಂದಿ ಉತ್ಸವದ ರೂಪುರೇಷೆಗಳ ಕುರಿತು ಜಿಲ್ಲೆಯ ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಸಂಸದರು, ಶಾಸಕರುಗಳೊಂದಿಗೆ ಚರ್ಚಿಸಲಾಗಿದೆ.
ಆನೆಗುಂದಿ ಉತ್ಸವವನ್ನು ವಿಜಯನಗರ ಸಾಮ್ರಾಜ್ಯದ ರಾಜಧಾನಿ ಪ್ರದೇಶಗಳಾದ ಹಂಪಿ, ಆನೆಗುಂದಿ ಐತಿಹಾಸಿಕ ಹಿನ್ನೆಲೆಯಲ್ಲಿ ಹಂಪಿ ಉತ್ಸವದ ಜೊತೆಗೆ ಆಚರಿಸುವುದು ಔಚಿತ್ಯ ಪೂರ್ಣವಾಗಿರುತ್ತದೆ. ಎಲ್ಲರ ಸಲಹೆ ಮೇರೆಗೆ ಆನೆಗುಂದಿ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವ ಸಲುವಾಗಿ ಜಿಲ್ಲೆಯ ಸಾಹಿತಿಗಳು, ಕಲಾಸಕ್ತರು, ಸಾರ್ವಜನಿಕರು, ಜನಪ್ರತಿನಿಧಿಗಳು, ಆನೆಗುಂದಿ ಐತಿಹಾಸಿಕ ಮುಖಂಡರನ್ನೊಳಗೊAಡAತೆ ಚರ್ಚಿಸಿ ಕಾರ್ಯಕ್ರಮದ ವಿವರಗಳನ್ನು ಶೀಘ್ರದಲ್ಲಿ ತಿಳಿಸಲಾಗುವುದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.
ಜನವರಿ. 09 ಮತ್ತು 10 ರಂದು ಆನೆಗುಂದಿ ಉತ್ಸವ ಅರ್ಥಪೂರ್ಣ ಆಚರಣೆಗೆ ಅಗತ್ಯ ಕ್ರಮ : ಪಿ.ಸುನೀಲ್ ಕುಮಾರ್
Please follow and like us: